ಮೇಷ: ವ್ಯಾಪಾರದಲ್ಲಿ ಶತ್ರು ಕಾಟ. ನಿವೇಶನ ಖರೀದಿಗೆ ನಿರ್ಧಾರ. ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಿರಿ. ಪಾಲುದಾರಿಕೆಯಲ್ಲಿ ಮೋಸ. ಶುಭಸಂಖ್ಯೆ: 5
ವೃಷಭ: ಕೈಗೊಂಡ ದೇವತಾಕಾರ್ಯಗಳಲ್ಲಿ ಹಿನ್ನಡೆ. ದುಃಸ್ವಪ್ನ. ಮಧ್ಯ ಮಾರಾಟಗಾರರಿಗೆ ಆರ್ಥಿಕ ನಷ್ಟ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 1
ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಜೇನು ಮತ್ತು ಅಡಿಕೆ ಕೃಷಿಕರಿಗೆ ಲಾಭ. ಮಹಿಳೆಯರಿಗೆ ಕಚೇರಿಯಲ್ಲಿ ಹೆಚ್ಚಿದ ಒತ್ತಡ. ಶುಭಸಂಖ್ಯೆ: 6
ಕಟಕ: ಗೃಹ ನಿರ್ವಣದ ಆಸೆಗೆ ನಾಂದಿ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ವೈಯಕ್ತಿಕ ತೇಜೋವಧೆ. ಸ್ತ್ರೀಯರಿಗೆ ಅನುಕೂಲ.ಶುಭಸಂಖ್ಯೆ: 6
ಸಿಂಹ: ಸಂಗಾತಿಯ ಬಂಧುಗಳಿಂದ ತೊಂದರೆ. ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ. ಭೂ ವ್ಯವಹಾರದಲ್ಲಿ ಕಲಹವಾದೀತು. ಶುಭಸಂಖ್ಯೆ: 9
ಕನ್ಯಾ: ವಿದೇಶ ಪ್ರಯಾಣ. ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಚರ್ಚೆ. ವಿದ್ಯಾಭ್ಯಾಸದಲ್ಲಿ ವೈಫಲ್ಯ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಖಿನ್ನತೆ. ಶುಭಸಂಖ್ಯೆ: 3
ತುಲಾ: ಪೆಟ್ರೋಲ್ ಬಂಕ್ ವ್ಯವಹಾರದಲ್ಲಿ ಅನುಕೂಲ. ಸಂತೋಷ ಕೂಟದಲ್ಲಿ ಸ್ನೇಹಿತರೊಂದಿಗೆ ಪಾಲ್ಗೊಳ್ಳುವಿರಿ. ದುಷ್ಟರ ಭೇಟಿ. ಶುಭಸಂಖ್ಯೆ:1
ವೃಶ್ಚಿಕ: ಹೈನುಗಾರಿಕೆ, ಕುರಿ ಸಾಕಾಣಿಕೆಯಲ್ಲಿ ಅಧಿಕ ಲಾಭ. ವಿವಾಹದಲ್ಲಿ ಯತ್ನದಲ್ಲಿ ಯಶಸ್ಸು. ಅಪರಿಚಿತ ಮಹಿಳೆಯರಿಂದ ಸಹಾಯ. ಶುಭಸಂಖ್ಯೆ: 2
ಧನಸ್ಸು: ಮಕ್ಕಳೊಡನೆ ವಾಗ್ವಾದ. ಪತಿಯ ಆರೋಗ್ಯದಲ್ಲಿ ಏರುಪೇರು. ಸಾಲದ ವಿಚಾರಕ್ಕೆ ಅಲೆದಾಟ. ಆಟೋ ಉಪಕರಣ ಖರೀದಿ. ಶುಭಸಂಖ್ಯೆ:8
ಮಕರ: ಬಂಧುಗಳ ವಿಯೋಗ. ಮೋಜು ಮಸ್ತಿಯಲ್ಲಿ ತೊಡಗುವಿರಿ. ಉದ್ಯೋಗದಲ್ಲಿ ನಿರಾಸಕ್ತಿ. ಹೂವು ಹಣ್ಣು ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ: 7
ಕುಂಭ: ಸ್ಥಿರಾಸ್ತಿ ವಿಷಯದಲ್ಲಿ ಕೋರ್ಟ್ ಮೆಟ್ಟಲೇರುವಿರಿ. ಅಪರಿಚಿತರಿಂದ ಅನುಕೂಲ. ವಾಹನ ಖರೀದಿ. ಮನೆ ಮಾರಾಟಕ್ಕೆ ಅಡ್ಡಿ. ಶುಭಸಂಖ್ಯೆ: 9
ಮೀನ: ಅತಿಥಿಗಳಿಂದ ಕಿರಿಕಿರಿ. ಉದ್ಯೋಗ ಬದಲಾವಣೆ. ಸಜ್ಜನರ ಸಹವಾಸ. ಕಳೆದುಹೋದ ವಸ್ತು ಸಿಗಲಿದೆ. ಆರ್ಥಿಕವಾಗಿ ಅಡೆತಡೆ. ಶುಭಸಂಖ್ಯೆ:1