ಹತೋ ವಾ ಪ್ರಾಪ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಂ |ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತ ನಿಶ್ಚಯಃ ||
ಇದರ ಸಂಕ್ಷಿಪ್ತ ಅರ್ಥ ಹೀಗಿದೆ. ನೀನು ಹೋರಾಡಿದರೆ, ಯುದ್ಧಭೂಮಿಯಲ್ಲಿ ಹತನಾಗಿ ಸ್ವರ್ಗ ಪ್ರಾಪ್ತಿ ಮಾಡಿಕೊಳ್ಳುತ್ತೀಯಾ. ಅದಿಲ್ಲ ಎಂದರೆ ಯುದ್ಧದಲ್ಲಿ ವಿಜಯ ಸಾಧಿಸಿ, ಭೂಮಿಯ ಮೇಲೆ ರಾಜ್ಯವನ್ನು ಅನುಭವಿಸುತ್ತೀಯ. ಆದ್ದರಿಂದ, ಓ ಕುಂತಿಯ ಪುತ್ರನೇ, ದೃಢನಿಶ್ಚಯದಿಂದ ಎದ್ದು ಹೋರಾಡಲು ಸಿದ್ಧನಾಗು.
ಇದು ಪ್ರಧಾನಿ ಮೋದಿ ಮಾತ್ರವಲ್ಲ, ಭಾರತದ ಪ್ರತಿಯೊಬ್ಬ ಪ್ರಜೆಯೂ ಈ ಸಂದರ್ಭದಲ್ಲಿ ಮಾಡಬೇಕಾದ ಸಂಕಲ್ಪ. ಒಂದು ಸುದೀರ್ಘ ಯುದ್ಧಕ್ಕೆ ಇಡೀ ದೇಶವೇ ಮನಸ್ಸು ಮಾಡಬೇಕಾದ ಸಂದರ್ಭ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರವನ್ನು ನೋಡೋಣ ಮತ್ತು ಗ್ರಹಿಸೋಣ. ಭಾರತ ಅಭಿವೃದ್ಧಿ, ವಿಜ್ಞಾನ-ತಂತ್ರಜ್ಞಾನ ಮತ್ತು ಜಾಗತಿಕ ನಾಯಕತ್ವ ವಹಿಸುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿರುವ ಸಮಯದಲ್ಲಿ ಒಂದು ಆಂತರಿಕ ಅಪಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಅದು ಬೇರಾವುದೂ ಅಲ್ಲ. ‘ಗಝ್ವಾ-ಎ-ಹಿಂದ್’ನ ಅಪಾಯ.
‘ಗಝ್ವಾ-ಎ-ಹಿಂದ್’ ಎಂದರೆ, ಮತ್ತೇನಲ್ಲ. ಭಾರತದಲ್ಲಿ ಜಿಹಾದಿ ರಾಷ್ಟ್ರವನ್ನು ಸ್ಥಾಪಿಸುವ ಹುನ್ನಾರದ ಹೆಜ್ಜೆಗಳು! ಇದು ಕೇವಲ ಆಲೋಚನೆ, ಕಲ್ಪನೆಯಲ್ಲ; ಜಾರಿಯಾಗುತ್ತಿರುವ ಕಣ್ಮುಂದಿನ ಕಾರ್ಯಾಚರಣೆ. ಪ್ರಸಕ್ತ ಅವ್ಯಾಹತವಾಗಿ ನಡೆಯುತ್ತಿರುವ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್ ಇವು ಈ ‘ಗಝ್ವಾ-ಎ-ಹಿಂದ್’ನ ಒಂದೊಂದು ರೂಪಗಳು. ಮೊನ್ನೆ ಮೊನ್ನೆ ನಡೆದ ಪಹಲ್ಗಾಮ್ ದಾಳಿ ಅದರ ಮುಂದುವರೆದ ಭಾಗ. ಗಾತ್ರದಲ್ಲಿ ಬಲು ದೊಡ್ಡದು.
ಐಸಿಸ್, ಅಲ್-ಖೈದಾ, ಅನ್ಸಾರ್-ಉಲ್-ಇಸ್ಲಾಂ, ಪಿಎಫ್ಐ ಮುಂತಾದ ಸಂಘಟನೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕ, ಯುವತಿಯರ ಮನಸ್ಸಿನಲ್ಲಿ ಈ ವಿಷವನ್ನು ಅವ್ಯಾಹತವಾಗಿ ತುಂಬುತ್ತಿವೆ. ಸ್ಥಳೀಯವಾಗಿ ಅವುಗಳನ್ನು ಬೆಂಬಲಿಸುವ ‘ಸ್ಲೀಪರ್ ಸೆಲ್’ಗಳು ಭಾರತದ ಉದ್ದಗಲಕ್ಕೂ ಆಳಕ್ಕೆ ಬೇರು ಬಿಡುತ್ತಿವೆ. ಲವ್ ಜಿಹಾದ್ನಿಂದ ಹಿಡಿದು ಪಹಲ್ಗಾಮ್ ಘಟನೆವರೆಗೆ ಸ್ಥಳೀಯರ ಬೆಂಬಲ ಇದ್ದೇ ಇದೆ ಎಂಬುದು ಈಗಂತೂ ಜಗಜ್ಜಾಹೀರಾಗಿದೆ.
ಇತ್ತೀಚಿನ ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ, ಭಾರತದ ಅನೇಕ ಸ್ಥಳಗಳಲ್ಲಿ, ವಿಶೇಷವಾಗಿ ಕೇರಳ, ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಐಸಿಸ್ ಪ್ರೇರಿತ ಭಯೋತ್ಪಾದಕ ಕೃತ್ಯಗಳು ಚುರುಕು ಪಡೆದುಕೊಂಡಿವೆ. ಇದರ ಹಿಂದೆ ಕೇವಲ ಹಿಂಸಾಚಾರವಲ್ಲ, ಭಾರತದಲ್ಲಿ ‘ಖಿಲಾಫತ್’ ಸಾಮ್ರಾಜ್ಯ ಸ್ಥಾಪಿಸುವ ದುಷ್ಟ ಹುನ್ನಾರವೇ ಇದೆ. ಈ ಹಿನ್ನೆಲೆಯಲ್ಲಿ ಹಿಂದೂಗಳು ಮಾತ್ರವಲ್ಲ ಭಾರತದ ಭಕ್ತರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಅವಶ್ಯಕ.
ಜಾತ್ಯತೀತ ರಾಷ್ಟ್ರದಲ್ಲಿ ನಾವು ಸುರಕ್ಷಿತವಾಗಿದ್ದೇವೆಯೇ?: ನಿಮ್ಮನ್ನು ಅಸುರಕ್ಷತೆಯ ಭಾವ ಕಾಡುತ್ತಿದೆ. ಅದಕ್ಕಾಗಿ ಮರುಗುತ್ತೀರಿ, ಗೊಣಗುತ್ತೀರಿ. ಆಗ ನೀವು ಛತ್ರಪತಿ ಶಿವಾಜಿ ಮಹಾರಾಜರ ಪ್ರೇರಣೆಯಿಂದ ಸ್ಥಾಪಿತವಾದ ಹಿಂದವೀ ಸ್ವರಾಜ್ಯದ ಸ್ಮರಣೆ ಮಾಡಿಕೊಳ್ಳಬೇಕು ಮತ್ತು ಅವರ ಹೆಜ್ಜೆಗಳನ್ನು ಅನುಸರಿಸಬೇಕು ಅಷ್ಟೇ. ಭಾರತವನ್ನು ಮತ್ತೊಮ್ಮೆ ಸನಾತನ ಧರ್ಮ, ರಾಮರಾಜ್ಯವನ್ನಾಗಿ ಮಾಡಿದರೆ ಮಾತ್ರ ನಮ್ಮ ಆ ಕನಸುಗಳು ನನಸಾಗಲು ಸಾಧ್ಯ. ನಿಮ್ಮ ಕನವರಿಕೆ, ಮರುಗುವಿಕೆ ದೂರಾಗಲು ಸಾಧ್ಯ. ಬಹುಸಂಖ್ಯಾತ ಹಿಂದೂಗಳ ಅಸ್ತಿತ್ವ ಉಳಿಯಲು, ಸನಾತನ ಸಂಸ್ಕೃತಿಯ ಪುನರುತ್ಥಾನವೊಂದೇ ಮಾರ್ಗ. ಅಷ್ಟು ಮಾತ್ರವಲ್ಲ ‘ಗಝ್ವಾ-ಎ-ಹಿಂದ್’ ಹಿಮ್ಮೆಟ್ಟಿಸಲು ಕೂಡ ಅದೊಂದೇ ಮದ್ದು.
ಭಯೋತ್ಪಾದನೆಗೆ ಧರ್ಮವಿಲ್ಲವೇ?: ಇತ್ತೀಚೆಗೆ ಪಹಲ್ಗಾಮ್ಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಹೇಡಿತನದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು. ಆ ಘಟನೆ ನಮ್ಮ ಮನಸ್ಸಿಂದ ದೂರಾಗಲು ಅದೆಷ್ಟು ವರ್ಷಗಳು ಬೇಕೋ? ಆರ್ಟಿಕಲ್ 370 ರದ್ದುಪಡಿಸಿದ ನಂತರ ಎಲ್ಲವೂ ಸರಿ ಆಯಿತೆಂದು ನಾವು ಭಾವಿಸಿದ್ದೆವು ತಾನೇ? ಇಲ್ಲ, ಅದಾದ ನಂತರವೂ ಭಯೋತ್ಪಾದಕ ದಾಳಿಗಳು ಮುಂದುವರೆದಿವೆ. ಹಿಂದೂಗಳ ಹತ್ಯೆ ಅವ್ಯಾಹತ! ಹಂತಕರು ಹತ್ಯೆಗೊಳಗಾಗುವವರ ಜಾತಿಯನ್ನು ಕೇಳಲಿಲ್ಲ, ಅವರು ಕೇಳಿದ್ದು ಹಿಂದೂಗಳೇ ಎಂದು ಮಾತ್ರ! ಇದು ಜಾತಿಯದ್ದಲ್ಲ, ಧರ್ಮ ಯುದ್ಧ ಎಂಬುದು ಸಾಬೀತಾಯಿತಲ್ಲ?
ಮುಂಬಯಿನಲ್ಲಿ 1992-93ರ ಗಲಭೆಯ ಸಮಯದಲ್ಲಿ ‘ರಾಧಾಬಾಯಿ ಚಾಳ್’ ಘಟನೆ ನಗರವನ್ನು ಬೆಚ್ಚಿಬೀಳಿಸಿತ್ತು. ಈ ಚಾಳ್ ಮುಂಬಯಿನ ಜೋಗೇಶ್ವರಿ ಪ್ರದೇಶದಲ್ಲಿದೆ. 1993ರ ಜನವರಿಯಲ್ಲಿ, ಈ ಚಾಳ್ನಲ್ಲಿ 6 ಹಿಂದೂ ನಾಗರಿಕರನ್ನು ಜೀವಂತ ಸುಟ್ಟುಹಾಕಲಾಗಿತ್ತು. ದಾಳಿಕೋರರು ಧರ್ಮವನ್ನು ಗುರುತಿಸಿ ಹಿಂದೂಗಳನ್ನು ಗುರಿಯಾಗಿಸಿ ಕೊಂದು ಹಾಕಿದರು. ಇಂತಹ ಅನೇಕ ಘಟನೆಗಳು ನಿರ್ದಿಷ್ಟ ಧರ್ಮದ ಅನುಯಾಯಿಗಳಿಂದ ಹಿಂದೂಗಳ ಮೇಲೆ ನಡೆದ ದೌರ್ಜನ್ಯಕ್ಕೆ ಸಾಕ್ಷಿಯಾಗಿವೆ. ಇಂದು ಪಹಲ್ಗಾಮ್ಲ್ಲಿ ಏನು ನಡೆಯಿತೋ, ಅದೇ ಮುರ್ಷಿದಾಬಾದ್ನಲ್ಲಿ ನಡೆಯುತ್ತಿದೆ. 2047ರ ವೇಳೆಗೆ ಭಾರತವನ್ನು ಗಝ್ವಾ-ಎ-ಹಿಂದ್ ಆಗಿ ಪರಿವರ್ತಿಸುವ ದೊಡ್ಡ ಷಡ್ಯಂತ್ರವನ್ನು ಐಎಸ್ಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳು ರೂಪಿಸಿವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಬಹಿರಂಗಪಡಿಸಿದೆ. ಈಗಲೂ ನಾವು ಎಚ್ಚೆತ್ತುಕೊಳ್ಳುವುದು ಬೇಡವೇ?
ಭಾರತದಲ್ಲಿ ಗಝ್ವಾ-ಎ-ಹಿಂದ್’ ತರಬೇಕಾಗಿದೆ: ಐಸಿಸ್, ಪಿಎಫ್ಐ ಮತ್ತು ಅಫ್ಘಾನಿಸ್ತಾನದ ಐಸಿಸ್-ಕೆ ಸಂಘಟನೆಗಳು ಭಾರತವನ್ನು ಗಝ್ವಾ-ಎ-ಹಿಂದ್ ಆಗಿ ಪರಿವರ್ತಿಸಲು ಸ್ಪಷ್ಟ ಷಡ್ಯಂತ್ರ ರೂಪಿಸಿವೆ. ಐಸಿಸ್-ಕೆ ಕಾಶ್ಮೀರದಲ್ಲಿ ‘ಸ್ಲೀಪರ್ ಸೆಲ್’ಗಳಾಗಿ ಸಕ್ರಿಯವಾಗಿದೆ ಹಾಗೂ ಸಾಮಾಜಿಕ ಮಾಧ್ಯಮಗಳ ಪ್ರಚಾರದ ಮೂಲಕ ಭಾರತದ ಯುವಕರನ್ನು ಈ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಕೇರಳ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಮತಾಂಧ ಗುಂಪುಗಳಿಗೆ ಸಂಬಂಧಿಸಿದ ‘ಸ್ಲೀಪರ್ ಸೆಲ್’ಗಳ ಅಪಾಯವಿದೆ. ಭಾರತವನ್ನು ಈ ಧಾರ್ವಿುಕ ಮತಾಂಧತೆಯಿಂದ ಮುಕ್ತಗೊಳಿಸಬೇಕಾದರೆ ನಾವು ಜಾಗೃತರಾಗದೆ ನಾಯಕತ್ವದ ಕಡೆ ಬೊಟ್ಟು ಮಾಡಿ ದೋಷ ಹುಡುಕುತ್ತಾ ಕುಳಿತರೆ ಏನುಪಯೋಗ?
ಇಸ್ಲಾಮಿಕ್ ಸ್ಟೇಟ್ನ ರಹಸ್ಯ ತಂತ್ರ!: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಎಂಬ ಭಯೋತ್ಪಾದಕ ಸಂಘಟನೆಯು ಇರಾಕ್- ಸಿರಿಯಾದಲ್ಲಿ ಅತ್ಯಂತ ಕ್ರೂರ ಕೃತ್ಯಗಳಿಗೆ ಕುಖ್ಯಾತವಾಗಿದೆ. 1990ರಲ್ಲಿಯೇ ಕಾಶ್ಮೀರದಲ್ಲಿ ನಿಜಾಮ್ಎ-ಮುಸ್ತಫಾ ಅಂದರೆ ಇಸ್ಲಾಮಿಕ್ ಸ್ಟೇಟ್ನ ಪ್ರಾರಂಭ ಆಗಿದ್ದು. ಇಂದಿಗೂ ಐಸಿಸ್ನ ಅಪಾಯ ಹಾಗೆಯೇ ಇದೆ- 2024ರಲ್ಲಿ ಮಾಸ್ಕೋದಲ್ಲಿ ಮತ್ತು 2025ರಲ್ಲಿ ನ್ಯೂ ಆರ್ಲಿಯನ್ಸ್ನಲ್ಲಿ ಪ್ರೇರಿತ ದಾಳಿಗಳು ನಡೆದಿವೆ. ಅವರ ಭೌಗೋಳಿಕ ನಿಯಂತ್ರಣ ಕೊನೆಗೊಂಡಿದ್ದರೂ, ರಹಸ್ಯ ಕೋಶಗಳು, ಸಿದ್ಧಾಂತ-ಪ್ರೇರಣೆಯಿಂದ ನಡೆಯುವ ದಾಳಿಗಳು ಜಾಗತಿಕ ಭದ್ರತೆಗೆ, ಭಾರತದ ಸಾಮಾಜಿಕ ಶಾಂತಿಗೆ ಗಂಭೀರ ಅಪಾಯವನ್ನುಂಟುಮಾಡುತ್ತಿವೆ. ಅವರು ತಮ್ಮ ತಂತ್ರವನ್ನು ಬದಲಾಯಿಸಿದ್ದಾರೆ. ನೇರ ಯುದ್ಧದ ಬದಲು ರಹಸ್ಯ ದಾಳಿ, ಸೈದ್ಧಾಂತಿಕ ಪ್ರಚಾರ, ಸ್ಥಳೀಯ ಗುಂಪುಗಳಿಗೆ ಪ್ರೇರಣೆ ನೀಡುವುದು ಈಗ ಅವರ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ.
ಸನಾತನ ರಾಷ್ಟ್ರ ಮಾತ್ರ ಎಲ್ಲರನ್ನೂ ರಕ್ಷಿಸಬಲ್ಲದು!: ಸಾವಿರಾರು ವರ್ಷಗಳಿಂದ ಮತಾಂಧರು ಭಗವಾ ಭಾರತವನ್ನು ಹಸಿರು ಮಾಡುವ ದಾರಿ ಕಾಯುತ್ತಿದ್ದಾರೆ. ಹಿಂದಿನ ಕಾಲದ ಜಿಹಾದಿ ಆಕ್ರಮಣಕಾರರು ಕೇವಲ ಭಾರತದ ಸಂಪತ್ತನ್ನು ಲೂಟಿ ಮಾಡಲಿಲ್ಲ, ಇಲ್ಲಿನ ಹಿಂದೂ ಧರ್ಮ, ಸಂಸ್ಕೃತಿ ಮತ್ತು ಹಿಂದೂಗಳನ್ನು ನಾಶ ಮಾಡಿ ಈ ದೇಶದ ಮೇಲೆ ಹಸಿರು ಧ್ವಜ ಹಾರಿಸುವ ಕನಸು ಕಂಡಿದ್ದರು. ಆ ಕಾಲದಲ್ಲಿ ಹಿಂದೂಗಳ ಶೌರ್ಯದಿಂದಾಗಿ ಅವರ ಈ ಕನಸು ಎಂದಿಗೂ ನನಸಾಗಲಿಲ್ಲ. ಈಗ ಅದೇ ಕನಸನ್ನು ಹೊತ್ತು ಜಗತ್ತಿನಾದ್ಯಂತದ ಜಿಹಾದಿಗಳು, ಭಯೋತ್ಪಾದಕರು, ಮತಾಂಧರು ಭಾರತ ಮತ್ತು ಹಿಂದೂಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಪಲಾಯನ ಈಗ ನಮ್ಮ, ಹಿಂದೂಗಳ ಪ್ರವೃತ್ತಿಯಾಗಿದೆ, ಏಕೆಂದರೆ ನಾವು ಹಿಂದೂಗಳು ಇತಿಹಾಸದಿಂದ ಏನನ್ನೂ ಕಲಿಯಬಾರದೆಂದು ನಿರ್ಧರಿಸಿದ್ದೇವೆ.
ಇಂದು ದೇಶದ ಮುಂದೆ ಇರುವ ಐಸಿಸ್ನಂತಹ ಜಿಹಾದಿ ಭಯೋತ್ಪಾದನೆಯ ಬಿಕ್ಕಟ್ಟು ಮತ್ತು ಅವರನ್ನು ಬೆಂಬಲಿಸುವವರನ್ನು ನೋಡಿದರೆ, ಮುಂದೆ ಜಾತ್ಯತೀತ ರಾಷ್ಟ್ರವೋ ಅಥವಾ ಸನಾತನ ರಾಷ್ಟ್ರವೋ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ, ಬದಲಾಗಿ ಸನಾತನ ರಾಷ್ಟ್ರವೋ ಅಥವಾ ಇಸ್ಲಾಮಿಕ್ ಸ್ಟೇಟೋ ಎಂಬ ಪ್ರಶ್ನೆ ಉದ್ಭವಿಸಲಿದೆ. ಅಂತಹ ಸಮಯದಲ್ಲಿ ಜಾತ್ಯತೀತರಾದವರು ಧರ್ಮ ಅಥವಾ ಅಧರ್ಮದ ಪರವಾಗಿ ನಿಲ್ಲಲೇಬೇಕಾಗುತ್ತದೆ. ಆಗ ಸನಾತನ ರಾಷ್ಟ್ರ ಮಾತ್ರ ಎಲ್ಲರನ್ನೂ ರಕ್ಷಿಸಬಲ್ಲದು. ಛತ್ರಪತಿ ಶಿವಾಜಿ ಮಹಾರಾಜರು 5 ಮತಾಂಧ ಇಸ್ಲಾಮಿಕ್ಸಾಮ್ರಾಜ್ಯಗಳನ್ನು ಧೂಳೀಪಟ ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು.
ನಮ್ಮ ದೇಶದ ಮೇಲೆ ಧರ್ಮಪ್ರೇಮಿ, ರಾಷ್ಟ್ರಪ್ರೇಮಿಗಳ ಆಳ್ವಿಕೆ ಬಂದಾಗ ಮಾತ್ರ ನಮ್ಮ ದೇವರು, ಧರ್ಮ, ಸಂಸ್ಕೃತಿ, ಇತಿಹಾಸ, ಭಾಷೆ, ಮಕ್ಕಳು, ಮಹಿಳೆಯರು ನಿಜವಾದ ಅರ್ಥದಲ್ಲಿ ರಕ್ಷಣೆ, ಪಾಲನೆಯನ್ನು ಪಡೆಯುತ್ತಾರೆ. ನಮ್ಮ ರಾಜ್ಯವಾದರೆ, ನಮ್ಮ ಕೈಯಲ್ಲಿ ಅಧಿಕಾರವಿದ್ದರೆ ಮಾತ್ರ ಸ್ವಧರ್ಮವನ್ನು ರಕ್ಷಿಸಲು, ಸಂವರ್ಧಿಸಲು ಸಾಧ್ಯ. ಅನುಭವದಿಂದ ಸಿದ್ಧವಾದ ಈ ಸತ್ಯವನ್ನು ಶಿವಾಜಿ ಮಹಾರಾಜರು ಗುರುತಿಸಿದ್ದರು. ಧರ್ವಚರಣೆಯ, ಸತ್ವಗುಣಪ್ರಧಾನ ಜನಪ್ರತಿನಿಧಿಗಳು ಮತ್ತವರ ಸೇವಕರು ಧರ್ವಧಿಷ್ಠಿತ ಅಂದರೆ ಸರ್ವ ಗುಣಗಳಿಂದ ಕೂಡಿದ ಆದರ್ಶ ವ್ಯವಸ್ಥೆಯನ್ನು ನಿರ್ವಿುಸಬಹುದು. ಇದೇ ಧರ್ವಚರಣೆಯ ಜನಪ್ರತಿನಿಧಿಗಳ, ಪ್ರಜೆಗಳ ಧರ್ಮನಿಷ್ಠ ಸನಾತನ ರಾಷ್ಟ್ರವಾಗಿರುತ್ತದೆ! ಭವ್ಯ, ವ್ಯಾಪಕ ಮತ್ತು ತೇಜೋಪುಂಜವಾಗಿರುವ ಸನಾತನ ರಾಷ್ಟ್ರದ ಮುಂದೆ ‘ಗಝ್ವಾ-ಎ-ಹಿಂದ್’ ನಿಲ್ಲಲು ಸಾಧ್ಯವಿಲ್ಲ.
ರಾಮರಾಜ್ಯ ಅಂದರೆ...: ಭೂಮಿಯ ಮೇಲೆ ಶಾಂತಿಯುತ ಜೀವನ ನಡೆಸಲು ಹಿಂಸಾಚಾರದ ಅಗತ್ಯವಿಲ್ಲ, ಕ್ಷಾತ್ರ ತೇಜದ ಅಗತ್ಯವಿದೆ. ಸನಾತನ ಹಿಂದೂ ಧರ್ಮವು ಸಹಿಷ್ಣುತೆಯಂತಹ ಉನ್ನತ ಮೌಲ್ಯಗಳನ್ನು ಪೋಷಿಸುವ ಬೋಧನೆಯನ್ನೇ ನೀಡುತ್ತದೆ. ಆದ್ದರಿಂದ ಸನಾತನ ಅಥವಾ ಹಿಂದು ಜಗತ್ತಿಗೆ ಕಲ್ಯಾಣಕಾರಿ. ಈ ತತ್ವ ಜಗತ್ತಿನಾದ್ಯಂತ ಪಸರಿಸಬೇಕಿದೆ. ಆಗ ಮಾತ್ರ ಮತಾಂಧರ ಹಿಂಸಾತ್ಮಕ ಪ್ರವೃತ್ತಿ ನಾಶವಾಗುತ್ತದೆ. ಭಾರತ ‘ಗಝ್ವಾ-ಎ-ಹಿಂದ್’ ಆಗುವುದನ್ನು ತಡೆಯಬಹುದಾಗಿದೆ. ಅದಕ್ಕಾಗಿ ಹಿಂದೂಗಳ ಮನಸ್ಸು, ಹೃದಯದಲ್ಲಿ ‘ಸನಾತನ’ ಧ್ವಜದ ಛಾಪು ಮೂಡಿಸಬೇಕಿದೆ.
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರ ಪ್ರತಿಷ್ಠಾಪನೆ ಮೂಲಕ ಒಂದು ರೀತಿಯಲ್ಲಿ ರಾಮರಾಜ್ಯ, ಅಂದರೆ ಸನಾತನ ರಾಷ್ಟ್ರ ಸ್ಥಾಪನೆಯ ಅಭಿಯಾನಕ್ಕೆ ಅಡಿಪಾಯ ಹಾಕಲಾಗಿದೆ. ಅದುವೇ ಕಾಶ್ಮೀರಕ್ಕೆ,ಪಾಕಿಸ್ತಾನಕ್ಕೆ, ಅಮೆರಿಕಕ್ಕೆ ಮತ್ತು ಜಿಹಾದಿಗೆ ಉತ್ತರ. ಒಂದು ಬೇಸರವಾದಾಗ ಹತ್ತು, ನೂರು ಖುಷಿ ಮತ್ತು ಹೆಮ್ಮೆಯ ಸಂಗತಿಯನ್ನು ಮರೆಯದಿರೋಣ.
ಮತ್ತೆ ಯುದ್ಧಾಯ ಕೃತ ನಿಶಯಃ!