ಅಂಕಣ

ಸ್ವಯಾರ್ಜಿತ ಆಸ್ತಿಯಿದ್ದರೆ ಇಷ್ಟದಂತೆ ವಿಲ್‌ ಮಾಡಬಹುದು: ಕೇಸ್‌ ಹಾಕಿದ್ರೂ ನಿಲ್ಲಲ್ಲ...

suchetana
ನನ್ನ ತಂದೆ ಅವರ ಸ್ವಯಾರ್ಜಿತ ಆಸ್ತಿಯನ್ನು ನನಗೆ ಮತ್ತು ನನ್ನ ತಮ್ಮನಿಗೆ ಮಾತ್ರ ವಿಲ್ ಮಾಡಲು ಸಿದ್ಧರಿದ್ದಾರೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರು ಬಡವರಾಗಿದ್ದರೂ ಅವರಿಗೇನೂ ಕೊಡಬೇಕಿಲ್ಲ ಎಂದು ನನ್ನ ತಮ್ಮ ಹೇಳುತ್ತಿದ್ದಾನೆ. ಮುಂದೆ ನನ್ನ ಅಕ್ಕಂದಿರು ಭಾಗಕ್ಕೆ ಕೇಸು ಹಾಕಬಹುದೇ?

ಉತ್ತರ: ನಿಮ್ಮ ತಂದೆ ಸ್ವಯಾರ್ಜಿತ ಆಸ್ತಿಯನ್ನು ಅವರ ಇಷ್ಟದಂತೆ ವಿಲ್​ ಮಾಡಬಹುದು. ವಿಲ್ ಮಾಡುವಾಗ ಏಕೆ ಹೆಣ್ಣುಮಕ್ಕಳಿಗೆ ಏನೂ ಕೊಡುತ್ತಿಲ್ಲ , ಗಂಡು ಮಕ್ಕಳಿಗೇ ಎಲ್ಲ ಆಸ್ತಿ ಕೊಡುತ್ತಿದ್ದಾರೆ ಎನ್ನುವುದನ್ನು ಬರೆಸಿರಬೇಕು.

ಸಾಧ್ಯವಾದರೆ ನೋಂದಣಿ ಮಾಡಿಸಿದರೆ ಒಳ್ಳೆಯದು. ವಿಲ್ ಬೇರೆಯವರ ಒತ್ತಡ ಒತ್ತಾಯದಿಂದ ಮೋಸದಿಂದ ಆಗಿರದೇ ಇದ್ದರೆ, ಸ್ವ ಇಚ್ಛೆಯಿಂದ ಆಗಿದ್ದರೆ ಹೆದರಬೇಕಿಲ್ಲ. ಅಕ್ಕಂದಿರು ಕೇಸು ಹಾಕಿದರೂ ನಿಲ್ಲುವುದಿಲ್ಲ.