ಅಂಕಣ

ಮನೆಯಿಂದಲೇ ಮಾಡುವ 4 ಬಿಸಿನೆಸ್: ಮನಿಮಾತು

Webdesk - Ravikanth
ಬಿಸಿನೆಸ್ ಆರಂಭಿಸಲು ದೊಡ್ಡ ಬಂಡವಾಳ ಅಗತ್ಯ. ಸಣ್ಣ ಮೊತ್ತದಿಂದ ಏನೂ ಶುರು ಮಾಡಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಆನೇಕ ಬೃಹತ್ ಕಂಪನಿಗಳೂ ಸಣ್ಣ ಮೊತ್ತದ ಹೂಡಿಕೆಯಿಂದಲೇ ಉದ್ಯಮಗಳನ್ನು ಆರಂಭಿಸಿ ಯಶಸ್ವಿಯಾಗಿವೆ. ಬಿಸಿನೆಸ್ ಐಡ್ಯಾ ಇದ್ದರೆ ಸಾಲದು, ಅದನ್ನು ಅನುಷ್ಠಾನಕ್ಕೆ ತರುವ ಜಾಣ್ಮೆಯಿದ್ದರೆ ಮಾತ್ರ ಗೆಲವು ನಿಮ್ಮದಾಗುತ್ತದೆ. 20 ಸಾವಿರ ರೂ.ನಿಂದ 1 ಲಕ್ಷ ರೂ. ಬಂಡವಾಳವಿದ್ದರೆ ಸಾಕು ಅನೇಕ ಬಿಸಿನೆಸ್​ಗಳನ್ನು ನೀವು ಮನೆಯಿಂದಲೇ ಆರಂಭಿಸಬಹುದು. ಅಂತಹ ಬಿಸಿನೆಸ್ ಐಡಿಯಾಗಳ ಬಗ್ಗೆ ಒಂದು ನೋಟ ಇಲ್ಲಿದೆ.

1)ಕ್ಯಾಂಡಲ್ ತಯಾರಿಕೆ: ಕ್ಯಾಂಡಲ್ ಬಿಸಿನೆಸ್ ಅತಿ ಸರಳವಾಗಿ ಶುರುಮಾಡುವಂತಹ ಉದ್ದಿಮೆ. ಇದಕ್ಕೆ ಹೆಚ್ಚು ಬಂಡವಾಳದ ಅವಶ್ಯಕತೆ ಬರುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಶುರುಮಾಡಲು 15 ರಿಂದ 20 ಸಾವಿರ ರೂ. ಸಾಕಾಗುತ್ತದೆ. 50 ರಿಂದ 60 ಸಾವಿರ ರೂ. ಹೂಡಿಕೆ ಮಾಡಲು ಶಕ್ತಿ ಇರುವವರು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಉದ್ದಿಮೆ ಆರಂಭಿಸಬಹುದು. ಆರಂಭದಲ್ಲಿ ಮೇಣಕ್ಕೆ, ಅಚ್ಚಿಗೆ ಮತ್ತು ಗ್ಯಾಸ್​ಗೆ ಹಣ ಹೊಂದಿಸಿಕೊಂಡರೆ ಇನ್ಯಾವ ಹೂಡಿಕೆಯೂ ಈ ಉದ್ದಿಮೆಯಲ್ಲಿ ಇರುವುದಿಲ್ಲ. ತದನಂತರ ಕೇವಲ ಅಗತ್ಯಕ್ಕೆ ತಕ್ಕಂತೆ ಮೇಣ, ದ್ರವ್ಯಗಳನ್ನು ಕೊಂಡುಕೊಂಡರೆ ಆಯಿತು. ಇನ್ನು ವಿನ್ಯಾಸಕ್ಕೆ ತಕ್ಕಂತೆ ಬೇಕಾಗುವ ಕಚ್ಛಾ ವಸ್ತುಗಳು ಸ್ಥಳೀಯ ಮಾರುಕಟ್ಟೆಯಲ್ಲೇ ಲಭ್ಯವಿರುತ್ತದೆ. 2020ರ ಗ್ಲೋಬಲ್ ಮಾರ್ಕೆಟ್ ಸರ್ವೆ ಪ್ರಕಾರ ಕ್ಯಾಂಡಲ್ ಬಿಜಿನೆಸ್​ನ ಮಾರುಕಟ್ಟೆ ಮೌಲ್ಯ ಸುಮಾರು 2601 ಕೋಟಿ ರೂ. ಭಾರತದಲ್ಲಿ ಕ್ಯಾಂಡಲ್ ಬಿಸಿನೆಸ್ ವಾರ್ಷಿಕ ಶೇ.20ರ ಪ್ರಗತಿ ಸಾಧಿಸುತ್ತಿದೆ. ಉತ್ತಮ ಫ್ರಾಗ್ರಾನ್ಸ್ ಮತ್ತು ಡಿಸೈನ್ ನೀಡಿದರೆ ದೇಶ-ವಿದೇಶಗಳಿಂದಲೂ ಬೇಡಿಕೆ ಬರುತ್ತದೆ. ಸ್ಪಾ, ರೆಸಾರ್ಟ್, ಧ್ಯಾನ ಕೇಂದ್ರ, ಈವೆಂಟ್ ಮ್ಯಾನೆಜ್​ವೆುಂಟ್ ಸಂಸ್ಥೆಗಳು ಕ್ಯಾಂಡಲ್ ಉದ್ದಿಮೆಯ ದೊಡ್ಡ ಪ್ರಮಾಣದ ಗ್ರಾಹಕರು.

2)ಅಡಕೆ ತಟ್ಟೆ ಬಿಸಿನೆಸ್: 1 ರೂಪಾಯಿ ಬಂಡವಾಳ ಹಾಕಿದರೆ 3-4 ರೂ. ಲಾಭ ಕೊಡುವ ಉದ್ಯಮ ಅಡಕೆ ತಟ್ಟೆ ತಯಾರಿಕೆ. ಸಣ್ಣ ಮಟ್ಟದಲ್ಲಿ ಬಿಸಿನೆಸ್ ಮಾಡಿ ಬದುಕು ಕಟ್ಟಿಕೊಳ್ಳುತ್ತೇವೆ ಎನ್ನುವವರಿಗೆ ಮತ್ತು ದೊಡ್ಡ ಮಟ್ಟದಲ್ಲಿ ತಟ್ಟೆ ಘಟಕ ಆರಂಭಿಸಿ ಹೆಚ್ಚೆಚ್ಚು ಲಾಭ ಗಳಿಸುತ್ತೇವೆ ಎನ್ನುವವರಿಗೂ ಈ ಉದ್ಯಮದಲ್ಲಿ ಅವಕಾಶಗಳಿವೆ. ಒಂದು ಅಡಕೆ ಹಾಳೆಯಲ್ಲಿ ಸಾಮಾನ್ಯವಾಗಿ 10 ಇಂಚು (ಒಳಭಾಗದಲ್ಲಿ ಎಂಟೂವರೆ ಇಂಚು) ಹಾಗೂ 12 ಇಂಚು (ಒಳಭಾಗದಲ್ಲಿ 10 ಇಂಚು) ಗಾತ್ರದ ಮೂರು ಊಟದ ತಟ್ಟೆ ಮತ್ತು ಎರಡು ತಿಂಡಿ ಪ್ಲೇಟ್, ಮೂರು ದೊನ್ನೆಗಳನ್ನು ತಯಾರಿಸಬಹುದು. ಊಟದ ತಟ್ಟೆ ಹಾಗೂ ತಿಂಡಿ ಪ್ಲೇಟ್ ತಯಾರಿಸಿದ ನಂತರ ಉಳಿದ ಹಾಳೆಗಳಿಂದ ದೊನ್ನೆ ಮಾಡಬಹುದು. ಒಟ್ಟಿನಲ್ಲಿ ಯಾವುದೇ ಒಂದು ಅಡಕೆ ಹಾಳೆಯಲ್ಲಿ ವ್ಯರ್ಥವಾಗುವ ಭಾಗ ಇರುವುದಿಲ್ಲ. ಅಡಕೆ ಹಾಳೆಯಿಂದ ಉತ್ಪನ್ನಗಳನ್ನು ತಯಾರಿಸಲು ಅರ್ಧ ಎಚ್.ಪಿ. ಹೈಡ್ರಾಲಿಕ್ ಯಂತ್ರ ಬೇಕಾಗುತ್ತದೆ. 50 ಸಾವಿರ ರೂ. ನಿಂದ 1 ಲಕ್ಷ ರೂ. ಹೂಡಿಕೆ ಮಾಡಿ ಅಡಕೆ ತಟ್ಟೆ ತಯಾರಿಕೆ ಯಂತ್ರ ಖರೀದಿಸಿ ಉದ್ಯಮ ಶುರು ಮಾಡಬಹುದು.

3)ಅಣಬೆ ಕೃಷಿ: ಕೃಷಿ ಮಾಡಲು ಭೂಮಿ ಇಲ್ಲ, ಹೆಚ್ಚು ನೀರಿನ ವ್ಯವಸ್ಥೆ ಇಲ್ಲ, ದೊಡ್ಡ ಬಂಡವಾಳವಿಲ್ಲ. ಆದರೆ ಕಷ್ಟಪಟ್ಟು ದುಡಿಯಲು ಸಿದ್ಧರಿದ್ದೇವೆ ಎನ್ನುವವರಿಗೆ ಅಣಬೆ ಕೃಷಿ ಹೇಳಿ ಮಾಡಿಸಿದಂತಿದೆ. ಹತ್ತಿಪ್ಪತ್ತು ಸಾವಿರ ರೂ. ಬಂಡವಾಳದೊಂದಿಗೆ 20*30 ಜಾಗ ಅಥವಾ ಮನೆಯೊಳಗೆ ಒಂದು ಕೊಠಡಿ ಇದ್ದರೂ ಸಾಕು. ಪ್ರತಿದಿನ ಸುಮಾರು 12 ಕೆಜಿ ಅಣಬೆ ಬಿಡಿಸಿಕೊಂಡು 2,400 ರೂ. ಆದಾಯ ಗಳಿಸಬಹುದು. ಇಷ್ಟು ಸಣ್ಣ ಪ್ರಮಾಣದಲ್ಲಿ ಅಣಬೆ ಕೃಷಿ ಮಾಡಲು ಕಾರ್ವಿುಕರ ಅಗತ್ಯವಿರುವುದಿಲ್ಲ, ಮನೆಯವರೇ ಸೇರಿಕೊಂಡು ಕೃಷಿಯಲ್ಲಿ ತೊಡಗಬಹುದು. ಒಂದು ರೂಪಾಯಿ ಬಂಡವಾಳಕ್ಕೆ ನಾಲ್ಕು ರೂ. ಲಾಭ ಕೊಡುವ ಕೃಷಿ ಅಂದ್ರೆ ಅದು ಅಣಬೆ ಕೃಷಿ. ಇದು ಯಾರೋ ಹೇಳುತ್ತಿರುವ ಮಾತಲ್ಲ. ಕೃಷಿ ತಜ್ಞರು, ರೈತರೇ ಅಣಬೆ ಕೃಷಿಯಲ್ಲಿ ಇಷ್ಟೋಂದು ಲಾಭ ಗಳಿಸಲು ಸಾಧ್ಯ ಎನ್ನುವುದನ್ನು ನಿರೂಪಿಸಿದ್ದಾರೆ.

4)ಉಪ್ಪಿನಕಾಯಿ ತಯಾರಿಕೆ: ಮನೆಯಲ್ಲಿ ಮಾತ್ರ ತಯಾರಿಸುತ್ತಿದ್ದ ಉಪ್ಪಿನಕಾಯಿ ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ. ಉಪ್ಪಿನಕಾಯಿ ಇಲ್ಲದ ಊಟ ಸಂಪೂರ್ಣವೇ ಆಗದು ಎನ್ನುವಷ್ಟರ ಮಟ್ಟಿಗೆ ಉಪ್ಪಿನಕಾಯಿ ಪ್ರಾಮುಖ್ಯತೆ ಗಳಿಸಿದೆ. ಹಲವರು ಮನೆಯಿಂದಲೇ ಸಣ್ಣ ಪ್ರಮಾಣದಲ್ಲಿ ಉಪ್ಪಿನಕಾಯಿ ವ್ಯವಹಾರ ಆರಂಭ ಮಾಡಿ, ಸದ್ಯ ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಉಪ್ಪಿನಕಾಯಿ ಗ್ರಾಹಕರಿಗೆ ಊಟದ ರುಚಿ ಹೆಚ್ಚಿಸುವ ಜತೆಗೆ ತಯಾರಕರ ಜೇಬನ್ನೂ ತುಂಬಿಸುತ್ತಿದೆ. ಉಪ್ಪಿನಕಾಯಿ ಬಿಸಿನೆಸ್ ಮಾಡಲು 10-20 ಸಾವಿರ ರೂ. ಬಂಡವಾಳವಿದ್ದರೆ ಸಾಕು. ಉದ್ಯಮಶೀಲ ಮನಸ್ಥಿತಿ ಇದ್ದರೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನ ತಯಾರಿಸಿದರೆ ಉಪ್ಪಿನಕಾಯಿ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯ.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಹಲವು ಬಿಸಿನೆಸ್ ಕೋರ್ಸ್: ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕಡಿಮೆ ಬಂಡವಾಳದಲ್ಲಿ ಮನೆಯಿಂದಲೇ ಆರಂಭಿಸಬಹುದಾದ ಸಾಕಷ್ಟು ಉದ್ಯಮಗಳ ಬಗ್ಗೆ ಮಾಹಿತಿ ಇದೆ. ಉಪ್ಪಿನಕಾಯಿ, ಅಣಬೆ, ಕ್ಯಾಂಡಲ್ ತಯಾರಿಕೆ, ಅಡಕೆ ತಟ್ಟೆ ತಯಾರಿಕೆ, ಕೇಕ್ ಮೇಕಿಂಗ್, ಸೋಪ್ ಮೇಕಿಂಗ್, ಟೆರಾಕೋಟ ಜ್ಯುವೆಲರಿ ಮೇಕಿಂಗ್, ಟೈಲರಿಂಗ್ ಸೇರಿ ಹತ್ತಾರು ಕೋರ್ಸ್​ಗಳನ್ನು ರೂಪಿಸಲಾಗಿದೆ. ನಿರ್ದಿಷ್ಟ ಉದ್ಯಮದಲ್ಲಿ ಯಶಸ್ಸು ಗಳಿಸಿರುವ ಸಾಧಕರೇ ಈ ಕೋರ್ಸ್​ಗಳಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ ವಿವಿಧ ಬಿಸಿನೆಸ್ ಕೋರ್ಸ್​ಗಳನ್ನು ನೋಡಿ, ನಿಮಗಿಷ್ಟದ ಬಿಸಿನೆಸ್ ಆಯ್ಕೆ ಮಾಡಿಕೊಂಡು ಉದ್ಯಮ ಶುರು ಮಾಡಿ.

ಮೇಕಪ್ ಆರ್ಟಿಸ್ಟ್, ಅಣಬೆ, ಆಯಿಲ್ ಮಿಲ್ ಬಿಸಿನೆಸ್ ಬಗ್ಗೆ ಕಾರ್ಯಾಗಾರ: ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್​ವತಿಯಿಂದ ಮೇಕಪ್ ಆರ್ಟಿಸ್ಟ್, ಅಣಬೆ ಮತ್ತು ಗಾಣದ ಎಣ್ಣೆ (ಆಯಿಲ್ ಮಿಲ್) ಬಿಸಿನೆಸ್ ತರಬೇತಿ ಜತೆ ಉದ್ಯಮ ಮಾರ್ಗದರ್ಶನ ಕಾರ್ಯಾಗಾರ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.- 7975465873 ಸಂಪರ್ಕಿಸಿ.