ಮೂರು ದಿಕ್ಕುಗಳಲ್ಲಿ ಸಾಗರ ಹೊಂದಿರುವ ಭಾರತ ಅಷ್ಟು ಸುಲಭವಾಗಿ ಸುಮ್ಮನಿರುವಂತಿಲ್ಲ. ಒಂದೆಡೆ ಚೀನಾ, ಮತ್ತೊಂದೆಡೆ ಪಾಕಿಸ್ತಾನ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಸಂಚನ್ನು ಹೆಣೆಯುತ್ತಲೇ ಇರುತ್ತವೆ. ಈ ಷಡ್ಯಂತ್ರದ ಭಾಗವಾಗಿ ಉಗ್ರರು ಕೂಡ ಸಮುದ್ರ ಮಾರ್ಗವಾಗಿ ದಾಳಿ ನಡೆಸಲು ಯತ್ನಿಸುತ್ತಾರೆ. ಇಂಥ ಸನ್ನಿವೇಶದಲ್ಲಿ ದೇಶವನ್ನ್ಲು ಕಣ್ಣಿಟ್ಟು ಕಾಯುವ ನಮ್ಮನೌಕಾಪಡೆಯ ಶೌರ್ಯ, ಸೇವಾನಿಷ್ಠೆಯನ್ನು ಎಷ್ಟು ಹೊಗಳಿದರೂ ಕಡಿಮೆಯೇ. ನೌಕಾಪಡೆ ದಿನದ ನಿಮಿತ್ತ ನಮ್ಮ ನೌಕಾಸೇನೆಯ ಕುರಿತ ಅವಲೋಕನ ಇಲ್ಲಿದೆ.
ದಿನದ ವೈಶಿಷ್ಟ್ಯ
ಡಿ.4 ಭಾರತ ತನ್ನ ನೌಕಾಸೇನೆಯಿಂದ ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ದಿನ. 1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತೀಯ ನೌಕಾಪಡೆ ಮೊದಲ ಬಾರಿ ಹಡಗು ನಿಗ್ರಹ ಕ್ಷಿಪಣಿ ಬಳಸಿ ಪಾಕ್ನ ಮೂರು ಯುದ್ಧ ಹಡಗುಗಳನ್ನು ಕರಾಚಿಯ ಸಮುದ್ರದಲ್ಲಿ ಹೊಡೆದುಹಾಕಿತು. ಆ ದಿನದ ನೆನಪಿಗಾಗಿ ನೌಕಾದಿನ ಆಚರಿಸಲಾಗುತ್ತದೆ.
ಮಹತ್ವದ ವಿಚಾರಗಳು
- ಬ್ರಿಟಿಷರು 1612ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನೌಕಾಪಡೆ ಸ್ಥಾಪಿಸಿದರು. 1950 ಡಿ.26ರಂದು ಇದಕ್ಕೆ ಭಾರತೀಯ ನೌಕಾಪಡೆ ಎಂದು ನಾಮಕರಣ ಮಾಡಲಾಯಿತು.
- ಭಾರತೀಯ ನೌಕಾಪಡೆ 1961ರಲ್ಲಿ ಗೋವಾ ವಿಮೋಚನೆ ಸಂದರ್ಭದಲ್ಲಿ ಪೋರ್ಚುಗೀಸ್ ನೌಕಾಪಡೆ ವಿರುದ್ಧ ಮೊದಲ ಕಾರ್ಯಾಚರಣೆ ನಡೆಸಿತು
- ಬ್ರಹ್ಮೋಸ್ ಕ್ಷಿಪಣಿ ಭಾರತೀಯ ನೌಕಾಪಡೆಯ ಅತ್ಯಂತ ವೇಗದ ನೌಕಾಕ್ಷಿಪಣಿ ಎಂಬ ಗೌರವಕ್ಕೆ ಪಾತ್ರವಾಗಿದೆ
- ಕೇರಳದ ಕಣ್ಣೂರಿನ ಎಳಿಮಲಾ ನೇವಲ್ ಅಕಾಡೆಮಿ ಏಷ್ಯಾದಲ್ಲೇ ದೊಡ್ಡ ನೇವಲ್ ಅಕಾಡೆಮಿ. ಮಹಿಳಾ ನೌಕಾ ಪೈಲಟ್ ಶುಭಾಂಗಿ ಸ್ವರೂಪ್ ಇಲ್ಲಿ ನೇಮಕಗೊಂಡಿದ್ದಾರೆ.
- ಛತ್ರಪತಿ ಶಿವಾಜಿ ‘ಭಾರತೀಯ ನೌಕಾಪಡೆಯ ಜನಕ’ ಎಂದು ಖ್ಯಾತಿ ಪಡೆದಿದ್ದರು.
- ಐಎನ್ಎಸ್ ವಿರಾಟ್, ಭಾರತೀಯ ನೌಕಾನೆಲೆಯ ಅತ್ಯಂತ ಹಳೆಯ ವಿಮಾನ ವಾಹಕ ನೌಕೆ.
7516 ಕಿ.ಮೀ: ಭಾರತದ ನೌಕಾ ವ್ಯಾಪ್ತಿ
ಭಾರತದ ಗುರಿ, ನಿರೀಕ್ಷೆ: 3 ವಿಮಾನವಾಹಕ ನೌಕೆಗಳು, 4 ನ್ಯೂಕ್ಲಿಯರ್ ಸಬ್ವೆುರಿನ್, 16 ಸಾಂಪ್ರದಾಯಿಕ ಸಬ್ವೆುರಿನ್, 32 ದಾಳಿ ಸಮರ ನೌಕೆ, ಸೈನಿಕರನ್ನು ಕ್ಷಿಪ್ರಗತಿಯಲ್ಲಿ ದೂರದ ಪ್ರದೇಶಗಳಿಗೆ ಸಾಗಿಸಬಲ್ಲ 4 ಸಾಗಣೆ ನೌಕೆಗಳು, 4 ತೈಲ ಸಾಗಣೆ ಟ್ಯಾಂಕರ್, 12 ಕ್ಷಿಪಣಿ ಉಡಾವಣಾ ನೌಕೆ, 12 ಮೈನ್ ನಾಶಕ ನೌಕೆ, 12 ಗಸ್ತು ನೌಕೆ , 20 ವೇಗವಾಗಿ ದಾಳಿ ನಡೆಸುವ ನೌಕೆ, 12 ಗಸ್ತು ವಿಮಾನ, 24 ಮಲ್ಟಿರೋಲ್ ಮತ್ತು 36 ಲಘು ಹೆಲಿಕಾಪ್ಟರ್ಗಳನ್ನು ಹೊಂದುವ ಮೂಲಕ ಭಾರತ ತನ್ನ ನೌಕಾದಳವನ್ನು ಇನ್ನಷ್ಟು ಬಲಗೊಳಿಸಲು ಉದ್ದೇಶಿಸಿದೆ.
ಆತ್ಮನಿರ್ಭರ: 4 ದೇಶೀಯ ನಿರ್ವಿುತ ಜಲಾಂತರ್ಗಾಮಿ ಯುದ್ಧ ನೌಕೆಗಳಾದ ಐಎನ್ಎಸ್ ಕವರಟ್ಟಿ ನೌಕಾಪಡೆಗೆ ಸೇರ್ಪಡೆಯಾಗಿವೆ. ಹಡಗಿನಲ್ಲಿ ಶೇ.90 ಸ್ಥಳೀಯ ಸಾಧನ, ಸಲಕರಣೆ ಬಳಸಲಾಗಿದೆ.
ನಿರ್ಮಾಣಕ್ಕೂ ಸೈ: ಹಲವು ಸ್ವದೇಶಿ ನಿರ್ವಿುತ ಯುದ್ಧನೌಕೆ, ಸಬ್ವೆುರಿನ್ಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಕೊಚ್ಚಿ, ವಿಶಾಖಪಟ್ಟಣ, ಮುಂಬೈ ಸೇರಿ ವಿವಿಧೆಡೆ ಯುದ್ಧನೌಕೆ ಕಟ್ಟುವ ಕೆಲಸ ನಡೆಯುತ್ತಿದೆ.
ಪ್ರಮುಖ ಕಾರ್ಯಾಚರಣೆ
- ಆಪರೇಷನ್ ಕ್ಯಾಕ್ಟಸ್- ಮಾಲ್ಡೀವ್ಸ್ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ
- ಆಪರೇಷನ್ ಲೀಚ್-ಮ್ಯಾನ್ಮಾರ್ನಲ್ಲಿ ನಡೆದ ಕಾರ್ಯಾಚರಣೆ
- ಆಪರೇಷನ್ ಪವನ್-ಶ್ರೀಲಂಕಾದಲ್ಲಿ ನಡೆದ ಕಾರ್ಯಾಚರಣೆ
- ಕಾರ್ಗಿಲ್ ಯುದ್ಧ: ಆಪರೇಷನ್ ಬ್ಲಾ್ಯಕ್ ಟೊರ್ನಾಡೊ, ಆಪರೇಷನ್ ಸೈಕ್ಲೋನ್
- ಮುಂಬೈ ದಾಳಿ- 2008ರಲ್ಲಿ ಉಗ್ರರ ದಾಳಿಯನ್ನು ಹತ್ತಿಕ್ಕಿದ್ದು
ಹೆಗ್ಗಳಿಕೆಗಳು
- ಭಾರತೀಯ ನೌಕಾಪಡೆ ಜಗತ್ತಿನ 5ನೇ ಅತಿ ದೊಡ್ಡ ನೌಕಾಪಡೆ
- 80 ಸಾವಿರ ಜನರು ಕಾರ್ಯ ನಿರತ.
- ಏಷ್ಯಾ ಖಂಡದಲ್ಲಿ ರುವ 2 ವಾಯು ಯುದ್ಧನೌಕೆಗಳಲ್ಲಿ ಐಎನ್ಎಸ್ ವಿರಾಟ್ ಒಂದು
- 2023ರ ವೇಳೆಗೆ ವಿಶ್ವದ ಶಕ್ತಿಶಾಲಿ ನೌಕಾಸೇನೆ ಹೊಂದಿರುವ 3ನೇ ರಾಷ್ಟ್ರದ ಗೌರವ ಭಾರತಕ್ಕೆ
ಭಾರತದ ನೌಕಾಶಕ್ತಿ
- 67,252 ಪೂರ್ಣ ಪ್ರಮಾಣದ ಅಧಿಕಾರಿಗಳು
- 55,000 ಅರೆಕಾಲಿಕ ಸಿಬ್ಬಂದಿ
- 137 ದೊಡ್ಡ ಗಾತ್ರದ ಯುದ್ಧ ನೌಕೆ, 14 ಚಿಕ್ಕ ಯುದ್ಧನೌಕೆಗಳಿವೆ
- 300 ವಿಮಾನಗಳಿವೆ
- 1-ವಿಮಾನ ಹೊತ್ತೊಯ್ಯುವ ನೌಕೆ,
- 1-ಭೂಮಿ ಮತ್ತು ನೀರಿನ ಮೇಲೆ ಚಲಿಸುವ ವಾಹನ ನೌಕೆ
- 8-ಲ್ಯಾಂಡಿಂಗ್ ನೌಕೆ
- 22-ಜಲಾಂತರ್ಗಾಮಿ ನೌಕೆ