ಅಂಕಣ

ರೈತರ ಬದುಕಿಗೆ ಭರವಸೆ ಮೆರಾಬುಲ್

ಕೃಷಿ ಮಾಡಿ ಲಾಭ ಗಳಿಸೋದಕ್ಕೆ ಸಾಧ್ಯನಾ? ಅಂತ ಕೇಳಿದರೆ, ಬಹುತೇಕ ಕೃಷಿಕರು ಕಷ್ಟ ಅಂತಾನೇ ಹೇಳುತ್ತಾರೆ. ಸರಿಯಾದ ಬೆಳೆ ಬರೋದಿಲ್ಲ, ಬೆಳೆ ಬಂದಾಗ ಬೆಲೆ ಇರೋದಿಲ್ಲ. ಹವಾಮಾನ ವೈಪರೀತ್ಯದಿಂದ ಕೈಗೆ ಬಂದ ತುತ್ತು ಬಾಯಿಗೆ ಬರೋದಿಲ್ಲ. ಹಾಗಾಗಿ ಕೃಷಿಕರಿಗೆ ಲಾಭ ಎನ್ನುವುದು ಗಗನ ಕುಸುಮ ಎನ್ನುವ ಭಾವನೆ ಇದೆ. ಹಾಗಾದರೆ, ಕೃಷಿಯಲ್ಲಿ ಲಾಭ ಮಾಡಿದವರು ಇಲ್ವಾ? ಎಂದು ಕೇಳಿದರೆ, ಖಂಡಿತವಾಗಲೂ ಇದ್ದಾರೆ. ಅದರೆ, ಅವರಿಗೆ ಹವಾಮಾನದ ತೊಂದರೆ, ಬೆಲೆ ಇಳಿಕೆಯ ಎಫೆಕ್ಟ್ ಇಲ್ವಾ? ಎಂದರೆ ಖಂಡಿತವಾಗಲೂ ಇದೆ. ಅವರಿಗೆ ಪೂರಕವಾಗಿರುವುದೇ ಅವರೆಲ್ಲರೂ ಸದಾ ಬೇಡಿಕೆ ಇರುವ ಮತ್ತು ಇಳುವರಿ ನೀಡುವಂತಹ ಕೃಷಿ ಮಾಡಿರುವುದು. ಅಂತಹ ಕೃಷಿಯಲ್ಲಿ ಗುಲಾಬಿ ಕೃಷಿ ಕೂಡ ಒಂದು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಡಿಮಾಂಡ್: ಗುಲಾಬಿ ಅಥವಾ ರೋಸ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ, ಹೇಳಿ. ಗುಲಾಬಿ ಕಂಡರೇ ಪ್ರತಿಯೊಬ್ಬರಿಗೂ ಪ್ರೀತಿ. ಗುಲಾಬಿ ಹೂವು ಪ್ರೀತಿಯ ಸಂಕೇತ. ಇದನ್ನು ಹೂವುಗಳ ರಾಣಿ ಎಂದೇ ಕರೆಯುತ್ತಾರೆ. ವಿಶ್ವದ ಯಾವುದೇ ಮೂಲೆಗೆ ಹೋದರೂ ಗುಲಾಬಿಗೆ ಬೇಡಿಕೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಡಿಮಾಂಡ್ ಹೊಂದಿರುವಂತಹ ಗುಲಾಬಿ 300 ವರ್ಷಗಳ ಇತಿಹಾಸ ಹೊಂದಿದೆ. ಭಾರತದ ಮಟ್ಟಿಗೆ ಗುಲಾಬಿ ಕೃಷಿ ನೋಡುವುದಾದರೆ, ಕರ್ನಾಟಕದ ಪಾಲು ದೊಡ್ಡದಿದೆ. ಇನ್ನು ಗುಜರಾತ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್​ಗಢದಲ್ಲಿ ಹೆಚ್ಚು ಗುಲಾಬಿ ಬೆಳೆಯಲಾಗುತ್ತದೆ.

ಕಡಿಮೆ ಬಂಡವಾಳ, ಹೆಚ್ಚು ಲಾಭ: ಗುಲಾಬಿಯಲ್ಲಿ ನೂರಾರು ತಳಿಗಳಿವೆ. ಒಂದೊಂದು ತಳಿಯನ್ನು ಅದಕ್ಕೆ ಪೂರಕವಾದ ಕೃಷಿ ವಿಧಾನದಲ್ಲಿ, ಸೂಕ್ತ ಹವಾಮಾನದಲ್ಲಿಯೇ ಬೆಳೆಯಬೇಕು. ಕೆಲವೊಂದು ತಳಿಯ ಕೃಷಿ ಬಹಳ ವೆಚ್ಚದಿಂದ ಕೂಡಿದ್ದರೆ, ಇನ್ನು ಕೆಲವೊಂದು ತಳಿಯನ್ನು ಕಡಿಮೆ ಬಂಡವಾಳದಲ್ಲಿಯೇ ಸಣ್ಣ ರೈತರು ಕೂಡ ಬೆಳೆಯಬಹುದು. ಅಂತಹ ತಳಿಗಳಲ್ಲಿ ಮೆರಾಬುಲ್ ರೋಸ್ ಕೂಡ ಒಂದು. ಸದಾ ಬೇಡಿಕೆಯಲ್ಲಿರುವ ಹಾಗೂ ಕಡಿಮೆ ಬಂಡವಾಳ, ಕಡಿಮೆ ರಿಸ್ಕ್ ಮತ್ತು ಹೆಚ್ಚು ಲಾಭ ತರುವ ಕೃಷಿ- ಮೆರಾಬುಲ್ ಗುಲಾಬಿ. ಇದಕ್ಕೆ ಪಾಲಿ ಹೌಸ್ ಅಥವಾ ಗ್ರೀನ್ ಹೌಸ್ ಬೇಕಾಗಿಲ್ಲ, ಬಯಲು ಪ್ರದೇಶದಲ್ಲೇ ಬೆಳೆಯಬಹುದು. ನಾಟಿ ಮಾಡಿದ 2-3 ತಿಂಗಳ ನಂತರ ನಿರಂತರವಾಗಿ ಸುಮಾರು 8-10 ವರ್ಷಗಳ ಕಾಲ ಇಳುವರಿ ನೀಡುತ್ತದೆ. ಇದರಿಂದ ರೈತರು ನಿರಂತರವಾಗಿ ಆದಾಯ ಗಳಿಸಬಹುದು.

ಕರ್ನಾಟಕದಲ್ಲಿ ಸುಮಾರು 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾನಾ ರೀತಿಯಾದ ಹೂವಿನ ಕೃಷಿ ಮಾಡುತ್ತಿದ್ದೇವೆ. ಇದರಲ್ಲಿ ಬೇರೆ ಬೇರೆ ಕೃಷಿಗಳಿಗೆ ಹೊಲಿಕೆ ಮಾಡಿದಾಗ, ಹಲವು ಕೃಷಿಗಳು ದೊಡ್ಡ ಮಟ್ಟದ ಖರ್ಚು-ವೆಚ್ಚಗಳಿಂದ ಕೂಡಿರುತ್ತವೆ. ಅವುಗಳಿಗೆ ಬೇಡಿಕೆ ಕೂಡ ಅಷ್ಟಕಷ್ಟೇ. ಜತೆಗೆ ಎಲ್ಲ ರೀತಿಯ ಹವಾಮಾನದಲ್ಲಿಯೂ ಅವುಗಳನ್ನು ಬೆಳೆಯುವುದಕ್ಕೆ ಸಾಧ್ಯವಿಲ್ಲ. ಪರಿಣಾಮ, ಬಂಡವಾಳ ಕೂಡ ಹೆಚ್ಚು ಬೇಕಾಗುತ್ತೆ. ಇದರಿಂದ ರೈತರು ಸಾಲಕ್ಕೆ ಸಿಲುಕುವಂತಾಗಿದೆ. ಇವುಗಳಿಗೆ ಹೊಲಿಕೆ ಮಾಡಿಕೊಂಡರೆ, ಮೆರಾಬುಲ್ ರೋಸ್ ಖರ್ಚು ಕಡಿಮೆ ವರ್ಷಪೂರ್ತಿ ಆದಾಯ ಪಡೆಯಬಹುದು.

ಉತ್ತಮ ಆದಾಯ: ಸಾಮನ್ಯವಾಗಿ ಮೆರಾಬುಲ್ ಗುಲಾಬಿಯನ್ನು ಕೆಂಪು, ಆರೆಂಜ್ ಮತ್ತು ಹಳದಿ ಬಣ್ಣದಲ್ಲಿ ನೋಡಬಹುದು. ಅವುಗಳಲ್ಲಿ ಕೆಂಪು ಬಣ್ಣದ ಹೂವಿಗೆ ಹೆಚ್ಚು ಬೇಡಿಕೆ. ಸಭೆ-ಸಮಾರಂಭ, ಪೂಜೆ-ಪುನಸ್ಕಾರ ಸೇರಿ ಪ್ರತಿಯೊಂದು ಶುಭ ಕಾರ್ಯಗಳಿಗೆ ಈ ಹೂವು ಬಳಕೆಯಾಗುತ್ತದೆ. ಈ ಕಾರಣಕ್ಕಾಗಿಯೇ ಈ ಹೂವಿಗೆ ಎಲ್ಲ ಕಾಲದಲ್ಲಿಯೂ ಬೇಡಿಕೆ ಹೆಚ್ಚಿರುತ್ತದೆ. ಸದಾ ಬೇಡಿಕೆ, ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಮೆರಾಬುಲ್ ಗುಲಾಬಿ ಕೃಷಿ ಪ್ರತಿಯೊಬ್ಬ ರೈತನಿಗೂ ಸಾಧ್ಯ. ನಿಮ್ಮ ಬಳಿ ಕೇವಲ 20 ಗುಂಟೆ ಜಮೀನು ಇದ್ದರೆ ಸಾಕು, ಈ ಕೃಷಿ ಮಾಡಬಹುದು. 20 ಗುಂಟೆ ಭೂಮಿಗೆ ಸುಮಾರು 1250ರಿಂದ 1300 ಗಿಡಗಳನ್ನು ನಾಟಿ ಮಾಡಬಹುದು. ಇದಕ್ಕೆ ಆರಂಭಿಕವಾಗಿ 50-60 ಸಾವಿರ ರೂ. ಖರ್ಚು ಬರುತ್ತದೆ. ನಾಟಿ ಮಾಡಿ 2.5ರಿಂದ 3 ತಿಂಗಳ ಬಳಿಕ ಹೂವು ಬಿಡುವುದಕ್ಕೆ ಆರಂಭವಾಗುತ್ತೆ. ದಿನ ಬಿಟ್ಟು ದಿನಕ್ಕೆ ಹೂವು ಕಟಾವು ಮಾಡಿದರೆ, ಒಮ್ಮೆ 50 ಕೆ.ಜಿ. ಇಳುವರಿ ಬರುತ್ತೆ. ಅಂದರೆ, ತಿಂಗಳಿಗೆ 750 ಕೆ.ಜಿ. ಇಳುವರಿ ಸಿಗುತ್ತದೆ. ಸರಾಸರಿ ಕೆ.ಜಿ. ಹೂವಿಗೆ 100 ರೂ. ಬೆಲೆ ಸಿಕ್ಕಿದರೆ, ತಿಂಗಳಿಗೆ 70-80 ಸಾವಿರ ರೂ. ಆದಾಯ ಗಳಿಸಬಹುದು. ಈ ಕೃಷಿಯನ್ನು ನೀವು 1 ಎಕರೆ ಪ್ರದೇಶದಲ್ಲಿ ಮಾಡುವುದಕ್ಕೆ ಮುಂದಾದರೆ, 2500 ಸಸಿಗಳು ಬೇಕಾಗುತ್ತದೆ. ಆದಾಯ ಕೂಡ ಹೆಚ್ಚು ಲಭಿಸುತ್ತದೆ.

ಕೋರ್ಸ್​ನಲ್ಲಿ ಏನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಏನಿದು ಮೆರಾಬುಲ್ ಗುಲಾಬಿ ಕೃಷಿ, ತಳಿಗಳು?
  • ಬಂಡವಾಳ, ಸರ್ಕಾರದ ಸೌಲಭ್ಯ, ವಿಮೆ
  • ಭೂಮಿ ಸಿದ್ಧತೆ, ನಾಟಿ ಮತ್ತು ಕಾರ್ವಿುಕರು
  • ನೀರು, ಗೊಬ್ಬರ, ಕೀಟ, ರೋಗ ನಿಯಂತ್ರಣ
  • ಕಟಾವು, ಕಟಾವು ನಂತರದ ಪ್ರಕ್ರಿಯೆ, ಇಳುವರಿ
  • ಬೆಲೆ ನಿಗದಿ, ಮಾರ್ಕೆಟಿಂಗ್ ಮತ್ತು ರಫ್ತು
  • ಆದಾಯ, ಖರ್ಚು ಮತ್ತು ಲಾಭ
  • ಸವಾಲು ಮತ್ತು ಕಿವಿಮಾತು

ffreedom appನಲ್ಲಿ ಮೆರಾಬುಲ್ ಗುಲಾಬಿ ಕೃಷಿ: ಕೃಷಿಯಲ್ಲಿ ಹೊಸತನ ತರಬೇಕು, ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ ndianMoney.com ನ ffreedom app ಮೆರಾಬುಲ್ ಗುಲಾಬಿ ಕೃಷಿ ಕೋರ್ಸ್ ಸಿದ್ಧಪಡಿಸಿದೆ. ಇಲ್ಲಿ ಬರಡು ಭೂಮಿಯಲ್ಲೂ ಬೇಡಿಕೆಯಲ್ಲಿರುವ ಮೆರಾಬುಲ್ ಗುಲಾಬಿ ಕೃಷಿ ಮಾಡಿ ಸಕ್ಸಸ್ ಆಗಿರುವ ಹಾಸನ ಜಿಲ್ಲೆಯ ಬ್ರಹ್ಮದೇವರ ಹಳ್ಳಿ ದಾಮೋದರ್, ಮೆರಾಬಲ್ ಗುಲಾಬಿ ಕೃಷಿ ಬಗ್ಗೆ ಹೇಳಿಕೊಡುತ್ತಾರೆ. ಜತೆಗೆ ನೀವು f್ಟಛಿಛಟಞ ಚಟಟನಲ್ಲಿ ಕೃಷಿ, ಬಿಸಿನೆಸ್ ಮತ್ತು ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದಂತೆ 800ಕ್ಕೂ ಹೆಚ್ಚು ಕೋರ್ಸ್ ಗಳನ್ನು ನೋಡಬಹುದು ಮತ್ತು ಪ್ರತಿಯೊಬ್ಬ ಯಶಸ್ವಿ ಮಾರ್ಗದರ್ಶಕರಿಂದ ಕಲಿತು ಅದನ್ನು ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಬಹುದು.

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸು ವವರಿಗೆ ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ ್ಡ ಕಾಲ್ ಮಾಡಿ- ದೂ.ಸಂ. 02262116777