- ಹಸ್ತದ ರೇಖೆಗಳ ಮೂಲಕ ಆರ್ಥಿಕ ಭವಿಷ್ಯ ನಿರ್ಧಾರ, ನಿಮ್ಮ ಹಸ್ತದ ಈ ಮೂರು ಸ್ಥಳ ನೋಡಿಕೊಳ್ಳಿ
- ಹಸ್ತಸಾಮುದ್ರಿಕ ಶಾಸ್ತ್ರ ಪ್ರಕಾರ ನಿಮ್ಮ ಕೈನಲ್ಲಿ ಈ ರೇಖೆ ಇದ್ರೆ ಸಿಗುತ್ತೆ ಭಾರೀ ಲಾಭ
- ಕಿರುಬೆರಳಿನ ಕೆಳಗಿರುವ ಭಾಗವನ್ನು 'ಬುಧ ಪರ್ವತ' ಎನ್ನಲಾಗುತ್ತದೆ. ಇದು ಯಶಸ್ವಿ ಉದ್ಯಮದ ರೇಖೆ
ಉಂಗುರದ ಬೆರಳಿನ ಕೆಳಗೆ ಹೇಗಿದೆ ನೋಡಿಕೊಳ್ಳಿ
ಉಂಗುರದ ಬೆರಳಿನ ಕೆಳಗಿರುವ ಭಾಗವನ್ನು 'ಸೂರ್ಯ ಪರ್ವತ' ಎಂದು ಕರೆಯಲಾಗುತ್ತದೆ. ಇದು ವ್ಯಕ್ತಿಯ ಹೆಸರು, ಕೀರ್ತಿ ಮತ್ತು ಸಾಮಾಜಿಕ ಗೌರವವನ್ನು ಪ್ರತಿನಿಧಿಸುತ್ತದೆ. : ಈ ಪರ್ವತವು ಉಬ್ಬಿಕೊಂಡಿದ್ದರೆ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಸ್ಪಷ್ಟವಾಗಿದ್ದರೆ, ಆ ವ್ಯಕ್ತಿಗೆ ಸಮಾಜದಲ್ಲಿ ದೊಡ್ಡ ಹೆಸರು ಮತ್ತು ಆರ್ಥಿಕ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆ ಇದೆ. ಒಂದು ವೇಳೆ ಈ ಪರ್ವತವು ಸಪಾಟಾಗಿದ್ದರೆ ಅಥವಾ ಅಲ್ಲಿನ ರೇಖೆಗಳು ತುಂಡಾಗಿದ್ದರೆ ವೃತ್ತಿಜೀವನದಲ್ಲಿ ಅಡೆತಡೆಗಳು ಉಂಟಾಗಬಹುದು.
ಬುಧ ಪರ್ವತ ಇಲ್ಲಿರಬೇಕು
'ಬುಧ ಪರ್ವತ' ಎಂದು ಕಿರುಬೆರಳಿನ ಕೆಳಗಿರುವ ಭಾಗವನ್ನು ಕರೆಯಲಾಗುತ್ತದೆ. ಇದು ಬುದ್ಧಿವಂತಿಕೆ, ವ್ಯಾಪಾರ ಕೌಶಲ್ಯ ಮತ್ತು ಸಂವಹನ ಶಕ್ತಿಯನ್ನು ಸೂಚಿಸುತ್ತದೆ. ಯಶಸ್ವಿ ಉದ್ಯಮಿಗಳ ಕೈಯಲ್ಲಿ ಈ ಪರ್ವತವು ತುಂಬಾ ಬಲವಾಗಿರುತ್ತದೆ. ಈ ಭಾಗವು ಸ್ಪಷ್ಟವಾಗಿದ್ದರೆ ಆ ವ್ಯಕ್ತಿ ವ್ಯಾಪಾರದಲ್ಲಿ ದೊಡ್ಡ ಲಾಭ ಗಳಿಸುತ್ತಾನೆ ಮತ್ತು ಆರ್ಥಿಕವಾಗಿ ಸ್ಥಿರವಾಗಿರುತ್ತಾನೆ.
ಹಸ್ತದ ಮಧ್ಯಭಾಗದಲ್ಲಿ ಮಣಿಕಟ್ಟಿನಿಂದ ಪ್ರಾರಂಭವಾಗಿ ಮಧ್ಯದ ಬೆರಳಿನ ಕಡೆಗೆ ಸಾಗುವ ರೇಖೆಯೇ ವಿಧಿ ರೇಖೆ ಅಥವಾ ಅದೃಷ್ಟ ರೇಖೆ. ಈ ರೇಖೆಯು ಆಳವಾಗಿ, ಸ್ಪಷ್ಟವಾಗಿ ಮತ್ತು ಯಾವುದೇ ಜಾಗದಲ್ಲಿ ಅಡೆತಡೆ ಇಲ್ಲದೆ ನೇರವಾಗಿ ಸಾಗುತ್ತಿದ್ದರೆ, ಅಂತಹ ವ್ಯಕ್ತಿಯು ಜೀವನದಲ್ಲಿ ಸದಾ ಅದೃಷ್ಟವಂತನಾಗಿರುತ್ತಾನೆ, (ಏಜೆನ್ಸೀಸ್).