ಅಂಕಣ

ಅಭಿವೃದ್ಧಿಗೆ ಹೊಳಪು ನವೀಕರಿಸಬಹುದಾದ ಇಂಧನ

ಇಂಗಾಲ ಹೊರಸೂಸುವಿಕೆಯನ್ನು 2070ರ ವೇಳೆಗೆ ನಿವ್ವಳ-ಶೂನ್ಯಕ್ಕೆ ತರುವ ಭಾರತದ ಮಹತ್ವಾಕಾಂಕ್ಷಿ ಗುರಿಯು ನವೀಕರಿಸಬಹುದಾದ ಇಂಧನ ಮೂಲಗಳ ವಿಸ್ತರಣೆ ಮತ್ತು ಏಕೀಕರಣದ ಮೇಲೆ ಕೇಂದ್ರೀಕೃತವಾಗಿದೆ. ಇದು ಸುಸ್ಥಿರ ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುವ ದೇಶದ ಬದ್ಧತೆಯ ಪ್ರಮುಖ ಅಂಶವಾಗಿದೆ. ವೇಗವಾಗಿ ವಿಸ್ತರಿಸುತ್ತಿರುವ ಜನಸಂಖ್ಯೆಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತವು, ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಕಾಲಘಟ್ಟದಲ್ಲೇ ಹೆಚ್ಚುತ್ತಿರುವ ಇಂಧನ ಬಳಕೆಯನ್ನು ಎದುರಿಸುವ ಸಂಯೋಜಿತ ಸವಾಲನ್ನು ಸಹ ಎದುರಿಸುತ್ತಿದೆ. ನವೀಕರಿಸಬಹುದಾದ ಇಂಧನವು ಈ ಅಂಶಗಳನ್ನು ಸಮತೋಲನಗೊಳಿಸಲು ಕಾರ್ಯಸಾಧು ಪರಿಹಾರವಾಗಿದೆ. ಭಾರತವು ಇಡೀ ವಿಶ್ವದಲ್ಲೇ ಅತಿ ಕಡಿಮೆ ಪ್ರಮಾಣದ ಇಂಗಾಲ ಹೊರಸೂಸುವಿಕೆ ಹೊಂದಿದ್ದರೂ, ದೇಶವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸದೃಢ ನಾಯಕತ್ವದಲ್ಲಿ ಸ್ವಚ್ಛ ಇಂಧನ ಉತ್ಪಾದನೆ ಕಾರಣಕ್ಕಾಗಿ ಮಾತ್ರ ಚಾಂಪಿಯನ್ ಆಗುತ್ತಿಲ್ಲ, ಈ ನಿಟ್ಟಿನಲ್ಲಿ ಅದು ಇತರ ರಾಷ್ಟ್ರಗಳಿಗೂ ಪ್ರೇರಣೆ ನೀಡುತ್ತಿದೆ.

ಹವಾಮಾನ ಬದಲಾವಣೆಯನ್ನು ನಿಯಂತ್ರಣಕ್ಕೆ ತರುವ ಭಾರತದ ಸಂಕಲ್ಪವನ್ನು ಗ್ಲಾಸ್ಗೋದಲ್ಲಿ ಜರುಗಿದ ಸಿಒಪಿ26 ಶೃಂಗಸಭೆಯ ಘೊಷಣೆಯಲ್ಲಿ ಒತ್ತಿಹೇಳಲಾಯಿತು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪಂಚಾಮೃತ’ ಉಪಕ್ರಮದ ಅಡಿ, ಪ್ರಮುಖ ಪಂಚ ಗುರಿಗಳನ್ನು ನೀಡಿದರು. ಅದರಲ್ಲಿ ನವೀಕರಿಸಬಹುದಾದ ಇಂಧನವು ನಿರ್ಣಾಯಕ ಅಂಶವಾಗಿದೆ. ದೇಶವು 2030ರ ವೇಳೆಗೆ 500 ಗಿಗಾವ್ಯಾಟ್ ಉರವಲುಯೇತರ(ನಾನ್-ಫಾಸಿಲ್) ಇಂಧನ ಉತ್ಪಾದನೆ ಸಾಮರ್ಥ್ಯ ಸಾಧಿಸಲು ವಾಗ್ದಾನ ಮಾಡಿತು.

ನವೀಕರಿಸಬಹುದಾದ ಇಂಧನ ಕ್ಷೇತ್ರದ ಮೇಲೆ ಪ್ರಧಾನ ಮಂತ್ರಿ ಅವರ ವಿಶೇಷ ಗಮನವು ಭಾರತವು ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಜಾಗತಿಕವಾಗಿ 4ನೇ ಸ್ಥಾನಕ್ಕೆ ಏರಲು ಸಹಾಯ ಮಾಡಿದೆ. ಪವನಶಕ್ತಿ ಸ್ಥಾಪಿತ ಸಾಮರ್ಥ್ಯದಲ್ಲಿ 4ನೇ ಸ್ಥಾನ ಮತ್ತು ಸೌರಶಕ್ತಿ ಉತ್ಪಾದನೆ ಸಾಮರ್ಥ್ಯದಲ್ಲಿ ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ. ಸೌರಶಕ್ತಿ ಉತ್ಪಾದನೆ ಸಾಮರ್ಥ್ಯದಲ್ಲಿ ಭಾರತವು 2014ರವರೆಗೆ ಕೇವಲ 12.5 ಗಿಗಾವ್ಯಾಟ್ ಉತ್ಪಾದನೆ ನಡೆಸಿತ್ತು. ಆದರೆ, ಮೋದಿ ಸರ್ಕಾರದ ಅಡಿ, ನಾವು 2024ರ ಮೇ ತಿಂಗಳವರೆಗೆ ಅನ್ವಯವಾಗುವಂತೆ, 84 ಗಿಗಾವ್ಯಾಟ್​ಗಿಂತ ಹೆಚ್ಚಿನ ಉತ್ಪಾದನೆ ಸಾಧಿಸಿದ್ದೇವೆ. ಕೇವಲ 10 ವರ್ಷಗಳಲ್ಲಿ ಉತ್ಪಾದನೆ 30 ಪಟ್ಟು ಹೆಚ್ಚಾಗಿದೆ. ಪವನಶಕ್ತಿಯ ಸ್ಥಾಪಿತ ಸಾಮರ್ಥ್ಯದಲ್ಲಿ ಸಹ 10 ವರ್ಷಗಳಲ್ಲಿ 21 ಗಿಗಾವ್ಯಾಟ್​ನಿಂದ 46 ಗಿಗಾವ್ಯಾಟ್​ಗೆ ಅಂದರೆ, 2.2 ಪಟ್ಟು ಭಾರಿ ಜಿಗಿತ ಕಂಡಿದ್ದೇವೆ. ದೇಶದಲ್ಲಿ ನವೀಕರಿಸಬಹುದಾದ ಇಂಧನದ 200 ಗಿಗಾವ್ಯಾಟ್ ಸ್ಥಾಪಿತ ಸಾಮರ್ಥ್ಯದ ಸುಮಾರು 55% ಸೌರಶಕ್ತಿಯಿಂದಲೇ ಬರುತ್ತದೆ. ಸುಮಾರು 30% ಮತ್ತೊಂದು ಗಣನೀಯ ಭಾಗವು ಪವನಶಕ್ತಿಯಿಂದ ಬರುತ್ತದೆ.

ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಪಿಎಂ-ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ, ಪಿಎಂ-ಕುಸುಮ್ ಯೋಜನೆ ಮತ್ತು ಕಡಲಾಚೆಯ ಪವನಶಕ್ತಿ ಯೋಜನೆಗಳು ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತವು ಹಲವಾರು ಪ್ರಮುಖ ಯೋಜನೆಗಳನ್ನು ಮುನ್ನಡೆಸುತ್ತಿದೆ. ವಾಸ್ತವವಾಗಿ, ದೇಶದಲ್ಲಿ ಇವಿ (ವಿದ್ಯುಚ್ಛಾಲಿತ ವಾಹನಗಳು) ಮೂಲಸೌಕರ್ಯ ಅಳವಡಿಸಿಕೊಳ್ಳುವ ವಿಷಯಕ್ಕೆ ಬಂದಾಗ, ಉರವಲು ಇಂಧನ ಮೂಲಗಳನ್ನು ಬಳಸದೆ, ಭವಿಷ್ಯದಲ್ಲಿ ವಿದ್ಯುಚ್ಛಾಲಿತ ವಾಹನಗಳನ್ನು ಚಾರ್ಜ್ ಮಾಡಲು ನವೀಕರಿಸಬಹುದಾದ ಮೂಲಗಳನ್ನು ಮಾತ್ರ ಬಳಸುವುದಕ್ಕೆ ದಾರಿ ಮಾಡಿಕೊಡಲು ಪ್ರಧಾನಿ ಉತ್ಸುಕರಾಗಿದ್ದಾರೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಪರಿವರ್ತನಾಶೀಲ ಪ್ರಯಾಣವು ನಮ್ಮನ್ನು ಮುಂಚೂಣಿಯಲ್ಲಿ ಇರಿಸಿದೆ.

ಇದು ಕಳೆದ 10 ವರ್ಷಗಳಲ್ಲಿ ನಮಗೆ ಜಾಗತಿಕ ಮನ್ನಣೆ ನೀಡಿದೆ. ಇದರ ಪರಿಣಾಮವನ್ನು ನಾವೀಗ ಅನುಭವಿಸುತ್ತಿದ್ದೇವೆ. ಬ್ರಾ್ಯಂಡ್ ಇಂಡಿಯಾವು ಸರಿಯಾದ ಶಬ್ದಗಳನ್ನೇ ಮಾಡುತ್ತಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ್ಕಐಘ್ಖಉಖಖ024 ಸಮ್ಮೇಳನ ಆಯೋಜಿಸಲು ಇದು ಕಾರಣವಾಗಿದೆ. 2024ರ ಸೆಪ್ಟೆಂಬರ್ 16ರಿಂದ 18ರವರೆಗೆ ಗುಜರಾತ್​ನ ಗಾಂಧಿನಗರದಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಈ ವಲಯದ ಉತ್ತಮ ಅಭ್ಯಾಸಗಳ ಕಲಿಕೆಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು 2030ರ ವೇಳೆಗೆ ನಾವು 500 ಗಿಗಾವ್ಯಾಟ್ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸಾಧಿಸುವತ್ತ ಸಾಗುತ್ತಿರುವಾಗ ಹೊಸ ಮೈತ್ರಿಗಳನ್ನು ರೂಪಿಸುವ ಗುರಿಯೊಂದಿಗೆ ಜರ್ಮನಿ, ಡೆನ್ಮಾರ್ಕ್, ಆಸ್ಟ್ರೇಲಿಯಾ, ನಾರ್ವೆ ಮತ್ತು ಯುಎಇಯಿಂದ ಪ್ರತಿನಿಧಿಗಳು ಸಮ್ಮೇಳನಗಳು ಭಾಗವಹಿಸುವರು.

ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯ ಸರ್ಕಾರಗಳು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಹೂಡಿಕೆದಾರರು ಮತ್ತು ಖಾಸಗಿ ಪಾಲುದಾರರು ತಮ್ಮ ಬದ್ಧತೆಗಳನ್ನು ಶಪಥ್-ಪಾತ್ರ ರೂಪದಲ್ಲಿ ನವೀಕರಿಸಬಹುದಾದ ಇಂಧನ ವಲಯಕ್ಕೆ ತಮ್ಮ ಯೋಜನೆಗಳು ಮತ್ತು ಗುರಿಗಳನ್ನು ನಿರ್ದಿಷ್ಟಪಡಿಸುತ್ತಾರೆ. ಭಾರತವು 2030ರ ವೇಳೆಗೆ ಉರವಲು ರಹಿತ ಇಂಧನ ಉತ್ಪಾದಿಸುವ ಇಂಧನ ಸಂಪನ್ಮೂಲಗಳಿಂದ ತನ್ನ ಸಂಚಿತ ವಿದ್ಯುತ್ ಶಕ್ತಿಯ ಸ್ಥಾಪಿತ ಸಾಮರ್ಥ್ಯವನ್ನು 50% ಸಾಧಿಸಲು ಬಯಸುತ್ತದೆ. ಸರ್ಕಾರವು ಪ್ರತಿವರ್ಷ 50 ಗಿಗಾವ್ಯಾಟ್ ಸಾಮರ್ಥ್ಯದ ಇಂಧನ ಹರಾಜು ನಡೆಸಲು ಯೋಜಿಸಿದೆ.

ಭಾರತದ ನವೀಕರಿಸಬಹುದಾದ ಇಂಧನ ವಲಯದ ಪ್ರಯಾಣವು ಬಲವಾದ ನೀತಿ ಬೆಂಬಲ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಯಿಂದ ಬೆಂಬಲಿತವಾಗಿದೆ. ಭಾರತ ಮತ್ತು ಫ್ರಾನ್ಸ್​ನಿಂದ ಸಂಸ್ಥಾಪಿತವಾದ ಇಂಟರ್​ನ್ಯಾಷನಲ್ ಸೋಲಾರ್ ಅಲೈಯನ್ಸ್ (ಐಎಸ್​ಎ)ಯಂತಹ ಉಪಕ್ರಮಗಳು ವಿಶ್ವಾದ್ಯಂತ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸೌರಶಕ್ತಿ ಬಳಕೆ ಉತ್ತೇಜಿಸಲು ಪ್ರಯತ್ನಿಸುತ್ತವೆ. ಇದಲ್ಲದೆ, ವಿದೇಶಿ ಹಣಕಾಸು ಸಂಸ್ಥೆಗಳು ಮತ್ತು ಹವಾಮಾನ ನಿಧಿಗಳು ಭಾರತದ ನವೀಕರಿಸಬಹುದಾದ ಇಂಧನ ರೂಪಾಂತರಕ್ಕೆ ಪ್ರಮುಖ ಬೆಂಬಲ ನೀಡುತ್ತಿವೆ. ಅಮೆರಿಕ, ಜರ್ಮನಿ ಮತ್ತು ಜಪಾನ್​ನಂತಹ ದೇಶಗಳೊಂದಿನ ಸಹಭಾಗಿತ್ವವು ಭಾರತಕ್ಕೆ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಪ್ರವೇಶ ಪಡೆಯಲು ಅವಕಾಶ ಮಾಡಿಕೊಟ್ಟಿದೆ.

ನವೀಕರಿಸಬಹುದಾದ ಇಂಧನ ವಲಯವು ಅಂತಾರಾಷ್ಟ್ರೀಯ ಹೂಡಿಕೆ ಆಕರ್ಷಿಸುತ್ತಿದೆ. ಅಂದಾಜಿನ ಪ್ರಕಾರ, ಭಾರತವು 2030ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಮತ್ತು ಉರವಲು ರಹಿತ ಇಂಧನ ಉತ್ಪಾದನೆ ಗುರಿ ಸಾಧಿಸಲು ಸರಿಸುಮಾರು 30 ಲಕ್ಷ ಕೋಟಿ ರೂ. ಮೌಲ್ಯದ ಹೂಡಿಕೆಯ ಅಗತ್ಯವಿದೆ. ನವೀಕರಿಸಬಹುದಾದ ಇಂಧನ ಆಧಾರಿತ ಆರ್ಥಿಕತೆಗೆ ಪರಿವರ್ತನೆಯು ಭಾರತಕ್ಕೆ ಗಮನಾರ್ಹ ಸಾಮಾಜಿಕ ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ. ಆಮದು ಮಾಡಿಕೊಳ್ಳುವ ಉರವಲು (ಕಲ್ಲಿದ್ದಲು, ಗ್ರಾಫೈಟ್ ಇತ್ಯಾದಿ) ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಮೂಲಕ ದೇಶವು ತನ್ನ ಇಂಧನ ಸುರಕ್ಷತೆ ಸುಧಾರಿಸಬಹುದು ಮತ್ತು ಕಡಿಮೆ ಇಂಧನ ವೆಚ್ಚಗಳನ್ನು ಮಾಡಬಹುದು. ಇದಲ್ಲದೆ, ನವೀಕರಿಸಬಹುದಾದ ಇಂಧನ ಯೋಜನೆಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತವೆ, ಸ್ಥಳೀಯ ಆರ್ಥಿಕ ಬೆಳವಣಿಗೆ ಉತ್ತೇಜಿಸುತ್ತವೆ.

ನವೀಕರಿಸಬಹುದಾದ ಇಂಧನವು ಒಂದು ಸಾಮೂಹಿಕ ಆಂದೋಲನವಾಗಬೇಕೆಂದು ನಾವು ಬಯಸುತ್ತೇವೆ. ಅಲ್ಲಿ ಸಾಮಾನ್ಯ ನಾಗರಿಕರು ಸಹ ಬ್ರಾ್ಯಂಡ್ ಅಂಬಾಸಿಡರ್ ಆಗಿರುತ್ತಾರೆ. ಏಕೆಂದರೆ ಇದು ಭವಿಷ್ಯದ ಪೀಳಿಗೆಯ ಸುರಕ್ಷತೆ ಒಳಗೊಂಡಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದ ಎಲ್ಲ ಪಾಲುದಾರರು ಮತ್ತು ಹೂಡಿಕೆದಾರರು, ರಾಜ್ಯ ಸರ್ಕಾರಗಳು ಮತ್ತು ಅಂತಾರಾಷ್ಟ್ರೀಯ ಪಾಲುದಾರರು ಈ ಪ್ರಮುಖ RE-INVEST-2024 ಶೃಂಗಸಭೆಯಲ್ಲಿ ಭಾಗವಹಿಸುವಂತೆ ನಾನು ಒತ್ತಾಯಿಸುತ್ತೇನೆ. ಇಲ್ಲಿ ಮುಖ್ಯಮಂತ್ರಿಗಳ ಸಮಗ್ರ ಸಭೆ, ಸಿಇಒ ದುಂಡುಮೇಜಿನ ಸಭೆ ಮತ್ತು ಹಲವಾರು ರಾಜ್ಯಗಳು, ದೇಶಗಳು ಮತ್ತು ತಾಂತ್ರಿಕ ಸೇರಿದಂತೆ 44 ಅಧಿವೇಶನಗಳು ಜರುಗಲಿವೆ. ಕಲಾಪಗಳು, ಸಂವಾದಗಳು, ಆರ್ಷಕ ವಿಚಾರ ವಿನಿಮಯಗಳು ಇಲ್ಲಿ ನಡೆಯಲಿವೆ.

| ಲೇಖಕರು, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವರು)