ಆಶ್ವಯುಜ ಮಾಸದಲ್ಲಿ ಒಂದಲ್ಲ, ಎರಡಲ್ಲ ಮೂರು ರಾಜಯೋಗ: ಕಾಲಿಟ್ಟಲೆಲ್ಲ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣದ ಸುಗ್ಗಿ! Astrology

ಸೂರ್ಯ ಮತ್ತು ಬುಧರ ಸಂಯೋಗದಿಂದ 'ಬುಧಾದಿತ್ಯ ರಾಜಯೋಗ', ಸೂರ್ಯ ಮತ್ತು ಶುಕ್ರರ ಸಂಯೋಗದಿಂದ 'ಶುಕ್ರಾದಿತ್ಯ ರಾಜಯೋಗ' ಹಾಗೂ ಸೂರ್ಯ, ಬುಧ ಮತ್ತು ಶುಕ್ರರ ಒಮ್ಮುಖದಿಂದ 'ತ್ರಿಗೃಹ ಯೋಗ' ರೂಪುಗೊಳ್ಳುತ್ತಿದೆ. ಈ ಮೂರು ಮಹಾಯೋಗಗಳ ಪ್ರಭಾವದಿಂದಾಗಿ ಯಾವೆಲ್ಲಾ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
Astrology
ಸಾಂದರ್ಭಿಕ ಚಿತ್ರ
Published on: 

Astrology : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜನಾದ ಸೂರ್ಯ ದೇವನ ಸಂಚಾರವು ಎಲ್ಲಾ ರಾಶಿಗಳ ಮೇಲೆ ಅಗಾಧವಾದ ಪ್ರಭಾವ ಬೀರುತ್ತದೆ. ಹೌದು, ಭಾದ್ರಪದ ಮಾಸದ ನಂತರ ಬರುವ ಆಶ್ವಯುಜ ಮಾಸದಲ್ಲಿ ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವುದರೊಂದಿಗೆ ಅದ್ಭುತವಾದ ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ.

ಸೂರ್ಯ ಮತ್ತು ಬುಧರ ಸಂಯೋಗದಿಂದ 'ಬುಧಾದಿತ್ಯ ರಾಜಯೋಗ', ಸೂರ್ಯ ಮತ್ತು ಶುಕ್ರರ ಸಂಯೋಗದಿಂದ 'ಶುಕ್ರಾದಿತ್ಯ ರಾಜಯೋಗ' ಹಾಗೂ ಸೂರ್ಯ, ಬುಧ ಮತ್ತು ಶುಕ್ರರ ಒಮ್ಮುಖದಿಂದ 'ತ್ರಿಗೃಹ ಯೋಗ' ರೂಪುಗೊಳ್ಳುತ್ತಿದೆ. ಈ ಮೂರು ಮಹಾಯೋಗಗಳ ಪ್ರಭಾವದಿಂದಾಗಿ ಯಾವೆಲ್ಲಾ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಸಿಂಹ ರಾಶಿ

Leo Zodiac Signs

ಜ್ಯೋತಿಷ್ಯ ಲೋಕದಲ್ಲಿ ವಿಶೇಷ ಮಹತ್ವ ಪಡೆದಿರುವ ಈ ಆಶ್ವಯುಜ ಮಾಸದಲ್ಲಿ ಸಿಂಹ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಸೂರ್ಯ ದೇವನು ಸಿಂಹ ರಾಶಿಯ 3ನೇ ಮನೆಯಲ್ಲಿ ಸಂಚರಿಸುವುದರಿಂದ ಈ ಅವಧಿಯಲ್ಲಿ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಅಥವಾ ಪೂರ್ಣಗೊಳಿಸಲು ಸಾಧ್ಯವಾಗದಿದ್ದ ಪ್ರಮುಖ ಕಾರ್ಯಗಳನ್ನು ನೀವು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಉದ್ಯೋಗಸ್ಥರಿಗೆ ಈ ತಿಂಗಳು ಅತ್ಯಂತ ಅನುಕೂಲಕರವಾಗಿದ್ದು, ವೃತ್ತಿಜೀವನದಲ್ಲಿ ನಿರೀಕ್ಷಿತ ವೇತನ ಹೆಚ್ಚಳ ಹಾಗೂ ಪದೋನ್ನತಿ ಪಡೆಯುವ ಸುವರ್ಣ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಕಚೇರಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗುವುದಲ್ಲದೆ, ಹೊಸ ಸಾಧನೆಗಳನ್ನು ಮಾಡುವ ಮೂಲಕ ನಿಮ್ಮ ಕ್ಷೇತ್ರದಲ್ಲೇ ವಿಶಿಷ್ಟ ಗುರುತನ್ನು ಮೂಡಿಸುವಿರಿ.

Also Read
ತುಂಬಾ ವರ್ಷಗಳ ಬಳಿಕ ಸಿಂಹ ರಾಶಿಯಲ್ಲಿ ಗುರು-ಕೇತು ಮಹಾಯೋಗ: ಈ 4 ರಾಶಿಗಳಿಗೆ ರಾಜಯೋಗ, ಅನಿರೀಕ್ಷಿತ ಆದಾಯ ಭರಪೂರ! Astrology
Astrology

ತುಲಾ ರಾಶಿ

Libra

ಇನ್ನು ತುಲಾ ರಾಶಿಯವರಿಗೆ ಸೂರ್ಯನ ಈ ರಾಶಿ ಬದಲಾವಣೆಯು ಅಭೂತಪೂರ್ವ ಯಶಸ್ಸನ್ನು ತಂದುಕೊಡಲಿದೆ. ಸೂರ್ಯನು ನೇರವಾಗಿ ನಿಮ್ಮ ಮೊದಲ ಅಂದರೆ ಲಗ್ನ ಭಾವಕ್ಕೆ ಪ್ರವೇಶಿಸುವುದರಿಂದ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ, ಗೌರವ ಮತ್ತು ಸ್ಥಾನಮಾನಗಳು ಗಣನೀಯವಾಗಿ ಹೆಚ್ಚಾಗಲಿವೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಹಾಕಿಕೊಂಡಿರುವ ಗುರಿಗಳನ್ನು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಸಾಧಿಸುವಿರಿ. ವೃತ್ತಿಜೀವನದಲ್ಲಿ ಬರುವ ಸಣ್ಣಪುಟ್ಟ ಬದಲಾವಣೆಗಳು ನಿಮಗೆ ಹೊಸ ಮತ್ತು ಹೆಚ್ಚಿನ ಜವಾಬ್ದಾರಿಗಳನ್ನು ತಂದುಕೊಡಲಿದ್ದು, ನಿಮ್ಮ ಜಾಣ್ಮೆಯಿಂದ ಅವುಗಳನ್ನು ಸಮರ್ಥವಾಗಿ ನಿರ್ವಹಿಸಬಹುದು. ಆದಾಗ್ಯೂ, ದೈನಂದಿನ ಕೆಲಸ ಕಾರ್ಯಗಳಲ್ಲಿ ತುಸು ಎಚ್ಚರಿಕೆ ವಹಿಸುವುದು ಒಳಿತು, ಏಕೆಂದರೆ ಈ ತಿಂಗಳು ನಿಮಗೆ ವ್ಯಾಪಾರದಲ್ಲಿ ಲಾಭ ಗಳಿಸಲು ಮತ್ತು ಆದಾಯವನ್ನು ದ್ವಿಗುಣಗೊಳಿಸಲು ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ.

ಮಕರ ರಾಶಿ

Capricorn Zodiac Signs

ಮಕರ ರಾಶಿಯವರಿಗೆ ಆಶ್ವಯುಜ ಮಾಸ ವೃತ್ತಿ ಮತ್ತು ಆರ್ಥಿಕ ದೃಷ್ಟಿಯಿಂದ ಅದ್ಭುತ ಫಲಗಳನ್ನು ನೀಡಲಿದೆ. ಸೂರ್ಯ ದೇವನು ಮಕರ ರಾಶಿಯ 10ನೇ ಮನೆಯಲ್ಲಿ ಅಂದರೆ ಕರ್ಮ ಸ್ಥಾನದಲ್ಲಿ ಸಂಚರಿಸುವುದರಿಂದ ವೃತ್ತಿ ಜೀವನದಲ್ಲಿ ಅತ್ಯಂತ ಸಕಾರಾತ್ಮಕ ಹಾಗೂ ಶುಭ ಫಲಿತಾಂಶಗಳು ಗೋಚರಿಸಲಿವೆ. ಉದ್ಯೋಗದಲ್ಲಿ ಬಡ್ತಿ ಮತ್ತು ಮುನ್ನಡೆಗೆ ಹೊಸ ದಾರಿಗಳು ತೆರೆದುಕೊಳ್ಳಲಿದ್ದು, ನಿಮ್ಮ ಆರ್ಥಿಕ ಸ್ಥಿತಿಯು ಹಿಂದಿಗಿಂತಲೂ ಹೆಚ್ಚು ಬಲಗೊಳ್ಳಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಮತ್ತು ನಿಮ್ಮ ಚಿಂತೆಗೆ ಕಾರಣವಾಗಿದ್ದ ಪ್ರಮುಖ ಕೆಲಸಗಳು ಈಗ ಸುಲಭವಾಗಿ ನೆರವೇರಲಿವೆ. ಕೋರ್ಟ್-ಕಚೇರಿ ಅಥವಾ ಕಾನೂನು ಜಂಜಾಟದ ವಿಷಯಗಳಲ್ಲಿ ನಿಮಗೆ ಅನುಕೂಲಕರವಾದ ತೀರ್ಪುಗಳು ಅಥವಾ ಸಕಾರಾತ್ಮಕ ಫಲಿತಾಂಶಗಳು ಬರುವ ಬಲವಾದ ಸಾಧ್ಯತೆಗಳಿವೆ.

Also Read
ಈ ಮೂರು ರಾಶಿಯ ಮಹಿಳೆಯರು ತಮ್ಮ ಪರಿಶ್ರಮದಿಂದ ರಾಯಲ್​ ಲೈಫ್​ ಲೀಡ್​ ಮಾಡ್ತಾರಂತೆ! ನಿಮ್ದೂ ಇದೇ ರಾಶಿನಾ? Zodiac Signs
Astrology

ಈ ಮೂರು ಪ್ರಮುಖ ರಾಜಯೋಗಗಳ ಸಂಯೋಗದಿಂದ ಈ ರಾಶಿಗಳ ಜನರಿಗೆ ವೃತ್ತಿಪರ ಹಾಗೂ ವೈಯಕ್ತಿಕ ಬದುಕಿನಲ್ಲಿ ದೊಡ್ಡ ತಿರುವು ಸಿಗಲಿದೆ. ದೀರ್ಘಕಾಲದ ಕಷ್ಟ ಕಾರ್ಪಣ್ಯಗಳು ದೂರಾಗಿ, ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದರೊಂದಿಗೆ ಆರ್ಥಿಕವಾಗಿ ಸದೃಢರಾಗಲು ಈ ಕಾಲಘಟ್ಟವು ಅತ್ಯಂತ ಪ್ರಶಸ್ತವಾಗಿದೆ. ವಿಶೇಷವಾಗಿ ಭವಿಷ್ಯದ ದೃಷ್ಟಿಯಿಂದ ಮಹತ್ವದ ಮತ್ತು ದೂರಗಾಮಿ ನಿರ್ಧಾರಗಳನ್ನು ಕೈಗೊಳ್ಳಲು ಇದು ಸಕ್ಕತ್ ಸೂಕ್ತವಾದ ಸಮಯವಾಗಿದೆ.

ಆಶ್ವಯುಜ ಮಾಸದಲ್ಲಿ ಗೋಚರಿಸುವ ಈ ಅಪರೂಪದ ಗ್ರಹಗಳ ಸಂಚಾರವು ಸಿಂಹ, ತುಲಾ ಮತ್ತು ಮಕರ ರಾಶಿಯವರ ಪಾಲಿಗೆ ನಿಜಕ್ಕೂ ಸುವರ್ಣ ಕಾಲವೆಂದೇ ಹೇಳಬಹುದು. ಜ್ಯೋತಿಷ್ಯ ಊಹೆಯಂತೆ ಈ ರಾಶಿಯವರು ತಮ್ಮ ಕಠಿಣ ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವದಿಂದ ಜೀವನದಲ್ಲಿ ಅತ್ಯುನ್ನತ ಮಟ್ಟವನ್ನು ತಲುಪಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಅದೃಷ್ಟದ ದಿನಗಳನ್ನು ಸಮರ್ಥವಾಗಿ ಬಳಸಿಕೊಂಡು ನಿಮ್ಮ ಜೀವನವನ್ನು ಮತ್ತಷ್ಟು ಸುಂದರವಾಗಿಸಿಕೊಳ್ಳಿ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net