Astrology : ಶುಕ್ರ ಗ್ರಹದ ರಾಶಿ ಬದಲಾವಣೆಯು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಪ್ರಮುಖ ಹಾಗೂ ಶುಭ ಘಟನೆಯೆಂದು ಪರಿಗಣಿಸಲ್ಪಡುತ್ತದೆ. ಜ್ಯೋತಿಷ್ಯದ ಪ್ರಕಾರ ಶುಭ ಗ್ರಹವಾದ ಶುಕ್ರನು ಸಂಪತ್ತು, ಭೋಗಜೀವನ, ಪ್ರೀತಿ, ಆಕರ್ಷಣೆ ಹಾಗೂ ಸಮೃದ್ಧಿಯ ಅಧಿಪತಿಯಾಗಿದ್ದಾನೆ. ಇದೇ ನವೆಂಬರ್ 22 ರಂದು ಶುಕ್ರನು ತನ್ನ ಸ್ವಂತ ರಾಶಿಯಾದ ತುಲಾ ರಾಶಿಗೆ ಪ್ರವೇಶಿಸಲಿದ್ದು, ಈ ಮಹತ್ವದ ಸಂಚಾರವು ಎಲ್ಲಾ ದ್ವಾದಶ ರಾಶಿಗಳ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪ್ರಭಾವ ಬೀರಲಿದೆ.
ವಿಶೇಷವಾಗಿ, ಸ್ವಕ್ಷೇತ್ರಕ್ಕೆ ಶುಕ್ರನ ಆಗಮನವಾಗುತ್ತಿರುವುದರಿಂದ ಈ ಅವಧಿಯಲ್ಲಿ ಕೆಲವು ನಿರ್ದಿಷ್ಟ ರಾಶಿಗಳ ಜಾತಕದ ಮೇಲೆ ಶುಭ ಯೋಗಗಳ ಧಾರೆ ಹರಿಯಲಿದೆ. ಈ ಪ್ರಭಾವದಿಂದಾಗಿ ಮೂರು ಪ್ರಮುಖ ರಾಶಿಯವರ ಜೀವನದಲ್ಲಿ ಆರ್ಥಿಕವಾಗಿ ದೊಡ್ಡ ಬದಲಾವಣೆಗಳು ಉಂಟಾಗಲಿದ್ದು, ಅದೃಷ್ಟ ಒಲಿದು ಜಾಕ್ಪಾಟ್ ಹೊಡೆಯುವಂತ ಭಾಗ್ಯ ಕೂಡಿಬರಲಿದೆ. ಆ ಅದೃಷ್ಟದ 3 ರಾಶಿಗಳು ಯಾವುವು ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಮೇಷ ರಾಶಿಯವರಿಗೆ ಈ ಶುಕ್ರ ಸಂಚಾರವು ವೃತ್ತಿ ಮತ್ತು ವ್ಯವಹಾರದ ಕ್ಷೇತ್ರದಲ್ಲಿ ಅತ್ಯಂತ ಸುಂದರವಾದ ಹಾಗೂ ಲಾಭದಾಯಕ ಫಲಗಳನ್ನು ತರಲಿದೆ. ಆಫೀಸ್ನಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ನೀವು ಇದುವರೆಗೆ ಪಟ್ಟ ಶ್ರಮಕ್ಕೆ ತಕ್ಕಂತೆ ಅತ್ಯುತ್ತಮ ಪ್ರತಿಫಲ ಹಾಗೂ ಮೇಲಾಧಿಕಾರಿಗಳಿಂದ ಸಂಪೂರ್ಣ ಬೆಂಬಲ-ಸಹಕಾರ ದೊರೆಯಲಿದೆ. ಧನ ಹರಿವು ಹೆಚ್ಚಾಗುವುದರ ಜೊತೆಗೆ, ಹಿಂದೆ ಯಾರಾದರೂ ನಿಮಗೇನಾದರೂ ಹಣ ಬಾಕಿ ಉಳಿಸಿಕೊಂಡಿದ್ದರೆ ಅಥವಾ ನೀವು ಸಾಲ ನೀಡಿದ್ದರೆ, ಆ ಬಾಕಿ ಹಣವು ಈ ಸಮಯದಲ್ಲಿ ನಿಮ್ಮ ಕೈಸೇರಲಿದೆ. ವಿದೇಶಕ್ಕೆ ಹೋಗಿ ಉದ್ಯೋಗ ಮಾಡುವ ಕನಸು ಹೊತ್ತವರಿಗೆ ಹಾಗೂ ಉದ್ಯಮಿಗಳಿಗೆ ಪ್ರಗತಿಯ ಶುಭ ಸುದ್ದಿಗಳು ಸಿಗಲಿವೆ. ವೃತ್ತಿಜೀವನದಲ್ಲಿ ಬಡ್ತಿ ಮತ್ತು ವೇತನ ಏರಿಕೆಯ ಜೊತೆಗೆ ಸಾಮಾಜಿಕವಾಗಿ ಜನರ ಪ್ರೀತಿ ಹಾಗೂ ಆಕರ್ಷಣೆಯನ್ನು ಸುಲಭವಾಗಿ ಗಳಿಸುವ ಭಾಗ್ಯ ನಿಮ್ಮದಾಗಲಿದೆ.
ಕನ್ಯಾ ರಾಶಿಯ ಜನರಿಗೆ ಈ ಶುಕ್ರ ಸಂಚಾರವು ಮುಖ್ಯವಾಗಿ ಹಣಕಾಸಿನ ಸ್ಥಿತಿ, ಉಳಿತಾಯ ಮತ್ತು ಕುಟುಂಬದ ಸೌಹಾರ್ದತೆಗೆ ಸಂಬಂಧಿಸಿದಂತೆ ಮಹತ್ವದ ತಿರುವು ನೀಡಲಿದೆ. ಹಳೆಯ ಹೂಡಿಕೆಗಳು ಅಥವಾ ಕೊಟ್ಟ ಸಾಲದ ಹಣ ಮರಳಿ ಬರುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಗಣನೀಯವಾಗಿ ಬಲಗೊಳ್ಳಲಿದ್ದು, ನಿರೀಕ್ಷಿತ ಮಟ್ಟದಲ್ಲಿ ಹಣ ಉಳಿಸಲು ಸಾಧ್ಯವಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ನಿರಂತರ ಪರಿಶ್ರಮಕ್ಕೆ ತಕ್ಕಂತೆ ಸೂಕ್ತ ಗೌರವ, ಮಾನ್ಯತೆ ಹಾಗೂ ವೃತ್ತಿಪರ ಬೆಳವಣಿಗೆಯ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದು, ಉತ್ಸಾಹದಿಂದ ಹೊಸ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಈ ಅವಧಿಯಲ್ಲಿ ನೀವು ಕೈಗೊಳ್ಳುವ ಎಲ್ಲಾ ನೂತನ ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡು ಅತ್ಯುತ್ತಮ ಯಶಸ್ಸನ್ನು ನೀಡಲಿವೆ.
ಮಕರ ರಾಶಿಯವರಿಗೂ ಸಹ ತುಲಾ ರಾಶಿಯಲ್ಲಿ ನಡೆಯುವ ಈ ಶುಕ್ರ ಸಂಚಾರವು ವೃತ್ತಿ ಜೀವನ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿಯನ್ನು ತರಲಿದೆ. ಬಹಳ ದಿನಗಳಿಂದ ನೆರವೇರದೆ ನೆಂಜಿಗೆ ಬಿದ್ದಿದ್ದ ಅಥವಾ ಬಾಕಿ ಉಳಿದಿದ್ದ ಪ್ರಮುಖ ಕೆಲಸ ಕಾರ್ಯಗಳು ಈ ಅವಧಿಯಲ್ಲಿ ಯಾವುದೇ ವಿಘ್ನವಿಲ್ಲದೆ ಸುಲಭವಾಗಿ ಪೂರ್ಣಗೊಳ್ಳಲಿವೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಸಂಬಳ ಹೆಚ್ಚಳದ ಶುಭ ಸುದ್ದಿಗಳು ಸಿಕ್ಕರೆ, ಸ್ವಂತ ಉದ್ಯೋಗ ಮಾಡುವ ವ್ಯವಹಾರಸ್ಥರು ತಮ್ಮ ನಿರಂತರ ಪ್ರಯತ್ನ ಮತ್ತು ಶ್ರಮದಿಂದ ಹೊಸ ಎತ್ತರಕ್ಕೆ ಬೆಳೆಯಲಿದ್ದಾರೆ. ಆರ್ಥಿಕ ಪ್ರಗತಿಯಿಂದಾಗಿ ಹೊಸ ಆಸ್ತಿ, ಮನೆ ಅಥವಾ ವಾಹನಗಳನ್ನು ಖರೀದಿ ಮಾಡುವ ಯೋಗ ಒದಗಿಬರಲಿದೆ. ಇದರೊಂದಿಗೆ ಕುಟುಂಬದ ಸದಸ್ಯರೊಂದಿಗೆ ಸಂತೋಷದ ಸಮಯ ಕಳೆಯಲು ಸಾಧ್ಯವಾಗಿ, ಆರೋಗ್ಯವೂ ಸಹ ಉತ್ತಮ ಸ್ಥತಿಯಲ್ಲಿರಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನವೆಂಬರ್ 22 ರ ಶುಕ್ರ ಸಂಚಾರವು ಮೇಷ, ಕನ್ಯಾ ಮತ್ತು ಮಕರ ರಾಶಿಯವರ ಪಾಲಿಗೆ ನಿಜಕ್ಕೂ ಸುವರ್ಣ ಅವಕಾಶಗಳನ್ನು ಹೊತ್ತು ತರಲಿದೆ. ಈ ಮೂರು ರಾಶಿಯವರು ಧನ ಲಾಭ, ಉದ್ಯೋಗ ಬಡ್ತಿ, ಕುಟುಂಬದಲ್ಲಿ ನೆಮ್ಮದಿ ಹಾಗೂ ಹೊಸ ಆಸ್ತಿ ಖರೀದಿ ಮಾಡುವಂತಹ ಅನೇಕ ಶುಭ ಫಲಗಳನ್ನು ಅನುಭವಿಸಲಿದ್ದಾರೆ. ಶುಕ್ರನ ಸ್ವಕ್ಷೇತ್ರ ಪ್ರವೇಶದಿಂದ ರೂಪುಗೊಳ್ಳುವ ಈ ಧನಾತ್ಮಕ ವಾತಾವರಣವನ್ನು ಸರಿಯಾಗಿ ಬಳಸಿಕೊಂಡು ಸೂಕ್ತ ಯೋಜನೆಯೊಂದಿಗೆ ಮುನ್ನಡೆದರೆ ನಿಮ್ಮ ಎಲ್ಲಾ ಆಸೆಗಳು ಈಡೇರುವುದರಲ್ಲಿ ಯಾವುದೇ ಸಂಶಯವಿಲ್ಲ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.