ಬೌದ್ಧಧರ್ಮ ಮತ್ತು ಜಪಾನೀ ಸಂಪ್ರದಾಯಗಳು ಕಮಲದ ಪ್ರಾಮುಖ್ಯವನ್ನು ಸಹ ಉಲ್ಲೇಖಿಸುತ್ತವೆ. ಭಾರತೀಯ ಲಲಿತಕಲೆಗಳು, ನೃತ್ಯ ಪ್ರಕಾರಗಳು ಈ ಮುದ್ರೆಯನ್ನು ತಮ್ಮ ನೃತ್ಯಶಾಸ್ತ್ರದ (ನೃತ್ಯ ಗ್ರಂಥಗಳು) ಭಾಗವಾಗಿ ಬಳಸುತ್ತವೆ. ಪ್ರಾಥಮಿಕವಾಗಿ, ಈ ಮುದ್ರೆಯು ಹೃದಯ (ಅನಾಹತ) ಚಕ್ರವನ್ನು ಸಮತೋಲನಗೊಳಿಸುತ್ತದೆ ಮತ್ತು ಒಟ್ಟಾರೆ ಧನಾತ್ಮಕತೆಯನ್ನು ಸೃಷ್ಟಿಸುತ್ತದೆ. ಇದನ್ನು ಎಲ್ಲ ವಯೋಮಾನದವರು ಮಾಡಬಹುದು. ಇದನ್ನು ಕಚೇರಿಯ ಕುರ್ಚಿಯ ಮೇಲೆ, ಹಾಸಿಗೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು, ಗರ್ಭಿಣಿಯರು ಮತ್ತು ಹಿರಿಯ ನಾಗರಿಕರೂ ಸಹ ಅಭ್ಯಾಸ ಮಾಡಬಹುದು.
ತಾತ್ತ್ವಿಕವಾಗಿ ಈ ಮುದ್ರೆಯನ್ನು ಈಸಿ ಭಂಗಿ (ಸುಖಾಸನ), ಮಂಗಳಕರ ಭಂಗಿ (ಸ್ವಸ್ತಿಕಾಸನ), ಲೋಟಸ್ ಭಂಗಿ (ಪದ್ಮಾಸನ) ಅಥವಾ ಥಂಡರ್ಬೇಲ್ಟ್ ಭಂಗಿ (ವಜ್ರಾಸನ)ಯಲ್ಲಿ ಕುಳಿತುಕೊಳ್ಳುವ ಧ್ಯಾನ ಭಂಗಿಗಳಲ್ಲಿ ಮಾಡಲಾಗುತ್ತದೆ.
ಪ್ರಯೋಜನಗಳೇನು?: ಇಲ್ಲಿ ಎರಡು ಹೆಬ್ಬೆರಳು ಜೋಡಣೆ ಹಾಗೂ ಎರಡು ಕಿರುಬೆರಳು ಜೋಡಣೆಯಾಗುವುದರಿಂದ ಅಗ್ನಿತತ್ವ ಮತ್ತು ಜಲತತ್ವ ಶರೀರದಲ್ಲಿ ಸಮರ್ಪಕವಾಗಿ ಹರಿಯುತ್ತದೆ. ಇದರಿಂದ ಮನಸ್ಸು ಶುದ್ಧಗೊಳ್ಳುತ್ತದೆ. ನಿಯಮಿತ ಅಭ್ಯಾಸದಿಂದ ವಿದ್ಯಾರ್ಥಿಗಳು ತಮ್ಮ ಮಾನಸಿಕ ಶಕ್ತಿಯನ್ನು ಅರಿತುಕೊಳ್ಳುತ್ತಾರೆ. ಅತ್ಯಂತ ಕಷ್ಟಕರವಾದ ಜೌಗು ಮತ್ತು ಕೆಸರಿನ ನೀರಿನಲ್ಲಿ ಕಮಲವು ಅರಳುವಂತೆಯೇ, ವಿದ್ಯಾರ್ಥಿಗಳು ತಮ್ಮ ಯೋಗಾಭ್ಯಾಸದಲ್ಲಿ ಅರಳಲು ತಮ್ಮ ಶಾಂತಿಯುತ ಮನಸ್ಸಿನಿಂದ ಧ್ಯಾನ, ಧಾರಣೆ ಮತ್ತು ಪ್ರಾಣಾಯಾಮವನ್ನು ಲೋಟಸ್ ಮುದ್ರೆಯ ಅಭ್ಯಾಸದೊಂದಿಗೆ ಪ್ರಾರಂಭಿಸಬಹುದು. ಇದು ಅವರ ಮಾನಸಿಕ ಸಾಮರ್ಥ್ಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಧ್ಯಾನ ಅಥವಾ ಆಸನ ಅಭ್ಯಾಸದಲ್ಲಿ ಕಮಲದ ಮುದ್ರೆಯನ್ನು ಅಳವಡಿಸಿಕೊಂಡರೆ, ಅವರ ಹೃದಯದ ಶಕ್ತಿ ಜಾಗೃತಗೊಳ್ಳುತ್ತದೆ. ಈ ಮುದ್ರೆಯ ಅಭ್ಯಾಸದಿಂದ ಸ್ವಾರ್ಥ ಆಲೋಚನೆಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಅತಿಯಾದ ಆಲೋಚನೆ ಮತ್ತು ಮಿದುಳಿನ ಆಯಾಸವನ್ನು ತಪ್ಪಿಸುತ್ತದೆ. ಕಮಲ ಮುದ್ರೆಯು ಶಕ್ತಿಯುತವಾದ ಕೈ ರಚನೆಯಾಗಿದ್ದು ಅದು ಹೃದಯ ಕಮಲವನ್ನು ತೆರೆಯುತ್ತದೆ ಮತ್ತು ಹೃದಯ ಚಕ್ರವನ್ನು ಸಕ್ರಿಯಗೊಳಿಸುತ್ತದೆ. ಈ ಮುದ್ರೆಯು ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ ಮತ್ತು ಒತ್ತಡವನ್ನು ಶಾಂತಗೊಳಿಸುತ್ತದೆ. ಜ್ವರ ನಿಯಂತ್ರಿಸಲು ಈ ಮುದ್ರೆ ಸಹಕಾರಿಯಾಗಿದೆ. ಗುರುಗಳ ಸಲಹೆ ಮಾರ್ಗದರ್ಶನದಲ್ಲಿ ಮುದ್ರೆಗಳನ್ನು ಕಲಿತು ಅಭ್ಯಾಸ ಮಾಡಿ. ಮುದ್ರೆಗಳಿಂದ ಹೀಲಿಂಗ್ ಆಗುತ್ತದೆ.