Nitya Bhavishya | ನಿತ್ಯಭವಿಷ್ಯ 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಂದು ಕೊಟ್ಟ ಹಣ ತಿರುಗಿ ಬರಲಿದೆ

ಮೇಷ: ಮಹಿಳೆಯರಿಗೆ ವಸ್ತ್ರಾಭರಣ ಲಾಭ. ಹೂವು ಹಣ್ಣು ವ್ಯವಹಾರದಲ್ಲಿ ಉತ್ತಮ ಆದಾಯ. ಕಿರುಚಿತ್ರ ನಿರ್ದೇಶಕರಿಗೆ ಶುಭದಿನ. ಶುಭಸಂಖ್ಯೆ: 8
ವೃಷಭ: ನ್ಯಾಯಾಲಯದ ಕೆಲಸ ಶ್ರೀಘ್ರಗತಿಯಲ್ಲಿ ಮುಗಿಯಲಿದೆ. ಕೊಟ್ಟ ಹಣ ತಿರುಗಿ ಬರಲಿದೆ. ಇಷ್ಟ ದೇವರನ್ನು ಭಕ್ತಿಯಿಂದ ಪೂಜಿಸಿ. ಶುಭಸಂಖ್ಯೆ: 2
ಮಿಧುನ: ವಿದೇಶದಲ್ಲಿರುವ ಮಕ್ಕಳಿಂದ ಶುಭ ವಾರ್ತೆ ಬರಲಿದೆ. ಸುಗಮ ಸಂಗೀತ ಕಲಾವಿದರಿಗೆ ವಿದೇಶ ಪ್ರವಾಸದ ಅವಕಾಶ. ಶುಭಸಂಖ್ಯೆ: 8
ಕಟಕ: ಸೌಂದರ್ಯ ವರ್ಧಕ ತಯಾರಕರಿಗೆ ಲಾಭ. ನೂತನ ನಿವೇಶನ ಖರೀದಿಗೆ ನಿರ್ಧಾರ. ಉದ್ಯಮಿ ಮಹಿಳೆಯರಿಗೆ ಉತ್ತಮ ಲಾಭ. ಶುಭಸಂಖ್ಯೆ: 5
ಸಿಂಹ: ಜೇನು ಮತ್ತು ರೇಷ್ಮೆ ಕೃಷಿಯಲ್ಲಿ ಮಧ್ಯಮ ಲಾಭ. ಮಗಳ ವಿವಾಹದ ವಿಷಯದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 3
ಕನ್ಯಾ: ಟೆಂಡರ್​ನಲ್ಲಿ ಲಾಭ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಹೊಸ ವ್ಯವಹಾರ ಕುದುರಲಿದೆ. ಯುವತಿಯರಿಗೆ ವಿವಾಹ ಯೋಗ. ಶುಭಸಂಖ್ಯೆ:6
ತುಲಾ: ಹೊಸ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುವಿರಿ. ಉನ್ನತ ವಿದ್ಯಾಭ್ಯಾಸದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಿರಿಕ್ಷೀತ ಪ್ರಗತಿ. ಶುಭಸಂಖ್ಯೆ:2
ವೃಶ್ಚಿಕ: ಸಹೋದ್ಯೋಗಿಗಳ ನೆರವಿನಿಂದ ಜವಾಬ್ದಾರಿಯ ಯಶಸ್ವಿ ನಿರ್ವಹಣೆ. ಔಷಧ ವ್ಯಾಪಾರದಲ್ಲಿ ಲಾಭ. ಚರ್ಮದ ಸಮಸ್ಯೆ. ಶುಭಸಂಖ್ಯೆ:2
ಧನಸ್ಸು: ನ್ಯಾಯಾಲಯದ ಕಟ್ಟಳೆಗಳು ವಿಳಂಬ. ನಾಟ್ಯಕಲಾವಿದರಿಗೆ ಪುರಸ್ಕಾರ ಸಿಗಲಿದೆ. ದಿನದ ಅಂತ್ಯದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ಶುಭಸಂಖ್ಯೆ:9
ಮಕರ: ಹಿನ್ನೆಲೆ ಗಾಯಕಿಯರಿಗೆ ವಿಶೇಷ ಅವಕಾಶ. ಅಪರಿಚಿತರಿಂದ ಮೋಸದ ಸಾಧ್ಯತೆ. ಉದ್ಯೋಗ ಅರಸುವಲ್ಲಿ ಯಶಸ್ಸು ಸಿಗಲಿದೆ.ಶುಭಸಂಖ್ಯೆ:4
ಕುಂಭ: ಛಾಯಾಗ್ರಾಹಕರಿಗೆ ಹಣ ಸಂಪಾದನೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಕಾರ್ಯಸಾಧನೆ. ಅನಿರೀತ ತಿರುವು ಎದುರಾಗಲಿದೆ. ಶುಭಸಂಖ್ಯೆ:7
ಮೀನಾ: ಪಿತ್ರಾರ್ಜಿತ ಆಸ್ತಿಯ ಕಲಹ ಒಪ್ಪಂದದಲ್ಲಿ ಅಂತ್ಯ. ವಕೀಲ ವೃತಿಯಲ್ಲಿ ಪ್ರಗತಿಯಾಗುವುದು. ಆದಾಯ ತೆರಿಗೆ ನೌಕರರಿಗೆ ವರ್ಗ. ಶುಭಸಂಖ್ಯೆ:5