ಅಂಕಣ

'ಮುಸ್ಲಿಮರು ಕಾಂಡೋಮ್‌ ಹೆಚ್ಚು ಬಳಸ್ತಾರೆ': ಪ್ರಧಾನಿ ಮೋದಿಯವರ 'ಹೆಚ್ಚು ಮಕ್ಕಳು' ಹೇಳಿಕೆಗೆ ಓವೈಸಿ ಕೌಂಟರ್

ಹೈದರಾಬಾದ್​: ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತ ಸಮುದಾಯವಾಗುತ್ತಾರೆ ಎಂಬ ಭಯವನ್ನು ಪ್ರಧಾನಿ ನರೇಂದ್ರ ಮೋದಿ ಹಿಂದೂಗಳಲ್ಲಿ ತುಂಬುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹೈದರಾಬಾದ್​ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ಪ್ರಧಾನಿ ಮೋದಿ ಅವರು ಹಿಂದು-ಮುಸ್ಲಿಂರ ನಡುವೆ ದ್ವೇಷದ ಗೋಡೆಯನ್ನು ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದುತ್ತಿದ್ದಾರೆ ಎಂಬ ಭಯವನ್ನು ಅವರು ಏಕೆ ಸೃಷ್ಟಿಸುತ್ತಿದ್ದಾರೆ? ಕೇಂದ್ರದ ಅಂಕಿಅಂಶಗಳ ಪ್ರಕಾರ ಮುಸ್ಲಿಮರ ಜನಸಂಖ್ಯೆಯ ಕುಸಿದಿದೆ. ಮುಸ್ಲಿಮರು ಕಾಂಡೋಂಗಳನ್ನು ಹೆಚ್ಚು ಬಳಸುತ್ತಾರೆ. ಇದನ್ನು ಹೇಳಲು ನನಗೆ ನಾಚಿಕೆ ಇಲ್ಲ ಎಂದು ಓವೈಸಿ ಹೇಳಿದರು.

ಈ ಬಾರಿ ಹೈದರಾಬಾದ್​ನಲ್ಲಿ ಬಿಜೆಪಿಯ ಮಾಧವಿ ಲತಾ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಸಂಸದ ಓವೈಸಿ, ಜನರ ಚಿನ್ನ ಮತ್ತು ಆಸ್ತಿಯನ್ನು ತೆಗೆದುಕೊಂಡು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ನರೇಂದ್ರ ಮೋದಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಹಿಂದೂಗಳ ಮತಗಳನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.