ನೆರೆಯ ಪುಟ್ಟ ದ್ವೀಪರಾಷ್ಟ್ರ ಮಾಲ್ದೀವ್ಸ್ ಮತ್ತೊಮ್ಮೆ ಭಾರತಕ್ಕೆ ರಾಜತಾಂತ್ರಿಕ ಹಾಗೂ ಸಾಮರಿಕ ಸವಾಲಾಗಿ ಎದ್ದು ನಿಂತಿದೆ. ಹೀಗಾಗಬಹುದೆಂಬ ಸುಳಿವು ಮೂರೂವರೆ ತಿಂಗಳ ಹಿಂದೆ ಚೀನೀ-ಪರ ಪೊ›ಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ದೀವ್ಸ್ (ಪಿಪಿಎಂ) ಪಕ್ಷದ ಉಮೇದುವಾರ ಮಹಮದ್ ಮೂಯ್ಝುೂ ಅಧ್ಯಕ್ಷೀಯ
ಮಾಲ್ದೀವ್ಸ್ ಮೂರು ದಶಕಗಳ ಹಿಂದೆ ಇಸ್ಲಾಮಿಕ್ ಮೂಲಭೂತವಾದದ ಸುಳಿಗೂ, ಒಂದು ದಶಕದ ಹಿಂದೆ ಚೀನೀ ಸಾಲಸಂಕೋಲೆಗೂ ಸಿಕ್ಕಿಹೋದದ್ದೀಗ ಇತಿಹಾಸ. ಈ ಇತಿಹಾಸ ಕಲಿಸುವ ಪಾಠವೆಂದರೆ ಅವೆರಡೂ ಇರುವೆಡೆ ಭಾರತಕ್ಕೆ ಸ್ಥಾನವಿಲ್ಲ ಎನ್ನುವುದು.
ಮಹಮದ್ ಮೂಯ್ಝುೂ ಇಸ್ಲಾಮಿಕ್ ಮೂಲಭೂತವಾದ ಹಾಗೂ ಚೀನೀಸಖ್ಯಗಳೆರಡನ್ನೂ ಮೈಗೂಡಿಸಿಕೊಂಡ ಅಧ್ಯಕ್ಷ. ಮೂಲಭೂತವಾದಿಗಳು ಅವರ ಹತ್ತಿರದ ಸಂಬಂಧದಲ್ಲೇ ಇದ್ದಾರೆ. ಮೂಯ್ಝುೂರ ಪತ್ನಿ ಸಜೀದಾ ಮೊಹಮ್ಮದ್ ಅವರ ಸಹೋದರ ಶೇಖ್ ಅಬ್ದುಲ್ಲಾ ಬಿನ್ ಮೊಹಮ್ಮದ್ ಇಬ್ರಾಹಿಂ ಜಮಾಯತ್ ಸಲಾಫಿ ಮೂಲಭೂತವಾದಿ ಸಂಘಟನೆಯ ಅಧ್ಯಕ್ಷ. ಮಾಲ್ದೀವಿಯನ್ ಯುವಜನತೆಯನ್ನು ಮೂಲಭೂತವಾದದತ್ತ ಹೊರಳಿಸುವು ದರಲ್ಲಿ ಮೂಯ್ಝುೂರ ಈ ಭಾವಮೈದುನನ ಪಾತ್ರ ಬಲು ದೊಡ್ಡದು.
ಇನ್ನು ಚೀನೀ ಸಖ್ಯ ಮೂಯ್ಝುೂರ ಎರಡನೆಯ ಸ್ವಭಾವವೇ ಆಗಿಹೋಗಿದೆ. 2013-18ರಲ್ಲಿದ್ದ ಅಬ್ದುಲ್ಲಾ ಯಮೀನ್ ಸರ್ಕಾರದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಮಂತ್ರಿಯಾಗಿದ್ದ ಅವರು ವಿಮಾನನಿಲ್ದಾಣ, ಅದಿರುವ ಹುಲ್ಹುಲೇ ದ್ವೀಪದಿಂದ ರಾಜಧಾನಿ ಮಾಲೆ ದ್ವೀಪಕ್ಕೆ ಸಮುದ್ರ ಸೇತುವೆ ನಿರ್ಮಾಣ ಸೇರಿದಂತೆ ಹಲವು ಭಾರಿ ಯೋಜನೆಗಳನ್ನು ಚೀನೀ ಸಾಲದಿಂದ ಆರಂಭಿಸಿದ್ದಲ್ಲದೇ, ಗುತ್ತಿಗೆಗಳನ್ನೂ ಚೀನಿ ಕಂಪನಿಗಳಿಗೆ ನೀಡಿದ್ದರು. ಅಧಿಕಾರಕ್ಕೇರಿದೊಡನೇ ತಮ್ಮ ಮೂಲಭೂತವಾದಿ ಮಿತ್ರರನ್ನು ಸಂತೋಷಗೊಳಿಸುವ ಕೈಂಕರ್ಯಕ್ಕೆ ಮುಂದಾದ ಮೂಯ್ಝುೂ ತಮ್ಮ ಸರ್ಕಾರ ಮಾಲ್ದೀವ್ಸ್ ಅನ್ನು ಮತ್ತಷ್ಟು ಇಸ್ಲಾಮೀಕರಣ ಗೊಳಿಸುವುದಕ್ಕೆ ಬದ್ಧವಾಗಿದೆ ಎಂದು ಘೊಷಿಸಿದರು. ಮೂಲಭೂತವಾದಿಗಳನ್ನು ತೃಪ್ತಿಪಡಿಸುವ ಉದ್ದೇಶದಿಂದ, ಐಸಿಸ್ ಸೇರಿ ಸಿರಿಯಾದಲ್ಲಿ ಬಂಧನಕ್ಕೊಳಗಾಗಿದ್ದ ಮಾಲ್ದೀವಿಯನ್ನರನ್ನು ಬಂಧಮುಕ್ತಗೊಳಿಸಿಕೊಂಡು ಸ್ವದೇಶಕ್ಕೆ ಕರೆತರುವುದು ಅಧ್ಯಕ್ಷರಾಗಿ ತಮ್ಮ ಪ್ರಥಮ ಕರ್ತವ್ಯ ಎಂದು ತಿಳಿದು ಅದಕ್ಕಾಗಿ ತುರ್ಕಿಯೇಗೆ ಪ್ರಯಾಣ ಬೆಳೆಸಿದರು. ಹೀಗೆ ಮಾಡುವ ಮೂಲಕ, ಪ್ರಮಾಣವಚನ ಸ್ವೀಕರಿಸಿದ ತರುವಾಯ ಮೊದಲ ವಿದೇಶಯಾತ್ರೆಗೆ ಭಾರತವನ್ನು ಆಯ್ಕೆ ಮಾಡಿಕೊಳ್ಳುವ, ಯಮೀನ್ ಸೇರಿದಂತೆ ಹಿಂದಿನ ಎಲ್ಲ ಅಧ್ಯಕ್ಷರ ಸಂಪ್ರದಾಯವನ್ನು ಮೂಯ್ಝುೂ ತೊರೆದರು.
ಮೂಲಭೂತವಾದ ಹಾಗೂ ಚೀನೀಸಖ್ಯ ಸಂಗಮಿಸಿದ ಮೂಯ್ಝುೂ ಅವರಿಗೆ ಭಾರತವೇನೂ ಪ್ರಯೋಜನಕಾರಿಯಂತೆ ಕಾಣುತ್ತಿಲ್ಲ. ಹಿಂದೂ ರಾಷ್ಟ್ರೀಯವಾದಿ ಸರ್ಕಾರ ಹೊಂದಿರುವ ಭಾರತ ಸಿರಿಯಾದಲ್ಲಿ ಬಂಧಿತರಾಗಿರುವ ಮಾಲ್ದೀವಿಯನ್ ಉಗ್ರಗಾಮಿಗಳನ್ನು ಬಂಧಮುಕ್ತಗೊಳಿಸಲು ನೆರವು ನೀಡದು. ಹಾಗೆಯೇ, ತಾವು ಭಾರತದ ಕುರಿತಾಗಿ ಯಾವುದೇ ಬಗೆಯ ಧನಾತ್ಮಕ ನಡೆ ಪ್ರದರ್ಶಿಸಿದರೆ ಚೀನೀ ಕಣ್ಣು ಕೆಂಪಗಾಗುತ್ತದೆ ಎಂದೂ ಗೊತ್ತು. ಆದರೆ
ಮಾಲ್ದೀವ್ಸ್ನ, ಮಾಲ್ದೀವಿಯನ್ನರ ವರ್ತಮಾನ ಮತ್ತು ಭವಿಷ್ಯ ಮೂಲಭೂತವಾದ ಹಾಗೂ ಚೀನೀ ಸಖ್ಯದಾಚೆಗೂ ವಿಸ್ತರಿಸುತ್ತದೆ ಎಂಬ ಸತ್ಯವನ್ನು ಕಾಣಲು ಅವರು ಪೂರ್ಣವಾಗಿ ಅಸಮರ್ಥರಾಗಿದ್ದಾರೆ.
ತುರ್ಕಿಯೇ ಭೇಟಿಯ ನಂತರ ಮೂಯ್ಝುೂ ಮತ್ತೊಮ್ಮೆ ಭಾರತಕ್ಕೆ ಬೆನ್ನು ತಿರುಗಿಸಿದರು. ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಮಾರಿಷಸ್ಗಳೊಂದಿಗೆ ತನ್ನ ದೇಶವೂ ಇರುವ ಕೊಲಂಬೋ ಸೆಕ್ಯೂರಿಟಿ ಡಯಲಾಗ್ನ ಸಮಾವೇಶ ಡಿಸೆಂಬರ್ನಲ್ಲಿ ಆಯೋಜನೆಗೊಂಡಾಗ ಅದರಿಂದ ದೂರ ಉಳಿದರು. ನಂತರ ಇದೇ ಜನವರಿಯಲ್ಲಿ ಚೀನಾಗೆ ತೆರಳುವ ಯೋಜನೆ ಪ್ರಕಟಿಸಿದರು. ಈ ಎಲ್ಲ ನಡೆಗಳಿಂದ ಅವರು ಪ್ರದರ್ಶಿಸಿದ್ದು ಪೂರ್ಣವಾಗಿ ಭಾರತವನ್ನು ಧಿಕ್ಕರಿಸುವ ನೀತಿ. ಇದರಿಂದ ಉತ್ತೇಜನಗೊಂಡ ಅವರ ಮೂವರು ಕಿರಿಯ ಮಂತ್ರಿಗಳು ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾಗಿ ಅವಹೇಳನಕಾರಿ ಮಾತುಗಳನ್ನಾಡುವ ಉದ್ಧಟತನ ತೋರಿದರು.
ಪ್ರಧಾನಿ ನರೆಂದ್ರ ಮೋದಿ ಜನವರಿ 4ರಂದು ನಮ್ಮ ಲಕ್ಷದ್ವೀಪಗಳಿಗೆ ಭೇಟಿ ಕೊಟ್ಟದ್ದು, ಕೆಲವು ಚಿತ್ರಗಳನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಆ ಸುಂದರ ದ್ವೀಪಗಳಿಗೆ ಪ್ರವಾಸ ಹೋಗುವಂತೆ ಭಾರತೀಯರನ್ನು ಉತ್ತೇಜಿಸುವ ಮಾತುಗಳನ್ನು ಬರೆದದ್ದು ಸರಿಯಷ್ಟೇ. ಮೂಯ್ಝುೂ ಅವರ ಭಾರತ-ವಿರೋಧಿ ನೀತಿಗಳಿಂದ ಬೇಸರಗೊಂಡಿದ್ದ ಕೆಲವರು ಭಾರತೀಯ ಪತ್ರಕರ್ತರು ಮತ್ತು ಯೂಟ್ಯೂಬಿಗರು ಲಕ್ಷದ್ವೀಪವನ್ನು ಮಾಲ್ದೀವ್ಸ್ಗೆ ವಿರುದ್ಧವಾಗಿ ಪ್ರವಾಸಿತಾಣವನ್ನಾಗಿಸುವ ಸಂಕೇತವನ್ನು ಮೋದಿ ನೀಡಿದ್ದಾರೆ ಎಂದು ಹೇಳತೊಡಗಿದರು. ತಪ್ಪಾಗಿದ್ದು ಇಲ್ಲಿ.
ಪ್ರಧಾನಿ ಮೋದಿ ವಾಸ್ತವವಾದಿ. ನಮ್ಮ ಪಶ್ಚಿಮ ತೀರದಾಚೆಯ ಭೌಗೋಳಿಕ, ಸಂಪನ್ಮೂಲೀಯ ವಾಸ್ತವಗಳ ಅರಿವು ಅವರಿಗಿದೆ. ಮಾಲ್ದೀವ್ಸ್ ಪ್ರವಾಸಿಗರ ಸ್ವರ್ಗವಾಗಿ ಬೆಳೆಯಲು ಭಾರತದ ಕೊಡುಗೆ ಅಪಾರ, ನಿಜ. ಆದರೆ ಅದು ಸಾಧ್ಯವಾಗಲು ಮಾಲ್ದೀವ್ಸ್ ಹೊಂದಿರುವ ಭೌಗೋಳಿಕ ಅನುಕೂಲತೆಗಳೂ ಕಾರಣ ಎನ್ನುವುದೂ ಅಷ್ಟೇ ನಿಜ. ಮಾಲ್ದೀವ್ಸ್ನಲ್ಲಿ ಜನವಸತಿ ಇಲ್ಲದ, ಸಂಪೂರ್ಣವಾಗಿ ಪ್ರವಾಸಿಗರಿಗಾಗಿಯೇ ಸಜ್ಜುಗೊಳಿಸಬಹುದಾದ ಸಾವಿರಕ್ಕೂ ಹೆಚ್ಚಿನ ದ್ವೀಪಗಳಿವೆ. ಆದರೆ ಲಕ್ಷದ್ವೀಪದಲ್ಲಿ ಸಿಗುವ ಅಂತಹ ದ್ವೀಪಗಳು ಕೇವಲ ಇಪ್ಪತೆôದು. ಉಳಿದ ಹತ್ತು ದ್ವೀಪಗಳಲ್ಲಿ ನಿಬಿಡ ಜನವಸತಿಯಿದೆ. ಸ್ಥಳೀಯರನ್ನು ಎತ್ತಂಗಡಿ ಮಾಡಿ ಪ್ರವಾಸಿಗರಿಗೆ ಸ್ಥಳ ಮಾಡಿಕೊಡಲಾಗುವುದಿಲ್ಲ. ಈಗ ಸದ್ಯಕ್ಕೆ ಅಲ್ಲಿರುವ ನೂರೈವತ್ತರಷ್ಟು ಹೋಟೆಲ್ ಕೋಣೆಗಳು ಎಷ್ಟು ಪ್ರವಾಸಿಗರನ್ನು ನಿಭಾಯಿ ಸಬಲ್ಲವು? ಪರೇಲಿ ದ್ವೀಪ ಇತ್ತೀಚೆಗೆ ಸಾಗರದಲ್ಲಿ ಮುಳುಗಿಹೋದದ್ದು ಲಕ್ಷದ್ವೀಪದ ನಾಜೂಕಿನ ಭೌಗೋಳಿಕ ಸ್ಥಿತಿಯ ಸಂಕೇತವೂ ಆಗಿದೆ. ಇಷ್ಟೆಲ್ಲ ಕಾರಣಗಳಿಂದಾಗಿ ಲಕ್ಷದ್ವೀಪವನ್ನು ಮಾಲ್ದೀವ್ಸ್ಗೆ ಪ್ರತಿಸ್ಪರ್ಧಿಯಾಗಿ ಬೆಳೆಸಲು ಸಾಧ್ಯವೇ ಇಲ್ಲ.
ಕೆಲವು ಅತ್ಯುತ್ಸಾಹಿ ಭಾರತೀಯರ ಮಾತುಗಳನ್ನು ಮಾಲ್ದೀವಿಯನ್ ರಾಜಕಾರಣಿಗಳು ಅಲಕ್ಷಿಸಬಹುದಾಗಿತ್ತು. ಆದರೆ ಹೊಸ ಸರ್ಕಾರದ ಮೂವರು ಉಪಮಂತ್ರಿಗಳು ಸಂಯಮ ಕಳೆದುಕೊಂಡು ಪ್ರಧಾನಿ ಮೋದಿಯವರನ್ನು ಅವಹೇಳನ ಮಾಡುವ, ಭಾರತದ ಬಗ್ಗೆ ತಮ್ಮ ಸ್ಥಾನಗಳಿಗೆ ತಕ್ಕುದಲ್ಲದ ಹೇಳಿಕೆಗಳನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿಬಿಟ್ಟರು. ಅವರ ಈ ನಡವಳಿಕೆ ಖಂಡನೀಯವಾಗಿತ್ತು. ಭಾರತ ಮಾಡಿದ್ದು ಅದನ್ನೇ.
ಭಾರತ ಸರ್ಕಾರ ವ್ಯಕ್ತಪಡಿಸಿದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಮಾಲ್ದೀವಿಯನ್ ವಿದೇಶ ಸಚಿವಾಲಯ, ಆ ಮೂವರು ಕಿರಿಯ ಮಂತ್ರಿಗಳ ಹೇಳಿಕೆಗಳು ಅವರವರ ಖಾಸಗಿ ಅಭಿಪ್ರಾಯ ಎಂದು ಸಮಜಾಯಿಷಿ ನೀಡಿತು. ಆ ಮೂವರನ್ನು ಮೂಯ್ಝುೂ ಸರ್ಕಾರ ಮಂತ್ರಿಮಂಡಲದಿಂದ ಸಸ್ಪೆಂಡ್ ಮಾಡಿತೇ ಹೊರತು ಡಿಸ್ವಿುಸ್ ಮಾಡಿಲ್ಲ. ಅಂದರೆ ಪರಿಸ್ಥಿತಿ ತಣ್ಣಗಾದೊಡನೇ ಅವರು ಮತ್ತೆ ಮಂತ್ರಿಮಂಡಲದಲ್ಲಿ ತಮ್ಮ ಕಾರ್ಯಭಾರಗಳನ್ನು ವಹಿಸಿಕೊಳ್ಳುತ್ತಾರೆ! ಮೂಯ್ಝುೂ ಸರ್ಕಾರದ ಈ ಎಲ್ಲ ಅಸಂವೇದನಾಶೀಲ ನಡೆಗಳಿಂದ ಭಾರತ ಸಹಜವಾಗಿಯೇ ಅಸಂತುಷ್ಟಗೊಂಡಿತು. ಅದು ವ್ಯಕ್ತವಾದದ್ದು ಜನವರಿ 8, 2024ರಂದು.
ಸಮಜಾಯಿಷಿ ನೀಡಲೋ, ಸಮಾಧಾನಿಸಲೋ ಅಂದು ಬೆಳಗಿನ ಹತ್ತು ಗಂಟೆ ಮೂವತೆ ôದು ನಿಮಿಷಕ್ಕೆ ಸೌತ್ ಬ್ಲಾಕ್ನಲ್ಲಿರುವ ಭಾರತೀಯ ವಿದೇಶ ಮಂತ್ರಾಲಯದ ಕಚೇರಿಯೊಳಗೆ ಹೋದ ಮಾಲ್ದೀವಿಯನ್ ಹೈಕಮಿಷನರ್ ಇಬ್ರಾಹಿಂ ಶಹೀಬ್ ಕೇವಲ ಐದೇ ನಿಮಿಷಗಳಲ್ಲಿ ಕೋಟಿನ ಗುಂಡಿಗಳನ್ನು ಸರಿಪಡಿಸಿಕೊಳ್ಳುತ್ತ ಹೊರಗೆ ಬಂದರು! ಅಂದರೆ ಕಚೇರಿಯೊಳಗೆ ಅವರಿಗೆ ಅವರು ನಿರೀಕ್ಷಿಸಿದ್ದ ಸ್ವಾಗತ ಸಿಕ್ಕಿಲ್ಲ, ಔಪಚಾರಿಕ ಚಹಾಪಾನವೂ ದೊರೆತಿಲ್ಲ! ಬಹುಶಃ ಮಂಗಳಾರತಿ ಮಾಡಿಸಿಕೊಂಡು ಹೊರಗೋಡಿ ಬಂದಿದ್ದಾರೆ. ಅವರಿಗಾಗಿರಬಹುದಾದ ಆ ‘ಮಂಗಳಾರತಿ’ ವಾಸ್ತವವಾಗಿ ಮೂಯ್ಝುೂ ಸರ್ಕಾರಕ್ಕೆ. ಯಾಕೆಂದರೆ ಶಹೀಬ್ ಆ ಸರ್ಕಾರದ ಅಧಿಕೃತ ಪ್ರತಿನಿಧಿ.
ಅದೇ ದಿನ ಮೂಯ್ಝುೂ ತಮ್ಮ ಎರಡನೆಯ ವಿದೇಶ ಭೇಟಿಗಾಗಿ ಚೀನಾಗೆ ತೆರೆಳಿದರು. ಕುತೂಹಲಕರ ವಿಷಯವೆಂದರೆ, ‘ಬಾಯ್ಕಾಟ್ ಮಾಲ್ದೀವ್ಸ್’ ಎಂಬ ಅಭಿಯಾನ ಭಾರತೀಯರಲ್ಲಿ ಆರಂಭವಾಗಿ, ಆ ದೇಶದ ಮುಖ್ಯ ಆದಾಯಮೂಲವಾದ ಪ್ರವಾಸೋದ್ಯಮಕ್ಮೆ ಪೆಟ್ಟು ಬೀಳತೊಡಗಿದಾಗ ಕಂಗೆಟ್ಟಂತೆ ಕಂಡ ಮೂಯ್ಝುೂ ಜನವರಿ 7ರಂದು ‘ಮಾಲ್ದೀವ್ಸ್ ಅನ್ನು ತಪ್ಪಾಗಿ ತಿಳಿಯಬಾರದೆಂದು ನಾನು ಭಾರತವನ್ನು ಕೈಜೋಡಿಸಿ ಕೇಳಿಕೊಳ್ಳುತ್ತೇನೆ’ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಚೀನಾಗೆ ತೆರಳುವ ಮುನ್ನ ಆ ಪೋಸ್ಟ್ ಅನ್ನು ತೆಗೆದುಹಾಕಿದರು! ಅಂದರೆ ತಮ್ಮ ಆ ಭಾರತ-ಪರ ಪೋಸ್ಟ್ನಿಂದ ಚೀನೀಯರು ಅಸಂತುಷ್ಟಗೊಂಡು ತಮ್ಮನ್ನು ವಿಶ್ವಾಸದಿಂದ ಸ್ವಾಗತಿಸಲಾರರೆಂದು ಅವರು ಆತಂಕಪಟ್ಟದ್ದು ಸ್ಪಷ್ಟ. ಇದರರ್ಥ ಚೀನೀಯರನ್ನು ಯಾವ ಕಾರಣಕ್ಕಾಗಿಯೂ ಅಸಂತುಷ್ಟಗೊಳಿಸಬಾರದೆಂದು ಅವರ ನಿಲುವಾದಂತಿತ್ತು. ಅಲ್ಲಿಂದಾಚೆಗೆ ಅವರು ಭಾರತದ ಬಗ್ಗೆ ಮಾತಾಡಿದ್ದೆಲ್ಲವೂ ಋಣಾತ್ಮಕ ಮಾತುಗಳು. ಐದು ದಿನಗಳ ಚೀನಾ ಭೇಟಿಯನ್ನು ಮುಕ್ತಾಯಗೊಳಿಸಿ ಜನವರಿ 13ರಂದು ಸ್ವದೇಶಕ್ಕೆ ಹಿಂತಿರುಗಿದೊಡನೇ ವಿಮಾನನಿಲ್ದಾಣದಲ್ಲಿ ಪತ್ರಕರ್ತರ ಎದರು ಅವರು ‘ನಾವು ಪುಟ್ಟ ರಾಷ್ಟ್ರವಾಗಿರಬಹುದು, ಆದರರ್ಥ ನೀವು ನಮ್ಮನ್ನು ಹೆದರಿಸಬಹುದು ಎಂದಲ್ಲ’ ಎಂದು ಭಾರತಕ್ಕೆ ಹೇಳಿದರು! ಮರುದಿನ ಅವರ ಸರ್ಕಾರ ಒಂದು ಹೇಳಿಕೆ ಹೊರಡಿಸಿ, ಮಾಲ್ದೀವ್ಸ್ನಲ್ಲಿರುವ ತನ್ನ ಎಂಬತ್ತೆಂಟು ಸೈನಿಕರನ್ನು ಭಾರತ ಹಿಂತೆಗೆದುಕೊಳ್ಳಬೇಕೆಂದು ಹೇಳಿ ಅದಕ್ಕಾಗಿ ಮಾರ್ಚ್ 15ರ ಗಡುವನ್ನು ನೀಡಿತು.
ಮಾಲ್ದೀವ್ಸ್ನಲ್ಲಿ ಯಾವುದೇ ತುರ್ತು ವೈದ್ಯಕೀಯ ಸನ್ನಿವೇಶಗಳಲ್ಲಿ ದೂರದೂರದ ದ್ವೀಪಗಳಿಂದ ಅಸ್ವಸ್ಥರನ್ನು ತ್ವರಿತವಾಗಿ ಮಾಲೆಯಲ್ಲಿನ ಇಂದಿರಾ ಗಾಂಧಿ ಮೆಮೋರಿಯಲ್ ಹಾಸ್ಪಿಟಲ್ಗೆ ಅಥವಾ ಭಾರತಕ್ಕೇ ಸಾಗಿಸಲು ಅಗತ್ಯವಾಗುವಂತೆ ಹೆಲಿಕಾಪ್ಟರ್ ಮತ್ತು ವಿಮಾನಗಳನ್ನು ಭಾರತ ಒದಗಿಸಿ ಸಹಕರಿಸಬೇಕೆಂದು ಮಹಮದ್ ನಶೀದ್ ಸರ್ಕಾರ 2010ರಲ್ಲಿ ಮಾಡಿಕೊಂಡ ಮನವಿಗೆ ಸ್ಪಂದಿಸಿ ಭಾರತ ಎರಡು ಹೆಲಿಕಾಪ್ಟರ್ಗಳನ್ನು ಮತ್ತು ಒಂದು ಡೋರ್ನಿಯರ್ ವಿಮಾನವನ್ನು ಕೊಡುಗೆಯಾಗಿ ಮಾಲ್ದೀವಸ್ಗೆ ನೀಡಿತು. ಅವುಗಳನ್ನು ನಿರ್ವಹಿಸುವ ತಾಂತ್ರಿಕ ಸಾಮರ್ಥ್ಯ ಮಾಲ್ದೀವಿಯನ್ನರಿಗಿಲ್ಲವಾದ ಕಾರಣ ಅದಕ್ಕಾಗಿ ಎಪ್ಪತೆôದು ಸೈನಿಕರನ್ನೂ ಭಾರತ ಕಳುಹಿಸಿತು. ಆ ಸಂಖ್ಯೆ ಈಗ ಎಂಬತ್ತೆಂಟಾಗಿದೆ. ಇವರು ವಿಮಾನಗಳ ಹಾರಾಟ ಹಾಗೂ ನಿರ್ವಹಣೆಯಲ್ಲದೆ ಮಾಲ್ದೀವ್ ಸೈನಿಕರಿಗೂ ತರಬೇತಿ ನೀಡುತ್ತಿದ್ದಾರೆ. ಮೂಯ್ಝುೂ ಕಣ್ಣು ಈಗ ಈ ಭಾರತೀಯ ಸೈನಿಕರ ಮೇಲೆ. ಆದರೆ ಈ ಭಾರತೀಯ ಸೈನಿಕರು ಅಲ್ಲಿರುವುದು ಮಾಲ್ದೀವಿಯನ್ನರ ಅನುಕೂಲಕ್ಕಾಗಿಯೇ ಹೊರತು ಭಾರತದ ಅನುಕೂಲಕ್ಕಾಗಲ್ಲ ಮತ್ತು ಭಾರತದ ಈ ವಿಮಾನಗಳು ಕಳೆದ ಹದಿಮೂರು ವರ್ಷಗಳಲ್ಲಿ ಸಾವಿರಾರು ಮಾಲ್ದೀವಿಯನ್ನರ ಜೀವ ಉಳಿಸಿವೆ ಎನ್ನುವುದನ್ನು ಅವರು ನಿರ್ಲಕ್ಷಿಸಿದ್ದಾರೆ. ಇದು ದಾರುಣವಾಗಿ ವ್ಯಕ್ತವಾದದ್ದು ಜನವರಿ 20ರಂದು.
ಹಿಂದೆಲ್ಲ ಭಾರತೀಯ ಹೆಲಿಕಾಪ್ಟರ್ ಮತ್ತು ವಿಮಾನವನ್ನು ಮಾಲ್ದೀವಿಯನ್ನರು ಅಗತ್ಯ ಬಂದಾಗಲೆಲ್ಲ ತಕ್ಷಣದ ಉಪಯೋಗಕ್ಕೆ ಪಡೆದುಕೊಳ್ಳಬಹುದಾಗಿತ್ತು. ಆದರೆ ತಮ್ಮ ಅನುಮತಿಯಿಲ್ಲದೆ ಅದಕ್ಕೆ ಕೈ ಹಾಕಬಾರದೆಂಬ ಹೊಸ ನಿಯಮವನ್ನು ಮೂಯ್ಝುೂ ಜಾರಿಗೊಳಿಸಿದ್ದಾರೆ. ದೂರದ ದ್ವೀಪವೊಂದರಲ್ಲಿ ಅಸ್ವಸ್ಥಗೊಂಡ ಹದಿನಾಲ್ಕು ವರ್ಷದ ಬಾಲಕನೊಬ್ಬನನ್ನು ತುರ್ತಾಗಿ ಮಾಲೆಯ ಆಸ್ಪತ್ರೆಗೆ ಸಾಗಿಸಲು ಭಾರತೀಯ ವಿಮಾನವನ್ನು ಬಳಸಲು ಅನುಮತಿಗಾಗಿ ರಕ್ಷಣಾ ಮಂತ್ರಿ ಘಸನ್ ಮಾಮೂನ್ ಅಧ್ಯಕ್ಷರನ್ನು ಸಂರ್ಪಸಿದರು. ಆದರೆ ಮೂಯ್ಝುೂ ಅನುಮತಿ ನಿರಾಕರಿಸಿದರು! ಅವರ ಈ ನೀತಿಯಿಂದಾಗಿ ತುರ್ತು ಚಿಕಿತ್ಸೆಗಾಗಿ ಹದಿನೆಂಟು ತಾಸುಗಳು ಕಾದ ಆ ಬಾಲಕ ದೊರೆಯದೇ ಮೃತಪಟ್ಟ. ಇದು ಮೂಯ್ಝುೂ ವಿರುದ್ಧ ರಾಜಕೀಯ ವಲಯದಲ್ಲಿ ಭುಗಿಲೆದ್ದಿದ್ದ ಅಸಂತೋಷವನ್ನು ಸಾರ್ವಜನಿಕರಿಗೂ ವಿಸ್ತರಿಸಿದೆ.
ಸಾಮಾಜಿಕ ತಾಣಗಳಲ್ಲಿ ಮಾಲ್ದೀವಿಯನ್ನರು ಮೂಯ್ಝುೂ ವಿರುದ್ಧ ಕಿಡಿಕಾರತೊಡಗಿದ್ದಾರೆ. ಇದಕ್ಕೊಂದು ಉದಾಹರಣೆ ಅಲ್ಲಿ ಪ್ರಮುಖ ಅಭಿಪ್ರಾಯ ನಿರ್ವಪಕ ಹಾಗೂ ಇತ್ತೀಚಿನವರೆಗೂ ಭಾರತದ ಕಟ್ಟಾ ವಿರೋಧಿಯಾಗಿದ್ದ ಹಸನ್ ಖುರೂಸಿ ಎಕ್ಸ್ನಲ್ಲಿ ಬರೆದ ಈ ಮಾತು: ‘ಅದೆಂತಹ ಹೃದಯಹೀನ, ದುರಹಂಕಾರಿ, ದಾನವ ಮಾಲ್ದೀವ್ಸ್ನಲ್ಲಿ ಅಧ್ಯಕ್ಷರಾಗಿದ್ದಾರೆಂದು ನಾನು ಭಾರತ, ಪಾಕಿಸ್ತಾನ ಸೇರಿದಂತೆ ಇಡೀ ಜಗತ್ತಿಗೆ ಹೇಳಬಯಸುತ್ತೇನೆ’.
ಮೂಯ್ಝುೂರ ಈ ಋಣಾತ್ಮಕ ನಡೆಗಳಿಂದ ವ್ಯಗ್ರಗೊಂಡ ಭಾರತ ದ್ವೀಪರಾಷ್ಟ್ರಕ್ಕೆ ನೀಡುತ್ತಿದ್ದ ನೆರವಿನಲ್ಲಿ ಭಾರಿ ಕಡಿತ ಮಾಡಿದೆ. ಪರಿಣಾಮವಾಗಿ ಮೂಯ್ಝುೂ ಮೊದಲಿಗೆ ಶ್ರೀಲಂಕಾದ ಮೊರೆಹೋದರು. ಆದರೆ ಭಾರತದ ನೆರವಿನಿಂದಲೇ ಚೇತರಿಸಿಕೊಳ್ಳುತ್ತಿರುವ ಆ ದೇಶ ಯಾವುದೇ ಸಹಾಯ ನೀಡಲು ನಿರಾಕರಿಸಿತು. ನಂತರ ಬಂದದ್ದು ಪಾಕಿಸ್ತಾನದಿಂದ ನೆರವಿನ ಆಶ್ವಾಸನೆ. ತಾನೇ ಆರ್ಥಿಕವಾಗಿ ಕಂಗೆಟ್ಟಿರುವ ಪಾಕಿಸ್ತಾನ ಮತ್ತೊಂದು ದೇಶಕ್ಕೆ ನೆರವು ನೀಡಬಲ್ಲದೇ? ಅದರ ಮುಂದೆ ಕೈಯೊಡ್ಡಬೇಕಾದ ಸ್ಥಿತಿಗೆ ಮಾಲ್ದೀವ್ಸ್ ಒಂದೇ ತಿಂಗಳಲ್ಲಿ ಇಳಿದದ್ದು ಶೋಚನೀಯ.
ಇಷ್ಟಾಗಿಯೂ ಮೂಯ್ಝುು ಪಾಠ ಕಲಿತಂತಿಲ್ಲ. ಇದೇ ವಾರಾಂತ್ಯದಲ್ಲಿ ಮಾಲ್ದೀವ್ಸ್ ಸರ್ಕಾರಿ ಅಧಿಕಾರಿಗಳ ತಂಡವೊಂದು ನವದೆಹಲಿಯಲ್ಲಿತ್ತು. ಅದರೊಂದಿಗಿನ ಮಾತುಕತೆಯಲ್ಲಿ ಭಾರತ ಸರ್ಕಾರ ತನ್ನ ಸೈನಿಕರನ್ನು ಮಾರ್ಚ್ 10- ಮೇ 10ರ ನಡುವೆ ಹಿಂತೆಗೆದುಕೊಳ್ಳಲು ಒಪ್ಪಿದೆ ಎಂಬ ಹೇಳಿಕೆಯನ್ನು ಮೂಯ್ಝುೂ ಸರ್ಕಾರ ಪ್ರಕಟಿಸಿ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ. ಅಂತಹ ಹೇಳಿಕೆ ಭಾರತ ಸರ್ಕಾರದಿಂದ ಬಂದಿಲ್ಲ. ಈ ನಡುವೆ ಮೂಯ್ಝುೂ ವಿರುದ್ಧ ವಿರೋಧ ತಾರಕ್ಕೇರುತ್ತಿದೆ. ಫೆಬ್ರವರಿ 5ರಂದು ಮೂಯ್ಝುೂ ಮೊದಲ ಬಾರಿಗೆ ಅಲ್ಲಿನ ಸಂಸತ್ ಮಜ್ಲಿಸ್ಗೆ ಹೊದಾಗ ಅಲ್ಲಿದ್ದದ್ದು ಕೇವಲ 24 ಸಂಸದರು ಮಾತ್ರ! ಉಳಿದ 56 ಸಂಸದರು ಗೈರುಹಾಜರಾಗಿ ತಮ್ಮ ವಿರೋಧ ವ್ಯಕ್ತಪಡಿಸಿದರು. ಅವರೀಗ ಮೂಯ್ಝುೂ ಅವರನ್ನು ಮಹಾಭಿಯೋಗದ ಮೂಲಕ ಅಧಿಕಾರದಿಂದ ಇಳಿಸಲು ತಯಾರಿ ನಡೆಸಿದ್ದಾರೆ. ಒಟ್ಟಿನಲ್ಲಿ ಭಾರತ-ವಿರೋಧಿ ನೀತಿಯಿಂದ ಮಾಲ್ದೀವಿಯನ್ನರ ಬದುಕನ್ನು ಮೂಯ್ಝುೂ ಮೂರಾಬಟ್ಟೆಯಾಗಿಸಹೊರಟಿರುವುದು ನಿಜ. ಅದಕ್ಕೆ ಅವರು ಯಾವ ಬೆಲೆ ತೆರುತ್ತಾರೆ ಎನ್ನುವುದನ್ನು ನೋಡಲು ನಾವು ಹೆಚ್ಚು ದಿನ ಕಾಯಬೇಕಾಗದು.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)