ಭಾರತದಲ್ಲಿಯೂ ರಸ್ತೆ, ಕಟ್ಟಡ ನಿರ್ಮಾಣ ಕಾರ್ಯಗಳು ಹೆಚ್ಚು ಆಗುತ್ತಿರುವುದರಿಂದ ಇಲ್ಲಿಯೂ ಹಾರ್ಡ್ವೇರ್ ಸಾಮಾಗ್ರಿಗಳ ಬಳಕೆ ಗಣನೀಯವಾಗಿ ಹೆಚ್ಚುತ್ತಿದೆ. 2018ರಲ್ಲಿ ಕೇವಲ ಕಟ್ಟಡ ನಿರ್ಮಾಣ ಮೇಲೆಯೇ ಭಾರತ 7 ಬಿಲಿಯನ್ ಡಾಲರ್ ಅಂದರೆ, 51 ಸಾವಿರದ 800 ಕೋಟಿ ರೂ. ಹೂಡಿಕೆ ಮಾಡಿದೆ. ಇದೆಲ್ಲವನ್ನು ನೋಡಿದರೆ, ಹಾರ್ಡ್ವೇರ್ ಸಾಮಾಗ್ರಿಗಳ ಮಾರಾಟ ಖಂಡಿತ ಯಶಸ್ಸು ಆಗಬಹುದು. ಈ ಹಾರ್ಡ್ವೇರ್ ಶಾಪ್ ಬಿಸಿನೆಸ್ ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸಣ್ಣ ಬಿಸಿನೆಸ್ನ ಕಲ್ಪನೆಗಳಲ್ಲಿ ಒಂದಾಗಿದೆ. ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಯಾವುದಾದರೂ ಬಿಸಿನೆಸ್ ಮಾಡಬೇಕು ಎಂದು ಯೋಚಿಸುವ ಪ್ರತಿಯೊಬ್ಬರಿಗೂ ಹಾರ್ಡ್ವೇರ್ ಶಾಪ್ ಬಿಸಿನೆಸ್ ಪೂರಕ.
ಸಾಮಾನ್ಯವಾಗಿ ಮನೆ, ಕಟ್ಟಡ ನಿರ್ಮಾಣ ಮತ್ತು ರಸ್ತೆ ಸೇರಿ ಇನ್ನಿತರ ಯಾವುದೇ ನಿರ್ಮಾಣ ಕಾರ್ಯದಲ್ಲಿ ಹಾರ್ಡ್ವೇರ್ ಸಾಮಾಗ್ರಿಗಳ ಪಾತ್ರ ಪ್ರಧಾನವಾಗಿರುತ್ತೆ. ಒಂದು ಸಣ್ಣ ಮೊಳೆಯಿಂದ ಹಿಡಿದು ದೊಡ್ಡ ಪೈಪ್ಗಳವರೆಗೂ ಬಳಕೆಯಾಗುತ್ತೆ. ಉದಾಹರಣೆ: ಒಂದು ಚಿಕ್ಕ ಮನೆ ನಿರ್ಮಾಣ ಮಾಡುವುದಕ್ಕೆ ಮುಂದಾದರೆ ಆ ಮನೆಯ ಸಂಪೂರ್ಣ ಬಜೆಟ್ನಲ್ಲಿ ಬಹುದೊಡ್ಡ ಪಾಲು ಹಾರ್ಡ್ವೇರ್ ಸಾಮಾಗ್ರಿಗಳಿಗೆ ಖರ್ಚಾಗಿರುತ್ತೆ. ಇದನ್ನು ಗಮನಿಸಿದರೆ ಹಾರ್ಡ್ವೇರ್ ಬಿಸಿನೆಸ್ ಹೇಗೆ ಪ್ರಗತಿಯಾಗುತ್ತಿದೆ ಮತ್ತು ಎಷ್ಟು ಡಿಮ್ಯಾಂಡ್ ಹೊಂದಿದೆ ಎಂಬುದು ತಿಳಿಯುತ್ತೆ. ಹಾರ್ಡ್
ವೇರ್ ಅಂಥ ನೋಡಿದಾಗ ಕಟ್ಟಡ ಸಾಮಗ್ರಿಗಳು ಒಳಗೊಂಡಿರುತ್ತೆ. ಸಿಂಕ್, ಪೈಪ್, ಪೇಂಟಿಂಗ್, ಹೋಲ್ಡರ್, ಎಸಿ ಸ್ಟಾ್ಯಂಡ್ ಮುಂತಾದವುಗಳು. ಈ ಹಾರ್ಡ್ವೇರ್ ಬಿಸಿನೆಸ್ ಮಾಡಿ ಪ್ರತಿಯೊಬ್ಬರು ಕೂಡ ಆದಾಯ ಗಳಿಸುವುದಕ್ಕೆ ಉತ್ತಮ ಅವಕಾಶವಿದೆ.
ಹಾರ್ಡ್ವೇರ್ ಶಾಪ್ಗೆ ಸ್ಥಳ ಆಯ್ಕೆ ಹೀಗಿರಬೇಕು: ಯಾವುದೇ ಬಿಸಿನೆಸ್ ಮಾಡುವಾಗ ಸ್ಥಳ ಬಹಳ ಮುಖ್ಯ. ಕೆಲವೊಂದು ಜನವಸತಿ ಪ್ರದೇಶವಾದರೆ ಕೆಲವೊಂದು ಇಂಡಸ್ಟ್ರೀಯಲ್ ಪ್ರದೇಶ ಸೂಕ್ತ. ಆದರೆ ಹಾರ್ಡ್ವೇರ್ ಶಾಪ್ ಅಂಥ ನೋಡಿದಾಗ ಇಲ್ಲಿ ಸ್ಥಳ ಪ್ರಮುಖ. ಕೈಗಾರಿಕಾ ಹಬ್ಗಳು ಇರುವ ಪ್ರದೇಶ, ಸಾಕಷ್ಟು ಕಟ್ಟಡ ನಿರ್ಮಾಣ ಚಟುವಟಿಕೆ ನಡೆಯುತ್ತಿರುವ ಸ್ಥಳ, ಗ್ರಾಹಕರು ಶೀಘ್ರ ಹಾಗೂ ಸುಲಭವಾಗಿ ತೆಗೆದುಕೊಂಡು ಹೋಗುವುದಕ್ಕೆ, ಸಾಮಗ್ರಿಗಳನ್ನು ಸಾಗಾಟ ಮಾಡುವುದಕ್ಕೆ ಉತ್ತಮ ರಸ್ತೆ ಸಂಪರ್ಕ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಶಾಪ್ ಮಾಡಿದರೆ ಬಿಸಿನೆಸ್ ಪ್ರಗತಿ ಸಾಧ್ಯ.
ಅನುಮತಿ ಪರವಾನಗಿ: ಹಾರ್ಡ್ವೇರ್ ಶಾಪ್ಗಳನ್ನು 3 ರೀತಿಯಲ್ಲಿ ಮಾಡಬಹುದು. ಇದಕ್ಕೆ ತಕ್ಕಂತೆ ಬಂಡವಾಳ ಅತ್ಯಗತ್ಯ, ಮುನ್ಸಿಪಾಲಿಟಿ ಹಂತದಲ್ಲಿ ಶಾಪ್ ಇದ್ದರೆ, ಇಲ್ಲಿ ಲೈಸೆನ್ಸ್ ತೆಗೆದುಕೊಳ್ಳಬೇಕು. ಕಾರ್ವಿುಕರು ಇದ್ದರೆ ಲೇಬರ್ ಡಿಪಾರ್ಟ್ವೆುಂಟ್ನಿಂದ ಸರ್ಟಿಫಿಕೇಟ್, ಜೊತೆಗೆ ಬಾಡಿಗೆಯ ಕಟ್ಟಡವಾದರೆ ರೆಂಟ್ ಅಗ್ರಿಮೆಂಟ್ ಹಾಗೂ ಎಖಖ ನೋಂದಣಿ ಮಾಡಿಸುವುದು ಬಹಳ ಮುಖ್ಯವಾಗಿರುತ್ತದೆ.
ಆದಾಯ, ಖರ್ಚು ಮತ್ತು ಲಾಭ: ದಿನದಿಂದ ದಿನಕ್ಕೆ ಹೆಚ್ಚು ಬೇಡಿಕೆ ಹಾಗೂ ಪ್ರಗತಿ ಹೊಂದುತ್ತಿರುವ ಹಾರ್ಡ್ವೇರ್ ಬಿಸಿನೆಸ್ನಲ್ಲಿ ಎಲ್ಲ ರೀತಿ ವ್ಯಾಪಾರ ವಹಿವಾಟು ಮಾಡುವುದಕ್ಕೆ ಅಸಾಧ್ಯ, ಇಲ್ಲಿ ರಿಟೇಲ್ ಹಾಗೂ ಹೋಲ್ಸೇಲ್ ರೀತಿಯಲ್ಲಿಯೂ ಗ್ರಾಹಕರೊಂದಿಗೆ ಬಿಸಿನೆಸ್ ಮಾಡಿದರೆ ಉತ್ತಮವಾಗಿರುತ್ತದೆ. ಇಲ್ಲಿ ಯಾವುದೇ ರೀತಿಯಾದ ವ್ಯವಹಾರ ಮಾಡಿದರೆ ಶೇ.15 ಲಾಭಾಂಶ ದೊರೆಯುತ್ತದೆ. ಅಂದರೆ 1 ಲಕ್ಷ ರೂ.ಮೌಲ್ಯದ ಸಾಮಗ್ರಿಗಳನ್ನು ತಂದು ಮಾರಾಟ ಮಾಡಿದರೆ ಎಲ್ಲ ಖರ್ಚು ಕಳೆದರೂ 15 ಸಾವಿರ ರೂ. ಲಾಭ ಪಡೆಯಬಹುದು. ಒಂದು ವೇಳೆ ಕಚ್ಚಾ ಸಾಮಾಗ್ರಿಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ತೆಗೆದುಕೋಂಡರೆ ಲಾಭದ ಮೊತ್ತ ಹೆಚ್ಚಿರುತ್ತದೆ. ಯಾಕಂದರೆ ನೀವು ದೂರದ ಮಾರುಕಟ್ಟೆಯಿಂದ ಕಚ್ಚಾ ಸಾಮಾಗ್ರಿಗಳು ತೆಗೆದುಕೊಂಡು ಬರುವುದಕ್ಕೆ ಸಾರಿಗೆ ವೆಚ್ಚ ಸೇರಿ ಸಾಕಷ್ಟು ಖರ್ಚು ಎದುರಾಗುತ್ತದೆ. ಅದೇ ಸ್ಥಳೀಯ ಮಾರುಕಟ್ಟೆಯಲ್ಲಿ ತೆಗೆದುಕೊಂಡು ಬಂದರೆ ಸಾರಿಗೆ ಖರ್ಚು ಸೇರಿ ಸಮಯ ಕೂಡ ಉಳಿಯುತ್ತದೆ. ಇಲ್ಲಿ ಸಾಮಾಗ್ರಿಗಳ ಗುಣಮಟ್ಟ ಹಾಗೂ ಗ್ರಾಹಕರೊಂದಿಗೆ ಒಡನಾಟ ಆಧಾರದ ಮೇಲೆ ಬಿಸಿನೆಸ್ ಅವಲಂಭಿತವಾಗಿರುತ್ತದೆ.
Ffreedom appನಲ್ಲಿ ಹಾರ್ಡ್ವೇರ್ ಶಾಪ್ ಬಿಸಿನೆಸ್ ಕೋರ್ಸ್: ಪ್ರತಿಯೊಬ್ಬರೂ ಆರ್ಥಿಕ ಸ್ವಾತಂತ್ರ್ಯ ಕಂಡುಕೊಳ್ಳಬೇಕು ಎಂಬ ಉದ್ದೇಶ ಹೊಂದಿರುವ Ffreedom app ಹಾರ್ಡ್ ವೇರ್ ಶಾಪ್ ಬಿಸಿನೆಸ್ ಕೋರ್ಸ್ ಅನ್ನು ಸಿದ್ಧಪಡಿಸಿದೆ. ಇಲ್ಲಿ ನಿಮಗೆ ಹಾರ್ಡ್ವೇರ್ ಶಾಪ್ ಮಾಡಿ ಯಶಸ್ವಿಯಾದ ತುಮಕೂರಿನ ಮುರಳಿ ಹಾಗೂ ಬೆಂಗಳೂರಿನ ಮೊಹಮ್ಮದ್ ಇಸ್ಮಾಯಿಲ್ ಮಾರ್ಗದರ್ಶನ ನೀಡಿದ್ದಾರೆ. ಇದರ ಜತೆಗೆ ನೀವು Ffreedom appನಲ್ಲಿ ಕೃಷಿ, ಬಿಸಿನೆಸ್ ಮತ್ತು ಹಣಕಾಸಿಗೆ ಸಂಬಂಧಿಸಿದ 900ಕ್ಕೂ ಹೆಚ್ಚು ಕೋರ್ಸ್ಗಳನ್ನು ವೀಕ್ಷಿಸಬಹುದು. ಆಷ್ಟೇ ಅಲ್ಲ, ಯಶಸ್ವಿ ಮಾರ್ಗದರ್ಶಕರಿಂದ ಮಾರ್ಗದರ್ಶನ ಪಡೆದು ನಿಮ್ಮ ಶ್ರೀಮಂತಿಕೆಯ ಪ್ರಯಾಣ ಆರಂಭಿಸಬಹುದು.
ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಲು ಬಯಸುವವರಿಗೆ Ffreedom appನಲ್ಲಿ ಸುವರ್ಣಾವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ಕಾಲ್ ಮಾಡಿ - 02262116777