ಒಂದು ಸಿಂಹಾವಲೋಕನ ಮಾಡಿದರೆ ಸ್ವಾಮೀಜಿ ಜಾಗತಿಕ ಸ್ಥಿತಿಗತಿಗಳ ಮೇಲೆ ಬೀರಿದ ಪ್ರಭಾವ ಯಾರನ್ನೂ ನಿಬ್ಬೆರಗಾಗಿಸುವಂಥದ್ದು. ಲೀಗ್ ಆಫ್ ನೇಷನ್ಸ್ಗಿಂತ ಮುಂಚೆ, ವಿಶ್ವಸಂಸ್ಥೆಗಿಂತ ಮುಂಚೆ ಆ ಎರಡೂ ಸಂಸ್ಥೆಗಳ ಧ್ಯೇಯೋದ್ದೇಶಗಳನ್ನು ಮುಂದಿನ ಪೀಳಿಗೆಗಳ ಅಸ್ತಿತ್ವಕ್ಕೆ ಅನಿವಾರ್ಯ ಎಂಬುದನ್ನು ಅದೆಷ್ಟು ಸಲ ತಮ್ಮ ಪಾಶ್ಚಾತ್ಯ ಭಾಷಣಗಳಲ್ಲಿ ಸ್ಪಷ್ಟೀಕರಿಸಿದರೋ! ಇದನ್ನು ಯುನೆಸ್ಕೋ ಅಧಿಕಾರಿಗಳು ಗುರುತಿಸಿದರು ಮತ್ತು ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಮಾತುಗಳಲ್ಲಿ ಪ್ರಸ್ತಾಪಿಸಿದರು ಕೂಡ. ಇಂದು ಯುನೆಸ್ಕೋದಲ್ಲಿರುವ ಏಕೈಕ ಧಾರ್ವಿುಕ ಪ್ರತಿನಿಧಿ ರಾಮಕೃಷ್ಣ ಮಹಾಸಂಘದ ಸಂನ್ಯಾಸಿ.
‘ಇನ್ನು ಮುಂದಿನ ದಿನಗಳಲ್ಲಿ ಯಾವ ಸಮಸ್ಯೆಯೂ ಸ್ಥಳೀಯ ರೀತಿಯದ್ದಾಗಿರುವುದಿಲ್ಲ. ಇಡೀ ವಿಶ್ವವನ್ನೇ ತನ್ನೆಡೆಗೆ ಎಳೆದು ತಾರದೆ ಒಂದು ಕಣವನ್ನೂ ನಾವು ಚಲಿಸುವಂತೆ ಮಾಡಲಾರೆವು’ ಎಂದು ಘೊಷಿಸಿ ಪ್ರತಿ ಕಣದಲ್ಲೂ ಒಂದು ವಿಶ್ವವೇ ಅಡಗಿದೆ ಎಂಬ ಪ್ರಾಚೀನ ಭಾರತದ ಶ್ರೇಷ್ಠ ಕೃತಿಗಳಲ್ಲೊಂದಾದ ಯೋಗವಾಸಿಷ್ಠದ ಮಹಾಸತ್ಯ ಪಾಶ್ಚಾತ್ಯ ಜಗತ್ತಿಗೆ ಅರಿವಾಗುವಂತೆ ಅವರ ನಾಡಿನಲ್ಲೇ ಉದ್ಧರಿಸಿ ‘ವಸುಧೈವ ಕುಟುಂಬಕಂ’ ತತ್ವದ ಕಾಲಾತೀತತೆಯನ್ನು ಮನಗಾಣಿಸಿದರು. ವೇದಗಳನ್ನು ಕುರಿತ ಅವರ ಚಿಂತನೆಗಳು, ವೇದಾಂತದ ವೈಜ್ಞಾನಿಕ, ವಿಶಾಲ, ಸಾರ್ವಕಾಲಿಕ ಲಕ್ಷಣಗಳು ಸಂಶಯಕ್ಕೆಡೆಯಿಲ್ಲದಂತೆ ಸ್ಪಷ್ಟಪಡಿಸಲ್ಪಟ್ಟಾಗ ಅಮೆರಿಕನ್ನರ ಪ್ರತಿಕ್ರಿಯೆ ಬಂದಿದ್ದು, ‘ನಮ್ಮಲ್ಲೂ ವೇದಾಂತ ಸೊಸೈಟಿಗಳನ್ನು ಸ್ಥಾಪನೆ ಮಾಡಿ’ ಎಂಬ ಪರೋಕ್ಷ ಬೇಡಿಕೆಗಳ ರೂಪದಲ್ಲಿ. ಇದಕ್ಕೆ ಉತ್ತರವೇ ನ್ಯೂಯಾರ್ಕ್ನಲ್ಲಿ 1894 ನವೆಂಬರ್ನಲ್ಲಿ ಸ್ಥಾಪಿತವಾದ ವೇದಾಂತ ಸೊಸೈಟಿ. ಇಡೀ ಅಮೆರಿಕನ್ ಶಿಕ್ಷಿತ ವರ್ಗ ಒಂದು ಹೊಸಲೋಕವೇ ಸೃಷ್ಟಿಯಾದಂತೆ ಸಂಭ್ರಮಿಸಿತು. ಅವರ ಉಪನ್ಯಾಸಗಳನ್ನು ಕೇಳಿ ಮತ್ತು ವೃತ್ತಪತ್ರಿಕೆಗಳಲ್ಲಿ ಓದಿ. ಅಮೆರಿಕದ ಪ್ರತಿಷ್ಠಿತ ಮನೆತನವೊಂದರಲ್ಲಿ ಹೆಣ್ಣುಮಗು ಜನಿಸಿದಾಗ ಅವಳ ಹೆಸರನ್ನು ‘ಸುಂದರಿ’ ಎಂಬ ಹಿಂದು ಹೆಸರನ್ನು ಇಡಬೇಕು ಎಂದು ಮನೆಯಲ್ಲಿ ರ್ಚಚಿಸಲಾಯಿತು. ಇದು ಅಮೆರಿಕನ್ ಸಮಾಜದಲ್ಲಿ ಉಂಟಾದ ಭಾರತೀಯ ಸಾಂಸ್ಕೃತಿಕ ಪ್ರಭಾವಕ್ಕೆ ಮತ್ತು ಮಾನಸಿಕಸ್ತರದಲ್ಲಿ ಅಮೆರಿಕ ಭಾರತದೆಡೆಗೆ ತಿರುಗುತ್ತಿದ್ದುದರ ಉದಾಹರಣೆ.
ಪ್ರತಿಯೊಬ್ಬ ಅಮೆರಿಕನ್ ಕೂಡ ವಿವೇಕಾನಂದರನ್ನು ಸಂಧಿಸಬೇಕು ಮತ್ತು ಅವರ ಮಾತುಗಳನ್ನು ಹೇಳಬೇಕು ಎಂದು ಸಮಾಜದ ಪ್ರತಿಷ್ಠಿತರು ಹೇಳಿಕೆಗಳನ್ನು ಕೊಡತೊಡಗಿದರು. ಅಮೆರಿಕದ ಅಂದಿನ ವಿಶ್ವಮಾನ್ಯ ವಿಜ್ಞಾನಿಗಳ, ತತ್ವಜ್ಞರ, ಚಿಂತಕರ, ವೈದ್ಯರ, ಸಾಮಾಜಿಕ ಪ್ರತಿಷ್ಠಿತರ ಅಷ್ಟೇಕೆ ಸಿನಿಮಾ ನಟಿಯರ, ಓಪೆರಾ ಸಂಗೀತಗಾರ್ತಿಗಳ, ವಿಶ್ವದ ಅತ್ಯಂತ ಶ್ರೀಮಂತ ರಾಕ್ಫೆಲ್ಲರ್ನ ಗುರು ಮತ್ತು ಮಾರ್ಗದರ್ಶಕ ವಿವೇಕಾನಂದರೇ ಆದರು. ಅಮೆರಿಕನ್ ಮಹಿಳೆ ಮೇರಿ ಲೂಯಿ ಬರ್ಕ್ ಬರೆದ ‘ಅಮೆರಿಕದಲ್ಲಿ ವಿವೇಕಾನಂದರು- ಹೊಸ ಸಂಶೋಧನೆಗಳು’ ಪುಸ್ತಕ ಈ ಎಲ್ಲ ವಿವರಗಳನ್ನು ಹೊರಗೆಡುಹುತ್ತದೆ. ‘ಅಮೆರಿಕ ಸೀನಿದರೆ ಇಂಗ್ಲೆಂಡಿಗೆ ನೆಗಡಿ ಬರುತ್ತದೆ’ ಎನ್ನುವ ಮಾತಿನಂತೆ ಸ್ವಾಮೀಜಿಯ ಈ ಮಹಾನ್ ಯಶಸ್ಸು ಅಟ್ಲಾಂಟಿಕ್ನ ಪೂರ್ವ ತೀರಕ್ಕೆ ಹಬ್ಬಿ ಇಂಗ್ಲೆಂಡ್ ಮತ್ತು ಅಲ್ಲಿಂದ ರಷ್ಯಾಗಳಿಗೂ ಪಸರಿಸಿ ಇಡೀ ಪಾಶ್ಚಾತ್ಯ ಜಗತ್ತು ಭಾರತದ ಬಗ್ಗೆ ಗೌರವಭಾವ ತಳೆಯುವಂತಾಗಿ ಸುಪ್ರಸಿದ್ಧ ರಷ್ಯನ್ ಚಿಂತಕ ಟಾಲ್ಸ್ಟಾಯ್ ನೊಬೆಲ್ ವಿಜೇತ ರೋಮೈರೋಲಾರಿಗೆ ಬರೆದ ಪತ್ರದಲ್ಲಿ ‘ಭಾರತ ಸ್ವಾತಂತ್ರ್ಯಕ್ಕೆ ಅರ್ಹವಾಗಿದೆ’ ಎಂಬ ಮಾತೇ ಮುಂದೆ ವಿಲ್ಡ್ಯೂರೆಂಟರ ‘ಅ ್ಚಠಛಿ ್ಛ್ಟ ಐಛಜಿಚ’ ಪುಸ್ತಕದ ಜನನಕ್ಕೆ ಕಾರಣವಾಯಿತು. ಅಮೆರಿಕನ್ನರಂತೂ ತಮ್ಮನ್ನು ‘ಆರ್ಯರೇ’ ಎಂದೂ ಭಾರತೀಯರ ಸೋದರಸಂಬಂಧಿಗಳೆಂದೂ ಪರಿಗಣಿಸಿ ಸಾರ್ವಜನಿಕವಾಗಿಯೇ ಅದನ್ನು ಪ್ರಕಟಪಡಿಸಿದರು.
ಅಮೆರಿಕದ ಶ್ವೇತಭವನದಲ್ಲಿ ಅಮೆರಿಕವನ್ನು ಕಟ್ಟಿದ ಮೂವತ್ತು ಜನರ ಚಿತ್ರಪಟಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಇಪ್ಪತ್ತನೆಯದ್ದು ಸ್ವಾಮಿ ವಿವೇಕಾನಂದರದ್ದು. ಭಾರತದ ಪಾರ್ಲಿಮೆಂಟಿನಲ್ಲೋ, ಕರ್ನಾಟಕದ ವಿಧಾನಸೌಧದಲ್ಲೋ ವಿವೇಕಾನಂದರ ಚಿತ್ರವಿಲ್ಲ. ಪ್ರಜ್ಞಾವಂತರಾಗುವುದು, ಬುದ್ಧಿವಂತರಾಗುವುದು ಅಷ್ಟು ಸುಲಭವೇ? ‘ನನ್ನ ಯೌವ್ವನದ ಕಾಲದಲ್ಲಿ ವಿವೇಕಾನಂದರು ನನ್ನ ಮೇಲೆ ಬೀರಿದ ಪ್ರಭಾವವೆಷ್ಟು ಎಂಬುದನ್ನು ವರ್ಣಿಸಲು ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದ ಕುವೆಂಪು ಒಂದು ಸಂದರ್ಭದಲ್ಲಿ ‘ಪುಟ್ಟಪ್ಪ ಎಂದೋ ತೀರಿಹೋದ ಈಗ ಇಲ್ಲಿ ಉಳಿದಿರುವುದು ವಿವೇಕಾನಂದರು ಮಾತ್ರ’ ಎಂದೂ ಉಸುರಿದ್ದುಂಟು. ಗಾಂಧಿ, ಸುಭಾಷ್, ಜೆಮ್ೆಡ್ಜಿ ಟಾಟಾರ ರಾಷ್ಟ್ರಸೇವೆಯ ಹಿಂದೆ, ವೀರ ಸಾವರ್ಕರ್, ಉಮೇಶ್ ಚಂದ್ರ ಚಟರ್ಜಿ, (ಸರೋಜಿನಿ ನಾಯ್ಡುರವರ ಸೋದರ) ಮದನ್ಲಾಲ್ ಧಿಂಗ್ರಾ ಮುಂತಾದ ಕ್ರಾಂತಿಕಾರಿಗಳ ಜನ್ಮದಾಣವಾದ ಲಂಡನ್ನಿನ ‘ಇಂಡಿಯಾ ಹೌಸ್’ನ್ನು ಹುಟ್ಟಿಹಾಕಿದ ಶ್ಯಾಮಜಿ ಕೃಷ್ಣವರ್ಮರ ಹಿಂದೆ ನಾವು ಕಾಣುವುದು ವಿವೇಕಾನಂದರ ಚಿಂತನೆಯನ್ನು. ಈ ಕೃಷ್ಣವರ್ಮ ಮತ್ತು ಹರವಿಲಾಸ್ ಸಾರದಾ ಸ್ವಾಮೀಜಿ ರಾಜಸ್ಥಾನದಲ್ಲಿ ಪರಿವ್ರಾಜಕರಾಗಿದ್ದಾಗ ಅವರಿಂದ ಪ್ರಭಾವಿತರಾದ ಯುವಕರು. ಸಂವಿಧಾನದ ಸಾರದಾ ಆಕ್ಟ್ನ್ನು ನಿರೂಪಿಸಿದ್ದು (ಬಾಲಕಿಯರ ವಿವಾಹದ ವಯಸ್ಸನ್ನು ಹೆಚ್ಚಿಸಿದ್ದು) ಇದೇ ಸಾರದಾನೇ. ಇಂದು ಪ್ರಪಂಚದಾದ್ಯಂತ ಭತ್ತ ಮತ್ತು ಗೋಧಿ ಉತ್ಪನ್ನಗಳಲ್ಲಿ ಕ್ರಾಂತಿಕಾರಿ ಸಂವರ್ಧನೆ ಆಗಿದ್ದರೆ ಆ ಸಂಶೋಧನೆಯ ಹಿನ್ನೆಲೆ ರಾಕ್ ಫೆಲರ್ ಫೌಂಡೇಶನ್ ಮತ್ತು ಮುಂದೆ ಮೈಸೂರಿನ ಅರಸ ಕೃಷ್ಣರಾಜ ಒಡೆಯರ್ ರಾಜರ್ಷಿಯಂತೆ ಬಾಳಿದ್ದು ಅವರ ತಂದೆಯ ಮೇಲೆ ಸ್ವಾಮಿ ವಿವೇಕಾನಂದರು ಬೀರಿದ ಪ್ರಭಾವದಿಂದ ಎನ್ನುವುದನ್ನು ಗ್ರಹಿಸುವುದಕ್ಕೆ ಕಷ್ಟವಲ್ಲ.
ಚಾಮರಾಜೇಂದ್ರ ಒಡೆಯರ್ ಮತ್ತು ಸ್ವಾಮಿ ವಿವೇಕಾನಂದರ ನಡುವಿನ ಸಂಬಂಧ ಮತ್ತು ಮಾತುಗಳನ್ನೇ ಗಮನಿಸಿದರೆ. ಸ್ವಯಂ ವಿವೇಕಾನಂದರೇ ತಮ್ಮ ಪ್ರಥಮ ಶಿಷ್ಯ ಸ್ವಾಮಿ ಸದಾನಂದರ ಮುಂದೆ ಹೇಳಿದಂತೆ ಅವರ ಗುರು ರಾಮಕೃಷ್ಣರು ಅವರಿಗೆ ವಿಧಿಸಿದ ಜವಾಬ್ದಾರಿಯೇ ಇಡೀ ವಿಶ್ವದ ಆಧ್ಯಾತ್ಮಿಕ ಪುನರುತ್ಥಾನ. ಹಾಗಾದರೆ ಮೇಲೆ ಹೇಳಿದ್ದಕ್ಕೂ ಆಧ್ಯಾತ್ಮಿಕ ಪುನರುತ್ಥಾನಕ್ಕೂ ಸಂಬಂಧವೇನು ಎಂದು ಕೇಳಿದರೆ ಉಪನಿಷತ್ತಿನ ಸಂದೇಶಗಳು ಆಧ್ಯಾತ್ಮಿಕ ಪುನರುತ್ಥಾನ ಹಾಗೂ ಲೌಕಿಕ ಪುನರುತ್ಥಾನವನ್ನು ಜೊತೆ ಜೊತೆಗೇ ತೆಗೆದುಕೊಂಡು ಹೋಗುತ್ತವೆ. ಅದೇ ಅದ್ವೆ ೖತ ವೇದಾಂತದ ಮಹತ್ತು. ಅದರ ಪ್ರಕಾರ ಜೀವನ ಮತ್ತು ತಪಸ್ಸು, ಲೌಕಿಕತೆ ಮತ್ತು ಆಧ್ಯಾತ್ಮಿಕತೆ, ವಿಜ್ಞಾನ ಮತ್ತು ಧರ್ಮ ಬೇರೆ ಬೇರೆಯಲ್ಲ.ಈ ಎಲ್ಲ ಕ್ರಾಂತಿಕಾರಿ ಬದಲಾವಣೆಗಳೂ ಅವರು ಹುಟ್ಟಿದ ಕೇವಲ ನೂರೇ ವರ್ಷದಲ್ಲಿ ಸಾಧಿಸಲ್ಪಟ್ಟವು.
ಅದು ಸರಿ! ಮುಖ್ಯವಾದ ವಿಷಯವೆಂದರೆ ಭಾರತ ಅವರನ್ನು ಸ್ವೀಕರಿಸಿದ್ದು ಎಷ್ಟು ಎಂಬುದು. ಈ ವಿಷಯ ಎತ್ತಿದರೆ ಭಾರತದ ನೀತಿಗಳನ್ನು ಯಾರು ರೂಪಿಸುತ್ತಿದ್ದಾರೆ? ಭಾರತೀಯರೋ ಭಾರತದ ವಿರೋಧಿಗಳೋ ಎಂದು ಆಶ್ಚರ್ಯವಾಗದಿರದು. ಬ್ರಹ್ಮಲೀನ ಸ್ವಾಮಿ ರಂಗನಾಥಾನಂದಜೀಯವರು ಬೇಸರಿಸಿಕೊಂಡು ‘ದಿ ವೀಕ್’ ಪತ್ರಿಕೆಗೆ ಬರೆದ ಲೇಖನದ ಶೀರ್ಷಿಕೆ ‘ಐಛಜಿಚ ್ಞಜ್ಝಛ್ಚಿಠಿಛಿಛ ಜಜಿಞ ಚ್ಛಠಿಛ್ಟಿ ಜ್ಞಿಛಛಿಟಛ್ಞಿಛಛ್ಞಿ್ಚ’ ‘ಸ್ವಾತಂತ್ರೊ್ಯೕತ್ತರ ಭಾರತ ಅವರನ್ನು ನಿರ್ಲಕ್ಷಿಸಿದೆ’ ಎಂದು ಮೊನ್ನೆ ತಾನೇ ಸಂಪನ್ನಗೊಂಡ ಮೈಸೂರಿನ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಸಮ್ಮೇಳನದಲ್ಲಿ ಭಾಗವಹಿಸಿದ್ದ ನಾಡೋಜ ಹಂ. ಪಾ. ನಾ. ತಮ್ಮ ಭಾಷಣದಲ್ಲಿ ಹೇಳಿದ್ದು ಸರ್ಕಾರ ಕೊನೆಯಪಕ್ಷ ಕುವೆಂಪು ರಚಿತವಾದ ವಿವೇಕಾನಂದರ, ರಾಮಕೃಷ್ಣರ ಜೀವನಚರಿತ್ರೆ ಮತ್ತು ‘ಕೊಲಂಬೋದಿಂದ ಅಲ್ಮೋರಕೆ’ ಪುಸ್ತಕಗಳನ್ನಾದರೂ ಕಾಲೇಜ್ ವಿದ್ಯಾರ್ಥಿಗಳಿಗೆ ಪಠ್ಯಗಳನ್ನಾಗಿಸಬೇಕು ಎಂದು. ಇದು ಇಂದು ನಿನ್ನೆಯ ಒಕ್ಕೊರಲ ಮಾತಲ್ಲ. ಕಳೆದ ಐವತ್ತು ವರ್ಷಗಳಿಂದ ಅನುರಣಿತಗೊಳ್ಳುತ್ತಿರುವ ಕೂಗು. ಆದರೆ ಅದು ಹಿಂದುತ್ವ(?)ದ ಸರ್ಕಾರವಿರಲಿ ಜಾತ್ಯತೀತ(?) ಸರ್ಕಾರವಿರಲಿ ಈ ವಿಷಯದಲ್ಲಿ ಅದ್ಭುತ ಐಕಮತ್ಯ ತೋರಿಸಿದ್ದಾರೆ. ಅವರ ಮಾನದಂಡಗಳೇ ಬೇರೆ. ವಿವೇಕಾನಂದರ ಬಳಿ ಯಾವುದೇ ವೋಟ್ಬ್ಯಾಂಕಿಲ್ಲ ಏಕೆಂದರೆ ಅವರು ಯಾವುದೇ ಒಂದು ಜಾತಿಗೆ ಸೇರಿಲ್ಲ. ಎಲ್ಲರಿಗೂ ಸೇರಿದವರು. ವೋಟ್ಬ್ಯಾಂಕ್ ಇಲ್ಲದಿದ್ದಲ್ಲಿ ಮನ್ನಣೆ ಏಕೆ? ಹಿಂದೆ ದೊಡ್ಡ ಜಾತಿ ಇಲ್ಲದಿದ್ದಲ್ಲಿ ಮನ್ನಣೆ ಏಕೆ? ಇದು ಜಾತ್ಯತೀತ ಭಾರತದ ಮಹತ್ವದ ನಿರ್ಣಯ! ಹೀಗಲ್ಲವೇ ಪ್ರಜಾಪ್ರಭುತ್ವ ಇರಬೇಕಾದದ್ದು! ಪ್ರಜಾಪ್ರಭುತ್ವ, ಜಾತ್ಯತೀತತೆ ಇವುಗಳನ್ನು ಮೀರಿಸಿದ ತಮಾಷೆಗಳೇ ನನಗೆ ಕಾಣುತ್ತಿಲ್ಲ! ಕತ್ತೆಯೊಂದು ಸಿಂಹದ ತೊಗಲು ಹಾಕಿಕೊಂಡರೆ ಸಿಂಹವಾಗದು, ಸಿಂಹದ ರಕ್ತ ಅದರಲ್ಲಿ ಸಂಚಾರವಾಗಬೇಕು. ಇಡೀ ವಿಶ್ವವೇ ಗೌರವಿಸುವ, ಇವರು ನಮ್ಮವರು ಎಂದು ಒಕ್ಕೊರಲಿನಿಂದ ಕಾಣುವ ಒಬ್ಬ ವ್ಯಕ್ತಿ ಸ್ವಾಮಿ ವಿವೇಕಾನಂದರು.
ವಿವೇಕಾನಂದರ ಚಿಂತನೆಯ ಬಗ್ಗೆ ಸರ್ವಾಧಿಕಾರಿ ಸ್ಟಾ್ಯಲಿನ್ ಬಳಿ ಮಾತಾಡುತ್ತ ಅವರ ಸ್ನೇಹಿತ ಮತ್ತು ಸುಪ್ರಸಿದ್ಧ ಚಿಂತಕ ಪಾವಲೋವ್ ಹೇಳಿದ್ದು ‘ಏಛಿ ಜಿಠ fl ಟ್ಛ ್ಚಞಞ್ಠ್ಞಠಠಿ ಜಿಛಛಿಚಠ’ ಎಂದು. ಇಂಡೋನೇಷ್ಯಾದ ಅಂದಿನ ಅಧ್ಯಕ್ಷ ಡಾ. ಸುಕಾನೋ ಸ್ವಾಮೀಜಿಯವರಿಂದ ತೀವ್ರವಾಗಿ ಪ್ರಭಾವಿತರಾಗಿದ್ದವರು. ಅವರೊಬ್ಬ ಮುಸ್ಲಿಂ. ಕಟ್ಟರ್ ಹಾಗೂ ಸಂಪ್ರದಾಯಸ್ಥ ಹಿಂದುವಾದಿಗಳೂ ವಿವೇಕಾನಂದರನ್ನೇ ಆದರ್ಶವನ್ನಾಗಿ ಸ್ವೀಕರಿಸಿರುವುದು. ಸ್ವಾಮೀಜಿಯ ಭಾಷಣಗಳನ್ನು ಕೇಳಿದ ಅಮೆರಿಕನ್ ಯಹೂದಿಯೊಬ್ಬ ಉದ್ಗರಿಸಿದ್ದು, ‘ಅವರು ಹೇಳಿದ ಎಷ್ಟೋ ವಿಷಯಗಳು ನನಗೆ ಅರ್ಥವಾಗಲಿಲ್ಲ. ಆದರೆ ಅವರ ಭಾಷಣಗಳನ್ನು ಕೇಳಿ ನನಗೆ ನನ್ನ ಧರ್ಮದಲ್ಲಿನ ಆಸಕ್ತಿ ಮತ್ತಷ್ಟು ಹೆಚ್ಚಾಯಿತು’ ಎಂದು. ಹೀಗೆ ಪ್ರತಿಯೊಬ್ಬರೂ ವಿವೇಕಾನಂದರಲ್ಲಿ ತಮ್ಮವರನ್ನೇ ಕಾಣಬಲ್ಲರು.
ಹೌದು! ವಿವೇಕಾನಂದರು ಬಯಸಿದ್ದು ಅದೇ. ಸನಾತನಧರ್ಮ ಬಯಸಿದ್ದೂ ಅದೇ. ಅವರು ಮುಸ್ಲಿಂರನ್ನು ಇನ್ನೂ ಉತ್ತಮ ಮುಸ್ಲಿಂ, ಕ್ರೖೆಸ್ತನನ್ನು ಇನ್ನೂ ಉತ್ತಮ ಕ್ರೖೆಸ್ತ, ಹಿಂದುವನ್ನು ಇನ್ನೂ ಉತ್ತಮ ಹಿಂದು ಆಗಬಯಸಿದರೇ ಹೊರತು ಯಾರೂ ಒಂದು ಮತದಿಂದ ಇನ್ನೊಂದು ಮತಕ್ಕೆ ಪರಿವರ್ತನೆಯಾಗುವುದನ್ನಲ್ಲ. ನಾಲ್ಕು ಯೋಗಗಳ ಗುರಿಯೂ ಅದೇ. ನಾಲ್ಕು ಯೋಗಗಳ ಅಧ್ಯಯನದಿಂದ ಕಂಡುಬರುವುದು, ಅಲ್ಲಿ ಯಾವುದೇ ನಿರ್ದಿಷ್ಟ ದೇವರ ಬಗ್ಗೆ ಒತ್ತು ಇಲ್ಲ. ಒಂದು ಯೋಗ ಬುದ್ಧಿಯನ್ನು, ಮತ್ತೊಂದು ಭಾವನೆಗಳನ್ನು, ಮತ್ತೊಂದು ಮನಸ್ಸನ್ನು, ಮಗದೊಂದು ಹೃದಯವೈಶಾಲ್ಯವನ್ನು ಬೋಧಿಸುತ್ತದೆ. ಇವೆಲ್ಲವೂ ಮನುಷ್ಯನ ಆಂತರ್ಯಕ್ಕೆ ಸಂಬಂಧಿಸಿದ್ದು. ಮನುಷ್ಯನ ಆಂತರ್ಯವೇ ದೇವರು. ಅವನ ಶರೀರವೇ ದೇವಾಲಯ. ಈ ಆಂತರ್ಯ ಶುದ್ಧವಾದರೆ ಮನುಷ್ಯನೇ ದೇವನಾಗಬಲ್ಲ. ಪ್ರತಿಯೊಂದರಲ್ಲೂ ಸುಪ್ತವಾಗಿರುವ ಈ ದೈವತ್ವ ಜಾಗೃತಗೊಳಿಸುವುದೇ ಅದಕ್ಕೆ ಬೇಕಾದ ತರಬೇತಿಯೇ ಧರ್ಮ. ಇದರಿಂದ ಲೌಕಿಕವೂ ಸಿದ್ಧಿಸುತ್ತದೆ. ಪಾರಮಾರ್ಥಿಕವೂ ಸಿದ್ಧಿಸುತ್ತದೆ. ಇದಕ್ಕಿಂತಲೂ ವಿಶಾಲವಾದ, ವೈಜ್ಞಾನಿಕ ಧರ್ಮ ಇಲ್ಲಿಯವರೆಗೂ ಬಂದಿಲ್ಲ. ಮುಂದೆ ಬರುವ ಸಾಧ್ಯತೆಯೂ ಇಲ್ಲ.
ದೇಹೋ ದೇವಾಲಯ ಪೋ›ಕ್ತೋ | ಜೀವೋ ದೇವಃ ಸನಾತನಃ||
ತ್ಯಜೇತ್ ಅಜ್ಞಾನ ನಿರ್ವಲ್ಯಂ | ಸೋಹಂ ಭಾವೇನ ಪೂಜಯೇತ್||
ಅರ್ಥಾತ್ ‘ದೇಹವೇ ದೇವಾಲಯ. ಜೀವನೇ ದೇವರು. ಅಜ್ಞಾನವೆಂಬ ನಿರ್ವಲ್ಯವನ್ನು ತೆಗೆದರೆ ತಾನೇ ದೇವನೆಂದು ಯಾರಿಗೂ ತಿಳಿದೀತು’. ಇದು ಋಷಿವಾಕ್ಯ. ಇದೇ ಸನಾತನ ಸತ್ಯ. ಇದೇ ಆರ್ಯಧರ್ಮ. ವಿವೇಕಾನಂದರ ಬೋಧನೆಯ ಪಲ್ಲವಿಯೂ ಇದೇ!