ಅಂಕಣ

ಸೌರವಿದ್ಯುತ್​ಗೆ ಆದ್ಯತೆ ನೀಡಿ: ಜನಮತ

ನೀರಾವರಿ ಕಾಲುವೆಗಳ ಮೇಲೆ ಸೌರಫಲಕ ಅಳವಡಿಸಿ ಸೌರವಿದ್ಯುತ್ ಉತ್ಪಾದಿಸುವ ಕುರಿತು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಸರ್ಕಾರ ಬಾಗಲಕೋಟ ಜಿಲ್ಲೆಯಲ್ಲಿ 700 ಮೀಟರ್ ಜಾಗೆಯಲ್ಲಿ ಸೌರಫಲಕ ಅಳವಡಿಸಿ ಕೇವಲ ಒಂದು ವರ್ಷದಲ್ಲಿ 14 ಲಕ್ಷ ಯುನಿಟ್ ಸೌರವಿದ್ಯುತ್ ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಜಿಲ್ಲಾ/ನಗರಪ್ರದೇಶಗಳಲ್ಲಿ ಪ್ರಯಾಣಿಕರಿಗಾಗಿ ಬಸ್ ನಿಲ್ದಾಣ/ತಂಗುದಾಣಗಳನ್ನು ನಿರ್ವಿುಸಲಾಗಿದೆ. ಅದೇ ಪ್ರಕಾರ ರೈಲು ಮಾರ್ಗಕ್ಕೆ ಹೊಂದಿಕೊಂಡಂತೆ ರೈಲು ನಿಲ್ದಾಣಗಳಿವೆ. ನಿಲ್ದಾಣ/ತಂಗುದಾಣಗಳ ಛಾವಣಿಗಳ ಮೇಲೆ ಪ್ರತಿದಿನ ಬೆಳಗ್ಗೆ 7ರಿಂದ ಸಾಯಂಕಾಲ 6ರವರೆಗೆ ಸೂರ್ಯನ ಬಿಸಿಲು ಬೀಳುತ್ತದೆ. ಆ ಭಾಗಗಳಲ್ಲಿ ಸೌರವಿದ್ಯುತ್ ಫಲಕಗಳನ್ನಳವಡಿಸಿದಲ್ಲಿ ಸರ್ಕಾರಕ್ಕೆ ಸೇರಿದ ಉಚಿತ ಜಾಗೆಯಲ್ಲಿ ಕಡಿಮೆ ವೆಚ್ಚದಲ್ಲಿ ಲಕ್ಷಾಂತರ ಯುನಿಟ್ ಸೌರವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ನೈಸರ್ಗಿಕವಾಗಿ ಅಬಾಧಿತವಾಗಿ ದೊರೆಯುವ ಸೌರಶಕ್ತಿಯನ್ನು ವಿದ್ಯುತ್ತಾಗಿ ಪರಿವರ್ತಿಸಲು ರಾಜ್ಯ ಸರ್ಕಾರ, ಇಂಧನ ಇಲಾಖೆಗಳು ಗಮನಹರಿಸಿ ರಾಜ್ಯವನ್ನು ವಿದ್ಯುತ್​ಬರದಿಂದ ಮುಕ್ತಗೊಳಿಸಲು ಸಕಾರಾತ್ಮಕ ಕ್ರಮಜರುಗಿಸಲಿ.

| ಬಸವರಾಜ ಹುಡೇದಗಡ್ಡಿ ಧಾರವಾಡ