ಕುಜ ಗೋಚಾರ ಫಲ: ಸಿಂಹ ರಾಶಿಗೆ ಮಂಗಳನ ಪ್ರವೇಶ, ಈ 3 ರಾಶಿಯವರಿಗೆ ಹರಿಯಲಿದೆ ಹಣದ ಮಹಾಪೂರ..! Astrology

ಸಿಂಹ ರಾಶಿಯ ಅಧಿಪತಿ ಸೂರ್ಯನಾಗಿದ್ದು, ಗ್ರಹಗಳ ಈ ವಿಶೇಷ ಸಂಚಾರವು ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವು ಅಪಾರವಾಗಿದೆ. ವಿಶೇಷವಾಗಿ ಈ ಬದಲಾವಣೆಯಿಂದ ಕೆಲವು ನಿರ್ದಿಷ್ಟ ರಾಶಿಗಳ ವೃತ್ತಿಜೀವನ, ವ್ಯಾಪಾರ ಮತ್ತು ಆರ್ಥಿಕ ಸ್ಥಿತಿಯಲ್ಲಿ ಅಭೂತಪೂರ್ವ ಮುನ್ನಡೆ ಕಂಡುಬರಲಿದ್ದು, ಹಣಕಾಸಿನ ಹರಿವು ಹೆಚ್ಚಾಗಲಿದೆ. ಹಾಗಾದರೆ, ರಾಶಿಗಳು ಯಾವುವು ಎಂದು ನಾವೀಗ ತಿಳಿದುಕೊಳ್ಳೋಣ.
Astrology
ಸಾಂದರ್ಭಿಕ ಚಿತ್ರ
Published on: 

Astrology : ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳ ಸೇನಾಪತಿ ಎಂದು ಕರೆಯಲ್ಪಡುವ ಮಂಗಳ ಗ್ರಹವು ಸಾಹಸ, ಶೌರ್ಯ, ಧೈರ್ಯ ಮತ್ತು ಬಲದ ಪ್ರತಿಯಾಗಿದೆ. ಅಲ್ಲದೆ, ಮೇಷ ಮತ್ತು ವೃಶ್ಚಿಕ ರಾಶಿಗಳ ಅಧಿಪತಿಯಾಗಿರುವ ಕುಜನು ಒಂದು ರಾಶಿಯಲ್ಲಿ ಸುಮಾರು 45 ದಿನಗಳ ಕಾಲ ಸಂಚರಿಸುತ್ತಾನೆ. ಪ್ರಸ್ತುತ ಕರ್ಕಾಟಕ ರಾಶಿಯಲ್ಲಿರುವ ಮಂಗಳ ಗ್ರಹವು ಮುಂಬರುವ ನವೆಂಬರ್ 12 ರಂದು ಸಿಂಹ ರಾಶಿಗೆ ಪ್ರವೇಶಿಸಲಿದೆ.

ಸಿಂಹ ರಾಶಿಯ ಅಧಿಪತಿ ಸೂರ್ಯನಾಗಿದ್ದು, ಗ್ರಹಗಳ ಈ ವಿಶೇಷ ಸಂಚಾರವು ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವು ಅಪಾರವಾಗಿದೆ. ವಿಶೇಷವಾಗಿ ಈ ಬದಲಾವಣೆಯಿಂದ ಕೆಲವು ನಿರ್ದಿಷ್ಟ ರಾಶಿಗಳ ವೃತ್ತಿಜೀವನ, ವ್ಯಾಪಾರ ಮತ್ತು ಆರ್ಥಿಕ ಸ್ಥಿತಿಯಲ್ಲಿ ಅಭೂತಪೂರ್ವ ಮುನ್ನಡೆ ಕಂಡುಬರಲಿದ್ದು, ಹಣಕಾಸಿನ ಹರಿವು ಹೆಚ್ಚಾಗಲಿದೆ. ಹಾಗಾದರೆ, ರಾಶಿಗಳು ಯಾವುವು ಎಂದು ನಾವೀಗ ತಿಳಿದುಕೊಳ್ಳೋಣ.

Also Read
ಕರ್ಮದಾತ ಶನಿಯ ಸಂಚಾರ: ಫೆಬ್ರವರಿವರೆಗೆ ಈ 5 ರಾಶಿಗಳ ಜಾತಕದಲ್ಲಿ ರಾಜಯೋಗ, ಮುಟ್ಟಿದ್ದೆಲ್ಲ ಹಸಿರು, ಧನಲಾಭ ಖಚಿತ! Astrology
Astrology

ಮೇಷ ರಾಶಿ

Aries Zodiac Signs

ಮಂಗಳನ ಈ ರಾಶಿ ಬದಲಾವಣೆಯ ಪ್ರಭಾವವು ಮೇಷ ರಾಶಿಯವರ ಜೀವನದಲ್ಲಿ ಅತ್ಯಂತ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಈ ರಾಶಿಯವರಿಗೆ ಕುಜನು ಐದನೇ ಮನೆಯಲ್ಲಿ ಸಂಚರಿಸುವುದರಿಂದ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಉದ್ಯೋಗದಲ್ಲಿರುವವರು ತಮ್ಮ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಹೊಸ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಇದು ಸಕಾಲವಾಗಿದೆ. ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ವಿಸ್ತರಿಸಲು ಅತ್ಯುತ್ತಮ ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ. ಆದಾಯದಲ್ಲಿ ಗಣನೀಯ ಏರಿಕೆ ಕಂಡುಬಂದರೂ ಸಹ, ಅನಾವಶ್ಯಕ ಖರ್ಚು-ವೆಚ್ಚಗಳನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯವಾಗಿದೆ. ಒಟ್ಟಾರೆಯಾಗಿ ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸಕಾರಾತ್ಮಕವಾದ ದೊಡ್ಡ ಸುಧಾರಣೆಯನ್ನು ನೀವು ಕಾಣಬಹುದಾಗಿದೆ.

ವೃಶ್ಚಿಕ ರಾಶಿ

Scorpio

ವೃಶ್ಚಿಕ ರಾಶಿಯವರಿಗೆ ಮಂಗಳನ ಈ ಸಂಚಾರವು ಅತ್ಯಂತ ಮಂಗಳಕರ ಫಲಗಳನ್ನು ಕರುಣಿಸಲಿದೆ. ನಿಮ್ಮ ರಾಶಿಯ ಅಧಿಪತಿಯಾದ ಕುಜನು ಹತ್ತನೇ ಮನೆಗೆ ಪ್ರವೇಶಿಸುವುದರಿಂದ ವೃತ್ತಿಜೀವನದಲ್ಲಿ ಮುನ್ನಡೆ ಸಾಧಿಸಲು ಹೊಸ ಹಾಗೂ ಸುವರ್ಣ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಬಹಳ ದಿನಗಳಿಂದ ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಮುಖ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಇದರೊಂದಿಗೆ ಆರ್ಥಿಕವಾಗಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು, ಹಣದ ಹರಿವು ಸರಾಗವಾಗಿರಲಿದೆ. ಕಾರ್ಯಕ್ಷೇತ್ರದಲ್ಲಿ ತಾಳ್ಮೆಯಿಂದ ಕೆಲಸ ಮಾಡುವುದು ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳುವುದು ನಿಮಗೆ ಭರ್ಜರಿ ಯಶಸ್ಸು ಹಾಗೂ ಧನಲಾಭವನ್ನು ತಂದುಕೊಡಲಿದೆ.

ಸಿಂಹ ರಾಶಿ

Leo Zodiac Signs

ಸಿಂಹ ರಾಶಿಯವರಿಗೆ ಮಂಗಳ ಗ್ರಹವು ನೇರವಾಗಿ ಮೊದಲನೇ ಮನೆಗೆ ಪ್ರವೇಶಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳು ದುಪ್ಪಟ್ಟಾಗಲಿವೆ. ಉದ್ಯೋಗದಲ್ಲಿರುವವರು ತಮ್ಮ ಕಚೇರಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಮೂಲಕ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವುದಲ್ಲದೆ, ಬಡ್ತಿ ಅಥವಾ ಉನ್ನತ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ವ್ಯಾಪಾರ ಮತ್ತು ವ್ಯವಹಾರ ಮಾಡುವವರಿಗೆ ಹೊಸ ಒಪ್ಪಂದಗಳು ಲಾಭ ತಂದುಕೊಡಲಿವೆ ಹಾಗೂ ಬಿಸಿನೆಸ್ ವಿಸ್ತರಣೆಗೆ ವಿಶೇಷ ಅವಕಾಶಗಳು ದೊರೆಯಲಿವೆ. ಆದಾಗ್ಯೂ, ಯಾವುದೇ ಹೊಸ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆಯಿಂದ ಆಳವಾದ ಸಂಶೋಧನೆ ಮತ್ತು ಯೋಚನೆ ಮಾಡುವುದು ಉತ್ತಮ ಫಲ ನೀಡುತ್ತದೆ.

Also Read
ಆಶ್ವಯುಜ ಮಾಸದಲ್ಲಿ ಒಂದಲ್ಲ, ಎರಡಲ್ಲ ಮೂರು ರಾಜಯೋಗ: ಕಾಲಿಟ್ಟಲೆಲ್ಲ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣದ ಸುಗ್ಗಿ! Astrology
Astrology

ಗ್ರಹಗಳ ಸೇನಾಪತಿಯ ಸ್ಥಾನವಿರುವ ಮಂಗಳನ ಈ ಸಂಚಾರವು ಕೇವಲ ವೃತ್ತಿಜೀವನಕ್ಕಷ್ಟೇ ಅಲ್ಲದೆ, ವೈಯಕ್ತಿಕ ಜೀವನದಲ್ಲೂ ಅನೇಕ ಧನಾತ್ಮಕ ಪರಿಣಾಮಗಳನ್ನು ಬೀರಲಿದೆ. ಉದ್ಯೋಗದಲ್ಲಿ ಹೊಸ ಗುರಿಗಳನ್ನು ತಲುಪಲು ಉತ್ಸಾಹವು ಹೆಚ್ಚಾಗಲಿದ್ದು, ಕಷ್ಟಪಟ್ಟು ಕೆಲಸ ಮಾಡುವವರಿಗೆ ತಕ್ಕ ಪ್ರತಿಫಲ ದೊರೆಯಲಿದೆ. ಹಣಕಾಸಿನ ಮುಕಾಸರಿಗಾಗಿ ಪರದಾಡುತ್ತಿದ್ದವರಿಗೆ ಈ ಅವಧಿಯು ದೊಡ್ಡ ನಿರಾಳತೆಯನ್ನು ತರಲಿದೆ. ವೃತ್ತಿಪರ ಹಾಗೂ ಆರ್ಥಿಕ ರಂಗದಲ್ಲಿ ಧನಾತ್ಮಕ ಸ್ಪಂದನೆ ದೊರೆಯುವುದರಿಂದ ಕುಟುಂಬದಲ್ಲಿ ಸಂತಸದ ವಾತಾವರಣ ನೆಲೆಸಲಿದೆ ಮತ್ತು ನಿಮ್ಮ ಆರ್ಥಿಕ ಭದ್ರತೆಯು ಇನ್ನಷ್ಟು ಬಲಗೊಳ್ಳಲಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕುಜನ ಈ ಸಿಂಹ ರಾಶಿ ಪ್ರವೇಶವು ಎಲ್ಲಾ ರಾಶಿಗಳ ಮೇಲೆ ವಿಭಿನ್ನ ಪ್ರಭಾವಗಳನ್ನು ಬೀರಿದರೂ, ಮೇಷ, ವೃಶ್ಚಿಕ ಮತ್ತು ಸಿಂಹ ರಾಶಿಯವರಿಗೆ ಇದು ಸುವರ್ಣ ಕಾಲವೆಂದೇ ಹೇಳಬಹುದು. ವೃತ್ತಿ ಹಾಗೂ ಆರ್ಥಿಕ ದೃಷ್ಟಿಕೋನದಿಂದ ಈ ರಾಶಿಗಳ ಜಾತಕರು ಅಪಾರ ಲಾಭವನ್ನು ಮತ್ತು ಧನವೃದ್ಧಿಯನ್ನು ಕಾಣಲಿದ್ದಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net