ಅಂಕಣ

ಅಡಕೆ ತಟ್ಟೆ ಉದ್ಯಮದಿಂದ ಸ್ವಾವಲಂಬಿ ಬದುಕು

‘ಅಡಕೆಗೆ ಹೋದ ಮಾನ, ಆನೆ ಕೊಟ್ಟರೂ ಬರಲ್ಲ’ ಎಂಬ ಗಾದೆ ಮಾತು ಅಡಕೆಗೆ ಇರುವ ಸ್ಥಾನ ಸಾರುತ್ತದೆ. ಈಗ ಅಡಕೆ ಅಷ್ಟೇ ಅಲ್ಲ, ಅಡಕೆ ಹಾಳೆಯೂ ತನ್ನ ಆರ್ಥಿಕ ಮೌಲ್ಯ ಹೆಚ್ಚಿಸಿಕೊಂಡಿದೆ. ಅಡಕೆ ಹಾಳೆಯ ಪರಿಸರ ಸ್ನೇಹಿ ಊಟದ ತಟ್ಟೆಗಳು ಭಾರತ ಸೇರಿ ಜಗತ್ತಿನಾದ್ಯಂತ ಒಲವು ಪಡೆಯುತ್ತಿವೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿ ದೇಶದ ನಾನಾ ಭಾಗಗಳಲ್ಲಿ ಅಡಕೆ ತಟ್ಟೆ ತಯಾರಿಸುವ ನೂರಾರು ಘಟಕಗಳು ನಡೆಯುತ್ತಿವೆ. ಗೊಬ್ಬರಕ್ಕಾಗಿಯೋ ಅಥವಾ ಉರುವಲಿಗಾಗಿ ಬಳಕೆಯಾಗುತ್ತಿದ್ದ ಅಡಕೆ ಹಾಳೆ, ಈಗ ತಟ್ಟೆ ರೂಪ ಪಡೆದು ಸಾವಿರಾರು ಮಂದಿಯ ಜೀವನಕ್ಕೆ ಆದಾಯದ ದಾರಿ ತೋರುತ್ತಿದೆ. 1 ರೂಪಾಯಿ ಬಂಡವಾಳ ಹಾಕಿದರೆ 3-4 ರೂಪಾಯಿ ಲಾಭ ಕೊಡುವ ಉದ್ಯಮ ಅಡಕೆ ತಟ್ಟೆ ತಯಾರಿಕೆ. ಸಣ್ಣ ಮಟ್ಟದಲ್ಲಿ ಬಿಸಿನೆಸ್ ಮಾಡಿ ಬದುಕು ಕಟ್ಟಿಕೊಳ್ಳುತ್ತೇವೆ ಎನ್ನುವವರಿಗೆ ಮತ್ತು ದೊಡ್ಡ ಮಟ್ಟದಲ್ಲಿ ತಟ್ಟೆ ಘಟಕ ಆರಂಭಿಸಿ ಹೆಚ್ಚೆಚ್ಚು ಲಾಭ ಗಳಿಸುತ್ತೇವೆ ಎನ್ನುವವರಿಗೂ ಈ ಉದ್ಯಮದಲ್ಲಿ ಅವಕಾಶಗಳಿವೆ.

ಕರ್ನಾಟಕಕ್ಕೆ ದೊಡ್ಡ ಅವಕಾಶ: ಇಡೀ ವಿಶ್ವದಲ್ಲೇ ಭಾರತ ಅಡಕೆ ಬೆಳೆಯಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕ ಭಾರತದಲ್ಲಿ ನಂ.1 ಸ್ಥಾನದಲ್ಲಿದೆ. ನಮ್ಮಲ್ಲಿ ಉತ್ಪಾದನೆಯಾಗುವ ಒಟ್ಟು ಅಡಕೆ ಪ್ರಮಾಣದಲ್ಲಿ ಶೇ.47 ಕರ್ನಾಟಕದಲ್ಲೇ ಬೆಳೆಯಲಾಗುತ್ತಿದೆ. ಕರುನಾಡಲ್ಲಿ 2,79,460 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗಿದೆ. ಅಡಕೆ ತಟ್ಟೆ ತಯಾರಿಕೆಗೆ ಬೇಕಿರುವ ಮುಖ್ಯವಾದ ಕಚ್ಚಾವಸ್ತು ಅಡಕೆ ಹಾಳೆ. ಒಂದು ಅಡಕೆ ಗಿಡ ವರ್ಷಕ್ಕೆ ಏಳೆಂಟು ಹಾಳೆಗಳನ್ನು ಕೊಡುತ್ತದೆ. ಕರ್ನಾಟಕದಲ್ಲಿ ಹೆಚ್ಚು ಅಡಕೆ ಬೆಳೆಯುವುದರಿಂದ ಅಡಕೆ ಹಾಳೆಯ ಕೊರತೆ ಉಂಟಾಗುವುದಿಲ್ಲ. ಹೀಗಾಗಿ ಅಡಕೆ ತಟ್ಟೆ ಉದ್ಯಮ ಕಟ್ಟಿ ಆದಾಯ ಗಳಿಸಬೇಕು ಎನ್ನುವವರಿಗೆ ರಾಜ್ಯದಲ್ಲಿ ಒಳ್ಳೆಯ ಅವಕಾಶವಿದೆ.

ದೇಶ-ವಿದೇಶಗಳಲ್ಲಿದೆ ದೊಡ್ಡ ಮಾರ್ಕೆಟ್: ಆಹಾರ ಪೂರೈಕೆಗಾಗಿ ಬಳಸಿ ಬಿಸಾಡುವ (ಯೂಸ್ ಆಂಡ್ ಥ್ರೋ) ಪ್ಯಾಕಿಂಗ್ ಸಾಮಗ್ರಿಗಳ ಜಾಗತಿಕ ಮಾರುಕಟ್ಟೆ ಮೌಲ್ಯ ಸುಮಾರು 2,01,183 ಶತಕೋಟಿ ರೂಪಾಯಿ. ಅಂದರೆ ಎಷ್ಟು ದೊಡ್ಡ ಅವಕಾಶ ನೀವೇ ಅಂದಾಜು ಮಾಡಿಕೊಳ್ಳಿ. ಪ್ಲಾಸ್ಟಿಕ್ ಕೋಟೆಡ್ ಪ್ಲೇಟ್-ಕಪ್​ಗಳಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದ್ದು, ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸಬೇಕು ಎನ್ನುವ ಜಾಗೃತಿ ಜನರಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ ಭಾರತದಲ್ಲಷ್ಟೇ ಅಲ್ಲ, ಜಾಗತಿಕವಾಗಿಯೂ ಅಡಕೆ ತಟ್ಟೆಗಳಿಗೆ ಬೇಡಿಕೆ ಬಂದಿದೆ. ನಿಮಗೆ ಗೊತ್ತಾ, ಭಾರತದಿಂದ ರಫ್ತಾಗುವ ಅಡಕೆ ತಟ್ಟೆಗಳ ಪೈಕಿ ಶೇ.36 ಅನ್ನು ಅಮೆರಿಕ ತರಿಸಿಕೊಳ್ಳುತ್ತಿದೆ. ನೆದರ್ಲೆಂಡ್​ಗೆ ಶೇ.17, ಜರ್ಮನಿಗೆ ಶೇ.16, ಸ್ಪೆನ್​ಗೆ ಶೇ.10 ಮತ್ತು ಬ್ರಿಟನ್​ಗೆ ಶೇ.6 ರಫ್ತಾಗುತ್ತಿದೆ. ಕೋವಿಡ್ ಬಂದ ನಂತರದಲ್ಲಿ ಹೋಟೆಲ್​ಗಳಲ್ಲೂ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಅಡಕೆ ತಟ್ಟೆ ಬಳಕೆ ಹೆಚ್ಚಾಗುತ್ತಿದೆ.

ಅಡಕೆ ತಟ್ಟೆ ಬಿಸಿನೆಸ್​ಗೆ ಬೇಡ ದೊಡ್ಡ ಬಂಡವಾಳ: ಒಂದು ಅಡಕೆ ಹಾಳೆಯಲ್ಲಿ ಸಾಮಾನ್ಯವಾಗಿ 10 ಇಂಚು (ಒಳಭಾಗದಲ್ಲಿ ಎಂಟೂವರೆ ಇಂಚು) ಹಾಗೂ 12 ಇಂಚು (ಒಳಭಾಗದಲ್ಲಿ 10 ಇಂಚು) ಗಾತ್ರದ ಮೂರು ಊಟದ ತಟ್ಟೆ ಮತ್ತು ಎರಡು ತಿಂಡಿ ಪ್ಲೇಟ್, ಮೂರು ದೊನ್ನೆಗಳನ್ನು ತಯಾರಿಸಬಹುದು. ಊಟದ ತಟ್ಟೆ ಹಾಗೂ ತಿಂಡಿ ಪ್ಲೇಟ್ ತಯಾರಿಸಿದ ನಂತರ ಉಳಿದ ಹಾಳೆಗಳಿಂದ ದೊನ್ನೆಗಳನ್ನು ತಯಾರಿಸಬಹುದು. ಒಟ್ಟಿನಲ್ಲಿ ಒಂದು ಅಡಕೆ ಹಾಳೆಯಲ್ಲಿ ಯಾವುದೇ ವ್ಯರ್ಥವಾಗುವ ಭಾಗ ಇರುವುದಿಲ್ಲ. ಅಡಕೆ ಹಾಳೆಯಿಂದ ಉತ್ಪನ್ನಗಳನ್ನು ತಯಾರಿಸಲು ಅರ್ಧ ಎಚ್.ಪಿ. ಹೈಡ್ರಾಲಿಕ್ ಯಂತ್ರ ಬೇಕಾಗುತ್ತದೆ. 50ರಿಂದ 1 ಲಕ್ಷ ರೂ. ಹೂಡಿಕೆ ಮಾಡಿ ಅಡಕೆ ತಟ್ಟೆ ತಯಾರಿಕೆ ಯಂತ್ರ ಖರೀದಿಸಿ ಉದ್ಯಮ ಶುರು ಮಾಡಬಹುದು. ಇಲ್ಲವೆ, ನೌಕರರನ್ನು ನೇಮಿಸಿಕೊಂಡು 8-10 ಅಡಕೆ ತಟ್ಟೆ ಯಂತ್ರ ಜೋಡಿಸಿ ದೊಡ್ಡ ಮಟ್ಟದ ಆದಾಯ ಗಳಿಸಲು ಅಣಿಯಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಈ ಬಿಸಿನೆಸ್ ಕಟ್ಟಲು ಸಾಧ್ಯವಿದೆ. ಅಡಕೆ ತಟ್ಟೆ ಘಟಕ ಮಾಡಲು ಫ್ಯಾಕ್ಟರಿ ಸೆಟಪ್ ಬೇಕು ಎಂದೇನಿಲ್ಲ, ಮನೆಯಲ್ಲೂ ಅಡಕೆ ಯಂತ್ರ ಅಳವಡಿಸಿ ಬಿಸಿನೆಸ್ ಮಾಡಬಹುದು.

ಸರ್ಕಾರದ ನೆರವು: ಅಡಕೆ ಹಾಳೆಯ ಉತ್ಪನ್ನ ಕೈಗೊಳ್ಳುವವರಿಗೆ ರಾಜ್ಯ ಸರ್ಕಾರದಿಂದ ಸ್ತ್ರೀ ಶಕ್ತಿ ಗುಂಪು ಹಾಗೂ ಸಂಘಟನೆ ಉದ್ಯೋಗಿನಿ ಯೋಜನೆ ಮೂಲಕ ನೆರವು ನೀಡಲಾಗುತ್ತಿದೆ. ಘಟಕ ಆರಂಭಿಸಲು ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೂಡ ಲಭ್ಯ.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಅಡಕೆ ತಟ್ಟೆ ಉದ್ಯಮದ ಬಗ್ಗೆ ಕೋರ್ಸ್: ಕರ್ನಾಟಕದಲ್ಲಿ ಉದ್ಯಮಶೀಲತೆ ಹೆಚ್ಚಬೇಕು. ದುಡಿವ ಕೈಗಳಿಗೆ ಕೆಲಸ ಸಿಗಬೇಕು. ಆತ್ಮನಿರ್ಭರತೆ ನಿಜರೂಪದಲ್ಲಿ ಅನುಷ್ಠಾನಗೊಳ್ಳಬೇಕು ಎನ್ನುವ ದೃಷ್ಟಿಯಿಂದ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಅಡಕೆ ತಟ್ಟೆ ಉದ್ಯಮದ ಬಗ್ಗೆ ಕೋರ್ಸ್ ರೂಪಿಸಲಾಗಿದೆ. ಅಡಕೆ ತಟ್ಟೆ ಬಿಸಿನೆಸ್ ಕಟ್ಟಿ ಲಕ್ಷಗಳಿಂದ ಕೋಟ್ಯಂತರ ರೂಪಾಯಿವರೆಗೆ ಸಂಪಾದಿಸಿರುವ ಯಶಸ್ವಿ ಉದ್ಯಮಿಗಳೇ ಇದರಲ್ಲಿ ಮಾರ್ಗ ದರ್ಶಕರಾಗಿದ್ದಾರೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ, ದುಡಿಮೆಯ ಹಾದಿ ಕಂಡುಕೊಳ್ಳಿ.

ಕೋರ್ಸ್​ನಲ್ಲಿ ಏನಿದೆ ಮಾಹಿತಿ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಮಾರುಕಟ್ಟೆ ಮತ್ತು ಅವಕಾಶಗಳು
  • ಅಗತ್ಯ ಬಂಡವಾಳ
  • ಮೂಲಸೌಕರ್ಯ ಮತ್ತು ಯಂತ್ರೋಪಕರಣಗಳು
  • ಕೆಲಸಗಾರರು ಮತ್ತು ತರಬೇತಿ
  • ಕಚ್ಚಾ ವಸ್ತುಗಳ ಸೋರ್ಸಿಂಗ್ ಹೇಗೆ?
  • ವಿವಿಧ ಅಡಕೆ ಉತ್ಪನ್ನಗಳು ಮತ್ತು ಬೆಲೆ
  • ಉತ್ಪಾದನಾ ಪ್ರಕ್ರಿಯೆ
  • ಮಾರ್ಕೆಟಿಂಗ್ ಬೇಡಿಕೆ
  • ಸ್ಟಾಕ್ ಮತ್ತು ಪೂರೈಕೆ ನಿರ್ವಹಣೆ
  • ರಫ್ತು, ಬೆಲೆ ಮತ್ತು ಲಾಭ
  • ಅಕೌಂಟ್ಸ್ ನಿರ್ವಹಣೆ
  • ಮಾರ್ಗದರ್ಶಕರ ಸಲಹೆ