ಜ್ಯೋತಿಷ್ಯ

ಈ ರಾಶಿಯವರಿಗೆ ಶತ್ರುಗಳಿಂದ ತೊಂದರೆ ಎದುರಾಗಬಹುದು ಎಚ್ಚರ!

kumarvrl

ಮೇಷ: ಶತ್ರುಗಳಿಂದ ತೊಂದರೆ ಎದುರಾಗಬಹುದು. ವ್ಯವಹಾರದಲ್ಲಿ ಏರುಪೇರಾದರೂ ರಾಜಕೀಯದಲ್ಲಿ ಮನ್ನಣೆ. ಶುಭಸಂಖ್ಯೆ: 2

ವೃಷಭ: ಹಿರಿಯರ ಮಾತಿಗೆ ಗೌರವ ಕೊಡಲೇಬೇಕು. ದಾಯಾದಿಗಳ ಕಲಹದಿಂದ ಮಾನಸಿಕ ಕ್ಲೇಶ ಉಂಟಾಗಬಹುದು. ಶುಭಸಂಖ್ಯೆ: 9

ಮಿಥುನ: ಅನಿರೀಕ್ಷಿತ ಧನಲಾಭ. ಅಮೂಲ್ಯ ವಸ್ತು ಕಾಣೆಯಾದೀತು. ಅವಿವಾಹಿತರಿಗೆ ವಿವಾಹದ ಮಾತುಕತೆ ಜರುಗಲಿದೆ. ಶುಭಸಂಖ್ಯೆ: 4

ಕಟಕ: ಆರ್ಥಿಕ ಸ್ಥಿತಿಯಲ್ಲಿ ತುಸು ಏರುಪೇರು. ಅನಿವಾರ್ಯವಾದರೆ ದೂರಪ್ರಯಾಣ ಮಾಡಿ. ವಾಹನ ಚಲಾಯಿಸದಿರಿ. ಶುಭಸಂಖ್ಯೆ: 7

ಸಿಂಹ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಶತ್ರುಗಳಿಂದ ದೂರವಿರಿ. ಕ್ರಯ-ವಿಕ್ರಯಗಳಲ್ಲಿ ಹೆಚ್ಚಿನ ಲಾಭವಾಗಲಿದೆ. ಶುಭಸಂಖ್ಯೆ: 8

ಕನ್ಯಾ: ಉದ್ಯೋಗದಲ್ಲಿ ಪ್ರಗತಿಯಿದೆ. ಮಿತ್ರರ ನೆರವು ಲಭ್ಯ. ಆದರೆ ಅಪರಿಚಿತರ ಕುರಿತು ಮಾತ್ರ ಎಚ್ಚರಿಕೆ ಇದ್ದೇ ಇರಲಿ. ಶುಭಸಂಖ್ಯೆ: 1

ತುಲಾ: ಆಸ್ತಿಯ ವಿಚಾರದಲ್ಲಿ ದಾಯಾದಿಗಳೊಡನೆ ಮನಸ್ತಾಪ. ನಂಬಿಕಸ್ಥರಿಂದ ದ್ರೋಹ ಎದುರಾದೀತು. ಎಚ್ಚರವಿರಲಿ. ಶುಭಸಂಖ್ಯೆ: 5

ವೃಶ್ಚಿಕ: ಬಾಳಸಂಗಾತಿಯ ಭಿನ್ನಾಭಿಪ್ರಾಯ ದೂರವಾಗಲಿದೆ. ಖರ್ಚು ಅಧಿಕವಾದರೂ ಮಾನಸಿಕ ನೆಮ್ಮದಿ ಲಭ್ಯ. ಶುಭಸಂಖ್ಯೆ: 3

ಧನಸ್ಸು: ಮನೆಯಲ್ಲಿ ನೆಮ್ಮದಿಯ ವಾತಾವರಣವಿದೆ. ಖರ್ಚುವೆಚ್ಚದ ಬಗ್ಗೆ ನಿಗಾ ವಹಿಸಿ. ರಾಜಕಾರಣಿಗಳಿಗೆ ಪ್ರಗತಿ. ಶುಭಸಂಖ್ಯೆ: 6

ಮಕರ: ಬಾಳಿಗೆ ಉತ್ತಮ ತಿರುವು ಲಭಿಸಲಿದೆ. ದೇವತಾಕಾರ್ಯದಲ್ಲಿ ಭಾಗಿಯಾಗುವಿರಿ. ಆಪ್ತರ ಜತೆಗಿನ ಬಾಂಧವ್ಯ ವೃದ್ಧಿ. ಶುಭಸಂಖ್ಯೆ: 9

ಕುಂಭ: ಕೆಲಸದಲ್ಲಿ ಮುಖ್ಯಸ್ಥರಿಂದ ಪ್ರಶಂಸೆ ಇದ್ದರೂ ಸಹೋದ್ಯೋಗಿಗಳ ಬಾಧೆ ತಪ್ಪಿದ್ದಲ್ಲ. ವೃಥಾ ಧನವ್ಯಯ ಬೇಡ. ಶುಭಸಂಖ್ಯೆ: 4

ಮೀನ: ಕೈಗೊಂಡ ಕಾರ್ಯದಲ್ಲಿ ಗೆಲುವಿದೆ. ಸದ್ಯಕ್ಕೆ ಚಿನ್ನಾಭರಣ ಖರೀದಿ ಬೇಡ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶುಭಸಂಖ್ಯೆ: 2