ಅಂಕಣ

ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು: ಮಕ್ಕಳ ಕಥೆ

Webdesk - Ravikanth
ಒಂದು ಶಾಲೆಯಲ್ಲಿ ಅಷ್ಟೇನೂ ಓದಿ ಬರೆಯದ ಹುಡುಗನಿದ್ದ. ಅವನಿಗೆ ಅಧ್ಯಾಪಕರು ಯಾವಾಗಲೂ ಬೈಯುತ್ತಿದ್ದರು. ಇದನ್ನು ಕಂಡು ವಿದ್ಯಾರ್ಥಿಗಳು ಅವನನ್ನು ನೋಡಿ ನಗುತ್ತಿದ್ದರು. ಯಾರೂ ಅವನನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಒಂದು ದಿನ ಉಳಿದ ವಿದ್ಯಾರ್ಥಿಗಳು ಆಟ ಆಡುತ್ತಿರುವಾಗ ಒಬ್ಬನಿಗೆ ಬಲವಾಗಿ ಕಾಲಿಗೆ ಗಾಯವಾಗಿ ರಕ್ತ ಸುರಿಯತೊಡಗಿತು. ನಡೆಯಲು ಸಹ ಸಾಧ್ಯವಾಗುತ್ತಿರಲಿಲ್ಲ. ಇದನ್ನು ನೋಡಿದ ಅವನ ಸ್ನೇಹಿತರು ಗಾಬರಿಯಾಗಿ ಹೆದರಿ ಓಡಿ ಹೋದರು. ಹುಡುಗನಿಗೆ ನೋವು ಹೆಚ್ಚಾಗಿ ಬಯಲಿನಲ್ಲಿ ಒಬ್ಬನೇ ಅಳುತ್ತ ಕುಳಿತ. ಆ ಸಮಯದಲ್ಲಿ, ಗೇಲಿ ಮಾಡಿಸಿಕೊಳ್ಳುತ್ತಿದ್ದ ಹುಡುಗ ಇವನ ಬಳಿಗೆ ಬಂದು ಅಳುವ ಕಾರಣ ಕೇಳಿದ. ಅವನು ತನ್ನ ಕಾಲನ್ನು ತೋರಿಸಿದ. ಆ ಕೂಡಲೇ ಹುಡುಗ ಅಂಗಡಿಗೆ ಹೋಗಿ ಔಷಧವನ್ನು ತಂದು ಅವನ ಕಾಲಿಗೆ ಹಚ್ಚಿದ. ನಂತರ ಅವನ ಕೈ ಹಿಡಿದುಕೊಂಡು ಹೋಗಿ ಮನೆಗೆ ಮುಟ್ಟಿಸಿದ. ಆ ಹುಡುಗನ ಬಗ್ಗೆ ತಾವು ಆಡಿಕೊಳ್ಳುತ್ತಿದ್ದದ್ದು ನೆನಪಾಗಿ ಈ ಹುಡುಗನಿಗೆ ನಾಚಿಕೆಯಾಯಿತು. ಜೊತೆಗೆ ತನ್ನ ತಪ್ಪಿನ ಅರಿವಾಯಿತು. ಮುಂದೆ ಅವರಿಬ್ಬರೂ ಒಳ್ಳೆಯ ಸ್ನೇಹಿತರಾದರು.

ನೀತಿ: ಯಾರದೇ ಪರಿಸ್ಥಿತಿ ನೋಡಿ ನಗಬಾರದು ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು.

| ಅವ್ಯಕ್ತ ಬಿ.ಆರ್ 2ನೇ ತರಗತಿ, ಶ್ರೀ ರವಿಶಂಕರ್ ಬಾಲಮಂದಿರ, ಆರ್.ಆರ್ ನಗರ, ಬೆಂಗಳೂರು