ನಾನು ಬಿ.ಇ. ಪದವೀಧರ, ಸಾಫ್ಟವೇರ್ ಉದ್ಯೋಗಿ. ಮಹಾನಗರ ಪಾಲಿಕೆಯ ವಿವಿಧ ಆಯುಕ್ತರುಗಳ ಆಪ್ತ ಸಹಾಯಕರಾಗಿ ಸೇವೆಯಿಂದ ನಿವೃತ್ತಿ ಹೊಂದಿದವರು ನಮ್ಮ ತಂದೆ. ಕಷ್ಟಪಟ್ಟು ಜೀವನ ನಡೆಸಿದವರು. ಸಂಬಳ ಬಿಟ್ಟು ಬೇರಾವುದಕ್ಕೂ ಕೈಚಾಚಿದವರಲ್ಲ. ಬಾಲ್ಯದಿಂದಲೂ ನನ್ನನ್ನು ಶಿಕ್ಷಣ, ಆಟ, ಓಟದಲ್ಲಿ ಬೆಂಬಲಿಸಿದವರು. ಶಿಕ್ಷಣದ ಜತೆಗೆ ಲೌಕಿಕ/ ಅಲೌಕಿಕ ಜೀವನದ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ಮಹಾತ್ಮರುಗಳ ಬೋಧನೆಗಳನ್ನು ಪರಿಚಯಿಸಿ ನನ್ನ ಮನಸ್ಸು ಆಧ್ಯಾತ್ಮಿಕತೆ ಕಡೆ ವಾಲುವಂತೆ ಮಾಡಿದ್ದಾರೆ. ತಂದೆಯವರು ಅನುಸರಿಸುತ್ತಿರುವ ಭ್ರಷ್ಟರಹಿತ, ಪರೋಪಕಾರಿ ಜೀವನವೇ ನನಗೆ ಪ್ರೇರಣೆ. ಇಂತಹ ಹೃದಯವಂತನಿಗೊಂದು ಸಲಾಂ.
| ಆಕಾಶ ಸುರೇಶ ಕಲ್ಯಾಣಶೆಟ್ಟಿ ರಾಣಿ ಚನ್ನಮ್ಮನಗರ, ಬೆಳಗಾವಿ