More

    ಲಾಕ್​ಡೌನ್​ ನಡುವೆಯೂ ದೇಶದೆಲ್ಲೆಡೆ ಸಂಚರಿಸುತ್ತಿರುವ ಪಂಜಾಬ್​ ಸರ್ಕಾರಿ ಬಸ್​ಗಳು; ಶಾಪವಲ್ಲ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಜನ

    ಅಮೃತಸರ: ದೇಶದ ಎಲ್ಲ ರಾಜ್ಯಗಳಲ್ಲೂ ಸದ್ಯ ವಲಸೆ ಕಾರ್ಮಿಕರು, ಬೇರೆ ರಾಜ್ಯದವರು ಬಂಧಿಯಾಗಿದ್ದಾರೆ. ಲಾಕ್​ಡೌನ್​ನಿಂದಾಗಿ ಉದ್ಯೋಗವೂ ಇಲ್ಲದೇ, ತಮ್ಮೂರುಗಳಿಗೂ ತೆರಳಲಾಗದೇ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಒಂದು ರೀತಿಯಲ್ಲಿ ತಾವಿರುವ ರಾಜ್ಯಗಳಿಗೂ ಇಕ್ಕಟ್ಟಿನ ಸ್ಥಿತಿ ತಂದಿಟ್ಟಿದ್ದಾರೆ. ರಾಜ್ಯದಲ್ಲಿರುವ ವಲಸಿಗರನ್ನು ತಮ್ಮೂರಿಗೆ ಕರೆಯಿಸಿಕೊಳ್ಳಿ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಉತ್ತರಭಾರತದ ರಾಜ್ಯಗಳಿಗೆ ದುಂಬಾಲು ಬಿದ್ದಿದ್ದಾರೆ.

    ಆದರೆ, ಪಂಜಾಬ್​ ಸರ್ಕಾರ ಮಾತ್ರ ತಮ್ಮವರು ದೇಶದ ಯಾವುದೇ ಭಾಗದಲ್ಲಿ ಸಿಲುಕಿದ್ದರೂ ರಾಜ್ಯಕ್ಕೆ ಕರೆಯಿಸಿಕೊಳ್ಳುತ್ತಿದೆ. ಇದಕ್ಕಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಸೇರಿ ದೇಶದ ವಿವಿಧೆಡೆಗೆ ಬಸ್​ಗಳನ್ನು ಕಳುಹಿಸುತ್ತಿವೆ. ಸರ್ಕಾರದ ಈ ಕ್ರಮ ಸಹಜವಾಗಿಯೇ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇತರ ರಾಜ್ಯಗಳಿಗೂ ಇದು ಮಾದರಿ ಎಂದು ಶ್ಲಾಘನೆ ದೊರೆತಿದೆ.

    ಮಹಾರಾಷ್ಟ್ರದ ನಾಂದೇಢ್​ನ ಹಜೂರ್​ ಸಾಹೇಬ್​ ಗುರುದ್ವಾರದಲ್ಲಿ ಸಿಲುಕಿದ್ದ 3,800 ಸಿಖ್ಖರನ್ನು ರಾಜ್ಯಕ್ಕೆ ಕರೆಯಿಸಿಕೊಳ್ಳಲು 80 ಬಸ್​ಗಳನ್ನು ಪಂಜಾಬ್​ನಿಂದ ಕಳುಹಿಸಿಕೊಟ್ಟಿದ್ದರು. 3,300 ಕಿ.ಮೀ ಪ್ರಯಾಣಕ್ಕಾಗಿ ಒಂದೊಂದು ಬಸ್​ನಲ್ಲಿ ಮೂವರು ಚಾಲಕರು ಹಾಗೂ ಒಬ್ಬ ಪೊಲೀಸ್​ನನ್ನು ನಿಯೋಜಿಸಲಾಗಿತ್ತು.

    ಇದಷ್ಟೇ ಅಲ್ಲದೇ, ರಾಜಸ್ಥಾನದ ಜೈಸಲ್ಮೇರ್​ನಲ್ಲಿ ವಲಸಿಗರಾಗಿದ್ದ 1,000ಕ್ಕೂ ಕಾರ್ಮಿಕರನ್ನು ಪಂಜಾಬ್​ಗೆ ಕರೆಯಿಸಿಕೊಳ್ಳಲು ಬಸ್​ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಕೋಚಿಂಗ್​ ಸೆಂಟರ್​ ತಾಣವಾದ ಕೋಟದಲ್ಲಿ ಸಿಲುಕಿದ್ದ ರಾಜ್ಯದ 152 ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್​ಗಳನ್ನು ವ್ಯವಸ್ಥೆ ಮಾಡಿಸಿದ್ದಾರೆ.

    ಇದೆಲ್ಲದರ ಪರಿಣಾಮವಾಗಿ ಮೊದಲ ಹಂತದಲ್ಲಿ 900ಕ್ಕೂ ಅಧಿಕ ಜನರು ಚಂಡಿಗಢ್​ಗೆ ಆಗಮಿಸಿ, ವೈದ್ಯಕೀಯ ತಪಾಸಣೆ ಬಳಿಕ ತಮ್ಮೂರುಗಳಿಗೆ ತೆರಳಿದ್ದಾರೆ.

    ಈ ನಡುವೆ, ಮಧ್ಯಪ್ರದೇಶದ ರತ್ಲಾಂ ಎಂಬಲ್ಲಿ ಸಿಲುಕಿದ್ದ ಪಂಜಾಬಿಗಳನ್ನು ಕರೆತರಲು 80 ಬಸ್​ಗಳನ್ನು ಕಳುಹಿಸಲಾಗಿತ್ತು. ಈ ಪೈಕಿ ಮಂಜೀತ್​ ಸಿಂಗ್​ ಎಂಬ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈತ ಖಾಸಗಿ ಬಸ್​ ಚಾಲಕನಾಗಿದ್ದರೂ, ಸರ್ಕಾರ ವಹಿಸಿದ ಕೆಲಸದ ಮೇಲೆ ತೆರಳಿದ್ದರಿಂದ ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಚಾಲಕನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
    ಪಂಜಾಬಿಗಳು ಎಲ್ಲಿದ್ದರೂ ಅವರನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂಬ ಮಾತಿನಂತೆಯೇ ಅಲ್ಲಿನ ಸಿಎಂ ನಡೆದುಕೊಳ್ಳುತ್ತಿದ್ದಾರೆ.

    ಹಬ್ಬಕ್ಕೆ ಎನ್ನುವಂತೆ ಪ್ರತಿವರ್ಷವೂ ಬರುತ್ತಂತೆ ಕರೊನಾ; ಚೀನಾದಿಂದಲೇ ಬಂದಿದೆ ವಾರ್ನಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts