ಅಂಕಣ

ಪುಟಾಣಿಗಳು ಬರೆದ್ರು ಕರೊನಾ ಕಾವ್ಯ- ಇಂದು ವಿಶ್ವ ಕಾವ್ಯ ದಿನ

ವಿಶ್ವ ಕಾವ್ಯದಿನದ ಅಂಗವಾಗಿ ಸ್ವರಚಿತ ಕವನವನ್ನು ಕಳುಹಿಸುವಂತೆ ವಿಜಯವಾಣಿ ನೀಡಿದ ಕರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಕ್ಕೂ ಅಧಿಕ ಮಕ್ಕಳು ಸ್ಪಂದಿಸಿದ್ದಾರೆ. ಈ ಪೈಕಿ ಬಾಲಕಿಯರ ಪತ್ರವೇ ಅಧಿಕ ಬಂದಿದ್ದು ಆಯ್ದ ಕವನಗಳು ವಿಜಯವಾಣಿ ಪತ್ರಿಕೆಯ ಇಂದಿನ ಸಂಚಿಕೆಯ ಪುಟಾಣಿ ಪುರವಣಿಯಲ್ಲಿ ಪ್ರಕಟವಾಗಿದೆ. ಈ ಪೈಕಿ ಕರೊನಾ ಬಗ್ಗೆ ಬರೆದ ಎರಡು ಕವನಗಳನ್ನು ಸಾಂಕೇತಿಕವಾಗಿ ಇಲ್ಲಿ ಪ್ರಕಟಿಸಲಾಗಿದೆ.

ಕರೊನಾ ಯುಗಾದಿ

ಯುಗಾದಿಯ ಸಿಹಿ ಕಹಿಗೆ

ಕರೊನದ ಕರಿ ನೆರಳು

ಹಬ್ಬದ ಸಂಭ್ರಮ ಕುಂದಿಸಿದೆ ನೀ!

ಮಿತ್ರರ ಜತೆಗೆ ಹೊರಗಡೆ ಆಡದೆ

ಬಂಧುಗಳ ಜತೆಗೆ ಕಾಲವ ಕಳೆಯದೆ

ಮನೆಯಲೇ ಬಂಧಿಯ ಮಾಡಿದೆ ನೀ!

ಬೇವು ಬೆಲ್ಲವ ಸವಿದು

ದೇವರ ಮನದಲಿ ನೆನೆದು

ವಿಶ್ವವು ಕರೊನಾ ಮಾರಿಯಿಂದ ಮುಕ್ತವಾಗಲೆಂದು ಪ್ರಾರ್ಥಿಸುವೆ

ದೇವರು ಎಲ್ಲರಿಗೂ ಆಶೀರ್ವಾದವ ಕರುಣಿಸಲಿ

ಪ್ರಾರ್ಥಿಸುವ ನಾವು ಒಂದಾಗಿ ಜತೆಜತೆಯಲಿ

ಆಚರಿಸೋಣ ಹಬ್ಬವ ಸಂಭ್ರಮದಿ

|ಅನುಷಾ ಬಿ, 5ನೇ ತರಗತಿ, ಮಾರುತಿ ವಿದ್ಯಾಕೇಂದ್ರ ತುಮಕೂರು

ಕರೊನಾ ಕರೊನಾ ಕರೊನಾ

ಬಂದಿರುವುದು ನಮ್ಮ ಊರಿಗೆ ಕರೊನಾ

ತಡೆಯಲಾಗುತ್ತಿಲ್ಲಾ ಇದರ ವೇದನೆಯನ್ನ

ಕರೆಯದೆ ಬಂದಿರುವುದು ಈ ಕರೊನಾ

ಓಡಿಸಲು ಒದ್ದಾಡುತ್ತಿದ್ದಾರೆ ನಮ್ಮ ಈ ಜನ

ಇನ್ನಾದರೂ ತಿನ್ನದೆ ಬದಕಲು ಬಿಡುವರೆ ಹುಳುಹುಪ್ಪಡಿಗಳನ್ನ

ಹೊಟ್ಟೆಗೆ ತಿಂದರೆ ಅನ್ನ ಜೀವನವಾಗುವುದು ಪಾವನ

ಪರಿಪರಿಯಾಗಿ ಬೇಡುವೆ ನಿಮ್ಮನ್ನ

ನೀವು ಬದುಕಲು ಬಿಡಿ ಪ್ರಾಣಿಗಳನ್ನ

ಕಾಪಾಡಿ ಈ ಸುಂದರ ಜಗತ್ತನ್ನ

ಕರೊನಾ ಕರೊನಾ ಕರೊನಾ

ಚೀನಾದಿಂದ ಬಂದಿದೆ ಈ ಮಾರಿ ಕರೊನಾ

ಹೆದರಿಸಿದೆ ಇಡೀ ಜಗತ್ತನ್ನ

ವಿದ್ಯಾರ್ಥಿಗಳಿಗೆ ನೀಡಿದೆ ತುಸು ವಿರಾಮವನ್ನಾ

ಕೆಲವರಿಗೆ ನೀಡಿದೆ ಪರೀಕ್ಷೆಯ ವಿಮುಕ್ತಿಯನ್ನಾ

| ಸಂಚಿತಾ ಎಸ್​ ಗಿರಿ, 6ನೇ ತರಗತಿ, ವಿ.ಎಲ್​.ಎಸ್​ ಇಂಟರ್ ನ್ಯಾಷನಲ್​ ಶಾಲೆ, ಬಸವೇಶ್ವರನಗರ, ಬೆಂಗಳೂರು