ಅಂಕಣ

ಕೈಮುಗಿದು ಒಳಗೆ ಬಾ ಎಂದು ಕುವೆಂಪು ಹೇಳಿದ್ದೇಕೆ ಗೊತ್ತೆ?

ಕೆಲವರ ಮಾತುಗಳನ್ನು ಕೇಳುತ್ತಿದ್ದರೆ ಸಂಗೀತವೂ ನಾಚುವಂತಿರುತ್ತದೆ. ಪ್ರಾಣಿ ಪಕ್ಷಿಗಳೂ ತಲೆದೂಗುವಂತಿರುತ್ತದೆ ಮತ್ತು ಕೇಳುಗರ ಮನಸ್ಸಿಗೆ ನಾಟಬೇಕು ಎಂದರೆ ನಿಷ್ಠುರವಾಗಿ, ಕಟುವಾಗಿ, ಒರಟೊರಟಾಗಿಯೇ ಹೇಳಬೇಕೆಂದೇನೂ ಇಲ್ಲ. ಮಾತಿಗೆ ಶಕ್ತಿ ಬರುವುದು ಮಾತು-ಕೃತಿಗಳು ಒಂದಾದಾಗ ಮಾತ್ರ ಎಂಬುದನ್ನು ಸದಾ ಸ್ಮರಣೆಯಲ್ಲಿ ಇಟ್ಟುಕೊಳ್ಳಬೇಕು.

ಕಳೆದ ಕೆಲವು ವರ್ಷಗಳಿಂದ ಗಮನಿಸುತ್ತಿದ್ದೇನೆ. ಕೆಲವು ಪ್ರಮುಖ ವಿಷಯಗಳು ಸಾರ್ವಜನಿಕ ಚರ್ಚೆಗೆ ಬಂದಾಗ ಆ ಚರ್ಚೆಗಳ ಧಾಟಿಯನ್ನೂ ಗಮನಿಸಿದ್ದೇನೆ. ಒಂದು ವಿಷಯ ಎದ್ದು ಕಾಣುತ್ತದೆ. ಈ ಮಣ್ಣಿನ ಸಂಸ್ಕೃತಿಗೆ ಶೋಭಿಸದ, ಘನತೆ, ಗಾಂಭಿರ್ಯಗಳ ಲವಲೇಶವೂ ಇಲ್ಲದ ಭಾಷೆ, ಹಾವಭಾವ, ಪದಪ್ರಯೋಗ ನಡೆಯುತ್ತಿರುತ್ತದೆ. ಇವೆಲ್ಲವೂ ಜವಾಬ್ದಾರಿ ಸ್ಥಾನಗಳಲ್ಲಿ ಕುಳಿತಿರುವ, ವಿದ್ಯಾವಂತರೆನ್ನಿಸಿಕೊಂಡವರ, ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ಅರ್ಹರು ಎಂದು ಪರಿಗಣಿಸಲ್ಪಟ್ಟ ಜನರಿಂದಲೇ ನಡೆಯುತ್ತಿದೆ. ಬಹುಷಃ ಇವರೆಲ್ಲರೂ ನಮ್ಮ ಪಾರ್ಲಿಮೆಂಟಿನಲ್ಲಿ, ವಿಧಾನಸಭೆಯಲ್ಲಿ ನಡೆಯುವ ಕಾರ್ಯಕಲಾಪಗಳಿಂದ ಸ್ಪೂರ್ತಿಯನ್ನು ಪಡೆದಿರಬೇಕು! ಎಷ್ಟು ಹೆಚ್ಚು ಅಸಭ್ಯತೆಯಿಂದ, ಅನಾಗರಿಕ ಲಕ್ಷಣಗಳಿಂದ ಅಬ್ಬರಿಸುತ್ತೇವೆಯೋ ಅಷ್ಟು ಪ್ರಾಮುಖ್ಯ ನಮ್ಮದಾಗಿರುತ್ತದೆ ಎಂದು ಇವರು ಭಾವಿಸರಬೇಕು! ಪಾರ್ಲಿಮೆಂಟ್ ಕಲಾಪಗಳು, ಮಾಧ್ಯಮದ ಚರ್ಚೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೌಷ್ಟಿಕ ಅಂಶಗಳು. ವಾಕ್ಸಾ ್ವಂತ್ರ್ಯದ ವಾಹಿನಿಗಳು.

ಇಂಗ್ಲೆಂಡ್ ಪ್ರಧಾನಿ ಡಿಸ್ರೇಲಿ ನಡೆಸುತ್ತಿದ್ದ, ಇನ್ನೂ ಅಂಥ ಹಲವರು ಮಂಡಿಸಿರುವ ಚರ್ಚೆಗಳು, ಅವುಗಳ ಭಾಷಾ ಪ್ರಬುದ್ಧತೆ, ರ್ತಾಕತೆ, ವಿಷಯ ಮಂಡನೆಯ ಸಾಮರ್ಥ್ಯಗಳಿಗೆ ಸಾರ್ವಕಾಲಿಕ ಮಾದರಿ. ಇದು ಈವತ್ತು ನಿನ್ನೆಯ ಪರಂಪರೆಯಲ್ಲ. ಮಹಾಭಾರತದಲ್ಲೇ ಕೌರವರ ಆಸ್ಥಾನದಲ್ಲಿ ನಡೆದ ಚರ್ಚೆ, ಅಭಿಪ್ರಾಯ ಮಂಡನೆಗಳ ಸಂಗ್ರಹವನ್ನೇನಾದರೂ ಪುಸ್ತಕ ರೂಪದಲ್ಲಿ ತಂದರೆ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಅದ್ಭುತ ಮಾರ್ಗದರ್ಶಿಯಾದೀತು. ಆದರೆ ಭಾರತದ ಪಾರ್ಲಿಮೆಂಟಿನಲ್ಲಿ ಯಾರ ಚಿಂತನೆಗಳು ಯಾರನ್ನೂ ತಲುಪುವಹಾಗಿಲ್ಲ. ಸದಸ್ಯನೊಬ್ಬ ತನ್ನ ವಿಷಯವನ್ನು ಪ್ರಸ್ತುತಪಡಿಸುತ್ತಿರುವ ಸಂದರ್ಭದಲ್ಲಿ ಬೇರೆಲ್ಲರೂ ಗಂಭೀರವಾಗಿದ್ದು ಅವರ ಚಿಂತನೆಗಳನ್ನು ಗಮನಕೊಟ್ಟು ಕೇಳಿ ಅದರ ಬಗ್ಗೆ ಅವರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬೇಕಾದ್ದು ನಾಗರಿಕ ಸಮಾಜ ಸಾರ್ವಜನಿಕ ಕಲಾಪದಲ್ಲಿ ಪಾಲಿಸಬೇಕಾದ ಕನಿಷ್ಠ ಶಿಸ್ತು ಮತ್ತು ಸಭ್ಯತೆ. ಅದೇ ರೀತಿ ಮಾಧ್ಯಮದ ಚರ್ಚೆಗಳು ಕೂಡ. ಪ್ರತಿವಾದಿಗಳನ್ನು ಸಂಬೋಧಿಸುವಾಗ ಏಕವಚನ ಬಳಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಅಸಹ್ಯ. ಇದು ಚರ್ಚೆಗಷ್ಟೇ ಸೀಮಿತವಾಗಿದ್ದರೆ ಎಲ್ಲ ಅವರವರು ಪಡೆದುಕೊಂಡು ಬಂದ ಸಂಸ್ಕಾರ ಎಂದು ಸುಮ್ಮನಾಗಬಹುದಿತ್ತು. ಆದರೆ ಅತ್ಯುನ್ನತ ಅಧಿಕಾರದಲ್ಲಿರುವ ವ್ಯಕ್ತಿಗಳನ್ನೂ, ಅದರಲ್ಲೂ ಸ್ತ್ರೀಯರನ್ನೂ, ಕೆಳಮಟ್ಟದ ಅಧಿಕಾರಿಯೊಬ್ಬ ಅಗೌರವ, ಅಸಭ್ಯತೆಯಿಂದ ಸಂಬೋಧಿಸುವುದು, ಅವರ ಬಗ್ಗೆ ಪ್ರಸ್ತಾಪಿಸುವುದು ವಿಕೃತ ಮನಸ್ಸುಗಳ ರಾಕ್ಷಸೀಯ ಅಟ್ಟಹಾಸ. ನಾಗರಿಕ ಸಮಾಜ ತಲೆತಗ್ಗಿಸಬೇಕಾದ ವಿಷಯ.

ಸ್ವಾಮಿ ವಿವೇಕಾನಂದರೇ ಪುನರ್ಜನ್ಮವೆತ್ತಿಬಂದರೇನೋ ಎಂಬಷ್ಟು ಖ್ಯಾತಿ ಪಡೆದ ಮಹಾನ್ ಸಂನ್ಯಾಸಿ ಹಾಗೂ ರಾಮಕೃಷ್ಣ ಮಿಷನ್ನಿನ ಹಿಂದಿನ ಅಧ್ಯಕ್ಷರಾಗಿದ್ದ ಬ್ರಹ್ಮಲೀನ ಸ್ವಾಮಿ ರಂಗನಾಥಾನಂದಜಿಯವರು ಜವಾಹರ್​ಲಾಲ್ ನೆಹರು, ರಾಧಾಕೃಷ್ಣನ್, ಇಂದಿರಾ ಗಾಂಧಿ, ಕರಣ್ ಸಿಂಗ್, ಕುವೆಂಪು , ಬೇಂದ್ರೆ ಹಾಗೂ ಹಲವು ನೊಬೆಲ್ ಪ್ರಶಸ್ತಿ ಪುರಸ್ಕೃತರ ಆತ್ಮೀಯ ಪರಿಚಯವನ್ನು ಹೊಂದಿದ್ದವರು. ಅವರು ತಮ್ಮ ಬಾಲ್ಯಾವಸ್ಥೆಯ ಬಗ್ಗೆ ಒಮ್ಮೆ ಹೇಳುತ್ತಾರೆ. ಚಿಕ್ಕವಯಸಿನಲ್ಲಿ ಅವರು ಅವಾಚ್ಯ ಶಬ್ದಗಳನ್ನು ಉಪಯೋಗಿಸುತ್ತಿದ್ದರಂತೆ. ಒಮ್ಮೆ ಅವರ ತಾಯಿ, ‘ನೋಡು, ನಾಲಿಗೆ ದೇವಿ ಸರಸ್ವತಿಯ ಆವಾಸಸ್ಥಾನ. ಅದನ್ನು ಯಾವಾಗಲೂ ಪವಿತ್ರವಾಗಿ ಇಟ್ಟುಕೊಂಡಿರಬೇಕು. ಅವಾಚ್ಯ ಶಬ್ದಗಳನ್ನು ಉಪಯೋಗಿಸಿದರೆ ಅದು ಅಪವಿತ್ರವಾಗುತ್ತದೆ. ಸರಸ್ವತಿ ಅಂಥ ಜಾಗದಲ್ಲಿ ಕೂಡದೆ ಹೊರಟುಹೋಗಿಬಿಡುತ್ತಾಳೆ’ ಎಂದು ಹೇಳಿದರಂತೆ. ಇದು ಬಾಲಕ ಶಂಕರನ್ (ಸ್ವಾಮಿಗಳ ಪೂರ್ವಾಶ್ರಮದ ಹೆಸರು) ಮೇಲೆ ಎಷ್ಟು ಪ್ರಭಾವ ಬೀರಿತು ಎಂದರೆ ಅಂದಿನಿಂದ ಅವರು ಈ ದುರಭ್ಯಾಸ ಬಿಟ್ಟರಲ್ಲದೆ ಮುಂದೆ ವಿಶ್ವವಿಖ್ಯಾತ ವಾಗ್ಮಿಗಳಾದರು. ಪ್ರಪಂಚದ ಯಾವ ಪ್ರಮುಖ ವಿಶ್ವವಿದ್ಯಾಲಯ, ಪ್ರಮುಖ ನಗರವನ್ನೂ ಬಿಡದೆ ಅಲ್ಲೆಲ್ಲ ಪ್ರಬುದ್ಧ ಉಪನ್ಯಾಸಗಳನ್ನು ನೀಡಿದರು. ಅವೇ ಇಂದು ‘ಉಠಿಛ್ಟಿ್ಞ್ಝ ಡಚ್ಝ್ಠಠ ್ಛ್ಟ ಚ ್ಚಚ್ಞಜಜ್ಞಿಜ ಠಟ್ಚಜಿಛಿಠಿಢ’, ’ಖಜಛಿ Mಛಿಠಠಚಜಛಿ ಟ್ಛ ಖಿಟಚ್ಞಜಿಠಜಚಛಠ’, ’ಖ್ಞಿಜಿಡಛ್ಟಿಠಚ್ಝ ಞಛಿಠಠಚಜಛಿ ಟ್ಛ ಆಜಚಜಚಡಚಛ ಎಜಿಠಿಚ ’ ಇತ್ಯಾದಿ ಪುಸ್ತಕಗಳ ರೂಪದಲ್ಲಿ ಸಿಗುತ್ತವೆ. 1948 ರಿಂದ 1962ರವರೆಗೆ ದೆಹಲಿಯ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿಗಳು ಪ್ರತಿ ಶನಿವಾರ ನೀಡುತ್ತಿದ್ದ ಉಪನ್ಯಾಸಗಳಿಗೆ ಇಡೀ ಪಾರ್ಲಿಮೆಂಟಿನ ಸದಸ್ಯರು, ರಾಯಭಾರಿಗಳು, ಐಎಎಸ್, ಐಪಿಎಸ್ ವಲಯಗಳ ಉನ್ನತ ಮಟ್ಟದ ಅಧಿಕಾರಿಗಳು ಕಿಕ್ಕಿರಿದು ನೆರೆಯುತ್ತಿದ್ದರು. ಸ್ವತಃ ಪ್ರಧಾನಮಂತ್ರಿ ನೆಹರು ಮತ್ತು ಅವರ ಕುಟುಂಬದ ಸದಸ್ಯರು, ಇಲಾಖಾ ಮಂತ್ರಿಗಳಿಂದಲೇ ಮೊದಲ ನಾಲ್ಕೆ ೖದು ಸಾಲುಗಳ ತುಂಬಿರುತ್ತಿದ್ದವು. ಅವರ ಅಸೀಮ ವಿದ್ವತ್ತನ್ನೂ, ಅದ್ಭುತ ವಾಗ್ಮಿತೆಯನ್ನೂ ಕಂಡ ಸ್ವಯಂ ತಾವೇ ವಿಶ್ವವಿಖ್ಯಾತ ವಿದ್ವಾಂಸರಾಗಿದ್ದ ಭಾರತದ ಎರಡನೇ ರಾಷ್ಟ್ರಪತಿ ಸರ್ವಪ್ಪಲ್ಲಿ ರಾಧಾಕೃಷ್ಣನ್ ಒಮ್ಮೆ ಗಜಚಠಿ ಛಟ ಢಟ್ಠ ಜಚಡಛಿ ಜ್ಞಿ ಢಟ್ಠ್ಟ ಚ್ಟಿಚಜ್ಞಿ (ನಿಮ್ಮ ತಲೆಯಲ್ಲಿ ಎಷ್ಟೆಲ್ಲ ಇಟ್ಟುಕೊಂಡಿರುವಿರಿ ) ಎಂದು ಉದ್ಗರಿಸಿದ್ದರು. ಇವೆಲ್ಲದರ ಮೂಲ ತಾಯಿಯಿಂದ ಬಂದ ತಿದ್ದುಪಡಿ, ಸಂಸ್ಕಾರ. ‘ಜನನಿ ತಾನು ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು’ ಎಂದು ಜ್ಞಾನಿಯೊಬ್ಬ ಸುಮ್ಮನೆ ಹೇಳಲಿಲ್ಲ. ಎಷ್ಟು ಜನರು ಆ ಧನ್ಯತೆಯನ್ನು ಅನುಭವಿಸಬಲ್ಲರು. ಎಷ್ಟು ಜನ ತಾಯಂದಿರಿಗೆ ಈ ಜವಾಬ್ದಾರಿ, ಈ ಪ್ರಜ್ಞಾವಂತಿಕೆ ಇದ್ದೀತು? ತಾಯಂದಿರಿಂದ ಸಂಸ್ಕಾರ ಬರಲಿಲ್ಲವಾದರೇನಂತೆ ಈ ವ್ಯಕ್ತಿಯೇ ಸಾಕಷ್ಟು ವಿದ್ಯಾಭ್ಯಾಸ, ಅನುಭವ, ಸಾರ್ವಜನಿಕ ಸಂಪರ್ಕ ಇತ್ಯಾದಿಗಳನ್ನು ಹೊಂದಿರುತ್ತಾನಲ್ಲ! ಅವೆಲ್ಲವೂ ಎಲ್ಲಿ ಹೋದವು? ಮಾತು ಮನಸ್ಸಿಗೆ ಹಿಡಿದ ಕನ್ನಡಿ! ಆದ್ದರಿಂದಲೇ ಅ ಇಟಡಿ ಜಿಠ jಛಜಛಿಛ ಚಿಢ ಜಿಠಿ’ಠ ಠಿಛಿಛಿಠಿಜ ಚ ಞಚ್ಞ ಚಿಢ ಜಜಿಠ ಠಿಚ್ಝk (ಹಲ್ಲುಗಳಿಂದ ಹಸುವನ್ನು, ಮಾತಿನಿಂದ ಮನುಷ್ಯನನ್ನು ಅಳಿ) ಎಂದು ಪ್ರಾಜ್ಞರು ಹೇಳುತ್ತಾರೆ.

ಸೈದ್ಧಾಂತಿಕ ಅಥವಾ ಯಾವುದೇ ರೀತಿಯ ಭಿನ್ನಾಭಿಪ್ರಾಯ ಎಂದೆಂದಿಗೂ ಸ್ವಾಗತಾರ್ಹ. ಸೈದ್ಧಾಂತಿಕ ಗುಲಾಮಗಿರಿ ಬೇರೆಲ್ಲ ಗುಲಾಮಗಿರಿಗಳಿಗಿಂತ ನರಕಸದೃಶ. ಪ್ರಶ್ನಿಸು, ಪ್ರಶ್ನಿಸು ಎಂದು ಅನಾದಿಕಾಲದಿಂದಲೂ ಉಪನಿಷತ್, ಗೀತೆ, ಶ್ರೀರಾಮಕೃಷ್ಣ, ವಿವೇಕಾನಂದರೇ ಮೊದಲಾದ ಪ್ರಾಜ್ಞರು ಹತ್ತು ಹಲವೆಡೆ ಹೇಳಿದ್ದಾರೆ.

ಶಂಕರಾಚಾರ್ಯರು ಬೇರೆ ಬೇರೆ ತತ್ವಶಾಸ್ತ್ರಗಳ ಅಥವಾ ವಿಭಿನ್ನ ತತ್ವಜ್ಞರ ಅಪೂರ್ಣತೆಯನ್ನು ಎತ್ತಿ ತೋರಿಸಿ ವೇದಾಂತದ ಹಿರಿಮೆಯನ್ನು ಎತ್ತಿ ಹಿಡಿದಿರುವ ಪರಿಯನ್ನು ನೋಡಿದರೆ ಯಾವ ವಿದ್ಯಾವಂತನಿಗೂ ಸೋಜಿಗವಾಗದಿರದು. ಆದರೆ ಅವರು ವಿರೋಧಿಗಳ ನಿಲುವನ್ನು ಖಂಡಿಸುವಾಗ ಈ ಅಪೂರ್ಣತೆಗಳು ಅವರು ಮಂಡಿಸಿರುವ ಸಿದ್ಧಾಂತದಲ್ಲಿರುವುದರಿಂದ, ಅವು ಅರ್ತಾಕವಾಗಿರುವುದರಿಂದ ಈ ಚಿಂತನೆಯನ್ನು ಅನಾದರಣೆ ಮಾಡತಕ್ಕದ್ದು ಎಂದಷ್ಟೇ ಹೇಳುತ್ತಾರೆ. ಅದರ ಕರ್ತೃವನ್ನು ಕುರಿತು ಒಂದೇ ಒಂದು ನಿಂದನೆಯ ಪದವಿಲ್ಲ. ನೇರವಾಗಿ ಮಂಡನಮಿಶ್ರನ ಜೊತೆ ವಾದಮಾಡುವಾಗ ಅವರು ಮತ್ತೆ ಮತ್ತೆ ಬಳಸಿರುವುದು ಶಿರೋಮಣಿ ಇತ್ಯಾದಿ ಪ್ರಶಂಸಾತ್ಮಕ ಪದಗಳನ್ನೇ! ಇದು ಈ ದೇಶ, ಈ ಮಣ್ಣು, ಸನಾತನ ಸಂಸ್ಕೃತಿ ನಮಗೆ ನೀಡಿರುವ ಪಾಠ, ಸಂಸ್ಕಾರ.

ಸನಾತನ ಸಂಸ್ಕೃತಿ ತೈತ್ತರೀಯ ಉಪನಿಷತ್ತಿನ ಕಾಲದಷ್ಟು ಹಿಂದೆಯೇ ‘ಜಿಹ್ವಾಗ್ರೇ ಮಧುಮತ್ತಮಾ’ ಅರ್ಥಾತ್ ‘ನಾಲಿಗೆಯ ತುದಿಯಲ್ಲಿ ಜೇನನ್ನೇ ಸವರಿಕೋ’ ಎಂದು ಹೇಳುತ್ತದೆ. ‘ಸತ್ಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಂ ಅಪ್ರಿಯಂ’ ಇವನ್ನೆಲ್ಲ ಜಗತ್ತಿಗೆ ಹೇಳಿಕೊಟ್ಟಿದ್ದು ಈ ನಾಡೇ! ‘ಸತ್ಯವನ್ನೇ ಹೇಳು! ಪ್ರಿಯವಾದುದನ್ನೇ ಹೇಳು! ಸತ್ಯವನ್ನು ಕೂಡ ಅಪ್ರಿಯವಾದ ರೀತಿಯಲ್ಲಿ ಹೇಳಬೇಡ’ ಎನ್ನುತ್ತದೆ ವೇದ. ‘ಇನ್ನೊಬ್ಬರ ಮನಸ್ಸನ್ನು ನೋಯಿಸುವ ಯಾವ ಮಾತು ನಮ್ಮ ನಾಲಿಗೆಯಿಂದ ಬರಬಾರದು. ಯಾವ ಕೃತಿಯೂ ನಮ್ಮಿಂದಾಗಬಾರದು’ ಎಂದು ಶ್ರೀಮಾತೆ ಶ್ರೀ ಶಾರದಾದೇವಿಯವರು ಅದೆಷ್ಟು ವಿವಿಧ ರೀತಿಯಲ್ಲಿ ಹೇಳಿದರೋ!

ಕೆಲವರ ಮಾತುಗಳನ್ನು ಕೇಳುತ್ತಿದ್ದರೆ ಸಂಗೀತವೂ ನಾಚುವಂತಿರುತ್ತದೆ. ಪ್ರಾಣಿ ಪಕ್ಷಿಗಳೂ ತಲೆದೂಗುವಂತಿರುತ್ತದೆ ಮತ್ತು ಕೇಳುಗರ ಮನಸ್ಸಿಗೆ ನಾಟಬೇಕು ಎಂದರೆ ನಿಷ್ಠುರವಾಗಿ, ಕಟುವಾಗಿ, ಒರಟೊರಟಾಗಿಯೇ ಹೇಳಬೇಕೆಂದೇನೂ ಇಲ್ಲ. ಸ್ವಾಮಿ ವಿವೇಕಾನಂದರನ್ನು ಬಿಟ್ಟರೆ ಜಗತ್ತಿನ ಮತ್ತಾವ ಬೋಧಕರೇ ಆಗಲಿ ಅದ್ಭುತ ವಾಗ್ಮಿಗಳಾಗಿದ್ದರು ಎಂದು ಎಲ್ಲೂ ದಾಖಲೆಗಳೇನಿಲ್ಲ. ಆದರೆ ಅವರ ಮಾತುಗಳು ಸಾವಿರಾರು ವರ್ಷಗಳ ಕಾಲ ಅರ್ಧ ಪ್ರಪಂಚವೇ ತಲೆದೂಗಿ ವಿಧೇಯತೆಯಿಂದ ಪಾಲಿಸಿಕೊಂಡು ಬರುವಷ್ಟು ಬಲಯುತವಾಗಿರುತ್ತಿದ್ದವು. ಮಾತಿಗೆ ಶಕ್ತಿ ಬರುವುದು ಮಾತು-ಕೃತಿಗಳು ಒಂದಾದಾಗ ಮಾತ್ರ.

ಈ ಎಲ್ಲ ಸಾಂಸ್ಕೃತಿಕ ಕುರೂಪಗಳ ಮೂಲವನ್ನು ಹುಡುಕುತ್ತ ಹೋದರೆ ಮುಂದಿನ ದಿನಗಳಲ್ಲಿ ಇಂಥ ಅನರ್ಥಗಳು ಘಟಿಸಬಾರದೆಂದು ಗಂಭೀರವಾಗಿ ಯೋಚಿಸಿದ್ದೇ ಆದರೆ ಅದಕ್ಕೆ ಪರಿಹಾರವಿರುವುದು ಮನಸ್ಸಿಗೆ ತರಬೇತಿಯನ್ನು ಕೊಡುವುದರಲ್ಲಿ. ನಮ್ಮ ಚಿಂತನೆಯ ಲಹರಿ, ಅದರೆಡೆಗೆ ನಮ್ಮ ಪ್ರಜ್ಞಾಪೂರ್ವಕ ಗಮನ ಮತ್ತು ಅವಶ್ಯಕ ತಿದ್ದುಪಡಿಗಳ ಅಳವಡಿಕೆ, ಆತ್ಮಗೌರವದ ಮಹತ್ವ, ಗೌರವಯುತ ಬದುಕಿನಲ್ಲಿ ಮಾತಿನ ಸ್ಥಾನ ಇವುಗಳು ಆಳವಾಗಿ ನಮ್ಮಿಂದ ಅರಿಯಲ್ಪಡಬೇಕು. ಮನಸ್ಸೇ ಮಾತಿನ ಮೂಲಕ ವ್ಯಕ್ತವಾಗುತ್ತಿರುತ್ತದೆ. ಅದರ ಶುದ್ಧ ಮತ್ತು ಅಶುದ್ಧ ಆಯಾಮಗಳು ಕ್ರಿಯೆಯ ಮೂಲಕವೂ ಆಗಾಗ್ಗೆ ಹೊರಬರುತ್ತಿರುತ್ತದೆ. ಅವನಿಗೆ ಅಧಿಕಾರ, ಹಮ್ಮುಬಿಮ್ಮುಗಳು ಇದ್ದುಬಿಟ್ಟಿದ್ದಲ್ಲಿ ಮನಸ್ಸಿಗೆ ಕಡಿವಾಣವೇ ಇಲ್ಲವಾಗಿಬಿಡುತ್ತದೆ. ಶುದ್ಧಿ ಅಶುದ್ಧಿಗಳ ವಿವೇಚನೆ ಬಟ್ಟೆ ಬರೆ, ಕುಡಿಯುವ ನೀರು, ಉಣ್ಣುವ ತಟ್ಟೆ, ಇವುಗಳ ಬಗ್ಗೆ ಮಾತ್ರ ಇದ್ದರೆ ಸಾಲದು. ಅವೆಲ್ಲಕ್ಕಿಂತ ಮುಖ್ಯ ಬುದ್ಧಿಗೆ ಕೊಡುವ ವಿಚಾರಗಳ ಬಗೆಗಿನ ಶುದ್ಧತೆ. ‘ಆಹಾರ ಶುದ್ಧೌ ಸತ್ವ ಶುದ್ಧಿಃ ಸತ್ವ ಶುದ್ಧೌ ಧ್ರುವಾ ಸ್ಮ ೃಃ’ ಎಂದು ಅಂದೇ ಉಪನಿಷತ್ ಹೇಳಿದೆ. ತೆಗೆದುಕೊಳ್ಳುವ ಆಹಾರ ಒಳಗಿನ ವ್ಯಕ್ತಿತ್ವವನ್ನು ನಿರ್ವಿುಸುತ್ತ ಹೋಗುತ್ತದೆ. ಶುದ್ಧ ಆಹಾರ, ಸಮ್ಯಕ್ ಆಹಾರಗಳ ಬಗ್ಗೆ ಸೆಳೆತ, ಅಶುದ್ಧ ಆಹಾರದ ಬಗೆಗಿನ ತಿರಸ್ಕಾರಗಳನ್ನು ಬೆಳೆಸಿಕೊಳ್ಳುವ ಸವಾಲು ಕೂಡ ಇಲ್ಲಿ ಇದೆ. ಇಲ್ಲಿಯೇ ಬರುವುದು ನಮ್ಮ ಜೀವನದ ಆದರ್ಶಗಳ ಮಹತ್ವ. ಆದರ್ಶವಿಲ್ಲದವನು ತಪ್ಪುಗಳ ಸರಮಾಲೆಯನ್ನೇ ಹೆಣೆಯುತ್ತ ಹೋಗುವುದು ಸರ್ವವಿದಿತ. ‘ಆದರ್ಶ ಇರುವವರು ಒಂದು ತಪ್ಪು ಮಾಡಿದರೆ ಆದರ್ಶವಿಲ್ಲದವನು ಐವತ್ತು ಸಾವಿರ ತಪ್ಪುಗಳನ್ನು ಎಸೆಗುತ್ತಾನೆ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು.

ಒಟ್ಟಿನಲ್ಲಿ ಸಾರ್ವಜನಿಕ ವಲಯಗಳಲ್ಲಿ ನಮ್ಮ ವ್ಯಕ್ತಿತ್ವ ಘನತೆ, ಗಾಂಭೀರ್ಯ, ಗೌರವಗಳಿಂದ ಶೋಭಿಸಬೇಕಾದರೆ ಅದರ ಹಿನ್ನೆಲೆಯಲ್ಲಿ ಒಂದಷ್ಟು ಸಂಸ್ಕಾರ ಇರಬೇಕು, ಜವಾಬ್ದಾರಿತನ, ಮಾನವೀಯ ಪ್ರಜ್ಞೆ ಇವುಗಳ ಪಾತ್ರ ದೊಡ್ಡದು. ಇದನ್ನೆಲ್ಲ ಬಾಲ್ಯಾವಸ್ಥೆಯಲ್ಲಿ ಮನೆ ಮತ್ತು ಶಾಲೆಗಳಲ್ಲಿ ಮಕ್ಕಳು ಪಡೆಯಬೇಕು. ಮನೆಯ ಹಿರಿಯರು ಮತ್ತು ಶಿಕ್ಷಕರು ಇದನ್ನು ಕಲಿಸಬೇಕು. ಇವೆಲ್ಲ ಸುಸಂಸ್ಕೃತ ಮತ್ತು ಪ್ರಬುದ್ಧ ಸಮಾಜ ನಿರ್ವಣಕ್ಕೆ ಅತ್ಯವಶ್ಯ. ಸಂಬಂಧಿಸಿದ ಅಧಿಕಾರಿಗಳಿಗೆ ಇವುಗಳ ಬಗ್ಗೆ ಪ್ರಜ್ಞೆ ಇರಬೇಕು. ಆದರೆ ಪ್ರಜ್ಞಾವಂತಿಕೆಗೆ ಈಗಿರುವಷ್ಟು ಬರಗಾಲ ಎಂದೂ ಇರಲಿಲ್ಲ! ಕಲಿಯುವ ಮನಸ್ಸುಗಳೇ ವಿನಯ, ಸೌಜನ್ಯಗಳಿಲ್ಲದಿದ್ದಲ್ಲಿ ಕಲಿಕೆ ಎಂದೆಂದಿಗೂ ದೂರ. ಈ ವಿನಯವನ್ನು ಕಲಿಸಬೇಕೆಂದೇ ‘ಕೈಮುಗಿದು ಒಳಗೆ ಬಾ’ ಎಂದು ಕುವೆಂಪು ಹೇಳಿದ್ದು. ಇದು ಅರ್ಥವಾಗಬೇಕಾದರೂ ಬೇಕಾದ್ದು ಪ್ರಜ್ಞೆಯೇ!

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)