ಜ್ಯೋತಿಷ್ಯ

Chanikya Nithi : ಜೀವನದಲ್ಲಿ ಎಂದಿಗೂ ಬಡವನಾಗದಿರಲು ಈ ಸೂತ್ರಗಳನ್ನು ಪಾಲಿಸಿ!

Chanikya Nithi: ನೀವು ಇಲ್ಲಿಯವರೆಗೂ ನಿಮ್ಮ ಹಣವನ್ನು ತಪ್ಪು ಸ್ಥಳಗಳಲ್ಲಿ ಖರ್ಚು ಮಾಡುತ್ತಿದ್ದೀರಾ? ಹಾಗಿದ್ದರೆ, ಈ ತಪ್ಪುಗಳನ್ನು ಇಂದಿಗೇ ನಿಲ್ಲಿಸಲು ಚಾರ್ಯ ಚಾಣುಕ್ಯನ ಈ ನಿಯಮಗಳು ನಿಮಗೆ ಸಹಾಯವಾಗುತ್ತವೆ. ಚಾಣಕ್ಯ ನೀತಿಯು ರಾಜನೀತಿ, ಆರ್ಥಿಕತೆ, ಸಮಾಜ, ನೈತಿಕತೆ ಮತ್ತು ವೈಯಕ್ತಿಕ ಜೀವನದ ಕುರಿತಾದ ಸೂತ್ರಗಳನ್ನು ಒಳಗೊಂಡಿದೆ. ಇದು ಆಚಾರ್ಯ ಚಾಣಕ್ಯರ ಚಿಂತನೆಯನ್ನು ಸಂಪೂರ್ಣವಾಗಿ ಅನ್ವಯಿಸುತ್ತದೆ. ಅವರು ದೀರ್ಘಕಾಲದ ವರೆಗೆ ಎಲ್ಲಿ ಸಂತೋಷ, ಭದ್ರತೆ ಮತ್ತು ಗೌರವ ಸಿಗುವಂತಹ ಸ್ಥಳಗಳಲ್ಲಿ ಹಣವನ್ನು ಖರ್ಚು ಮಾಡಬೇಕು ಎಂದು ತಿಳಿಸಿದ್ದಾರೆ.

ಇತರರನ್ನು ಮೆಚ್ಚಿಸಲು ಹಣ ಖರ್ಚು ಮಾಡಬೇಡಿ

ಆಚಾರ್ಯ ಚಾಣಕ್ಯರ ಪ್ರಕಾರ, ಇತರರನ್ನು ಮೆಚ್ಚಿಸುವ ಸಲುವಾಗಿ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಲು ಪ್ರಾರಂಭಿಸುತ್ತಾರೆ. ಇದರಿಂದ ಅವರ ಸಮಾಜದಲ್ಲಿ ಗೌರವ ಇದೆ ಎಂದು ತಿಳಿದುಕೊಳ್ಳುತ್ತಾರೆ. ಈ ರೀತಿಯಾಗಿ ಮಾಡುವುದು ಅಲ್ಪಾವಧಿಗೆ ಮಾತ್ರ. ಈ ರೀತಿಯ ಖರ್ಚುಗಳು ವ್ಯಕ್ತಿಯನ್ನು ಆಳದಿಂದಲೇ ಮೊಟಕುಗೊಳಿಸುತ್ತವೆ.

ಶಿಕ್ಷಣಕ್ಕಾಗಿ ಹಣವನ್ನು ಖರ್ಚು ಮಾಡಿ

ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿಯು ತಮ್ಮ ಜ್ಞಾನಕ್ಕಾಗಿ ಮತ್ತು ಶಿಕ್ಷಣಕ್ಕಾಗಿ ಮಾಡಿದ ಹಣ ಎಂದಿಗೂ ವ್ಯರ್ಥವಾಗುವುದಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ, ಪುಸ್ತಕಗಳ ಖರೀದಿಗಾಗಿ, ಹೊಸ ಕೌಶ್ಯಲಗಳಿಗೆ ಖರ್ಚು ಮಾಡಿದ ಹಣವು ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇವೆಲ್ಲವೂ ಭವಿಷ್ಯವಮನ್ನು ಸದೃಢಗೊಳಿಸುತ್ತದೆ.

ನಿಮ್ಮ ಆರೋಗ್ಯಕ್ಕಾಗಿ ಖರ್ಚು ಮಾಡಿ

ಕೆಲವೊಂದಿಷ್ಟು ಜನರು ಹಣವನ್ನು ಉಳಿಸುವ ಸಲುವಾಗಿ ಅನಾರೋಗ್ಯದಿಂದ ಬಳಲಿತ್ತಿದ್ದರೂ, ಚಿಕಿತ್ಸೆ ಪಡೆದುಕೊಳ್ಳಲು ಹಿಂಜರಿಯುತ್ತಿರುತ್ತಾರೆ. ಆದರೆ, ಚಾಣಿಕ್ಯನ ನೀತಿ ಪ್ರಕಾರ ಆರೋಗ್ಯವೇ ದೊಡ್ಡ ಸಂಪತ್ತು. ಆರೋಗ್ಯವಿಲ್ಲದಿದ್ದರೆ ಏನು ಪ್ರಯೋಜನವಿಲ್ಲ. ಆದರಿಂದ ನಿಮ್ಮ ಚಿಕಿತ್ಸೆಗಾಗಿ, ಔಷಧಕ್ಕಾಗಿ ಒಬ್ಬರ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡಿ ಎಂದು ತಿಳಿಸಿದ್ದಾರೆ.

ಅಗತ್ಯ ಇರುವವರಿಗೆ ಸಹಾಯ ಮಾಡಿ

ದಾನ ಮತ್ತು ಸಹಾಯವನ್ನು ಯಾವಾಗಲೂ ಚಿಂತನಶೀಲವಾಗಿ ಮಾಡಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದರು. ಯಅರಿಗೆ ಸಹಾಯ ಬೇಕು ಎಂದು ಅರ್ಥಮಾಡಿಕೊಳ್ಳದೇ, ತಮ್ಮ ಖ್ಯಾತಿಗಾಗಿ ಹಣವನ್ನು ಖರ್ಚು ಮಾಡಿದರೆ, ಅದು ಪ್ರಯೋಜನವಾಗುವುದಿಲ್ಲ. ನಿಜವಅದ ಪುಣ್ಯವೆಂದರೆ ಯಾವ ವ್ಯಕ್ತಿಗೆ ಸಹಾಯ ಬೇಕೋ ಅದನ್ನು ತಿಳಿದು ಮಾಡಬೇಕು ಎಂದು ತಿಳಿಸಿದ್ದಾರೆ.

ವ್ಯಸನ ಮತ್ತು ಕೆಟ್ಟ ಅಭ್ಯಾಸಗಳನ್ನು ಮಾಡಬೇಡಿ

ಮದ್ಯಪಾನ, ಜೂಜಾಟ ಮತ್ತು ಕೆಟ್ಟ ಚಟುವಟಿಕೆಗಳಿಗೆ ಖರ್ಚು ಮಾಡುವ ಹಣವು ವ್ಯಕ್ತಿಯನ್ನು ಹಾಳು ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಈ ಅಭ್ಯಾಸಗಳು ಆರ್ಥಿಕ ನಷ್ಟವನ್ನು ಉಂಟುಮಾಡುವುದಲ್ಲದೆ ಗೌರವ ಮತ್ತು ಸಂಬಂಧಗಳನ್ನು ಸಹ ನಾಶಮಾಡುತ್ತವೆ. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.