| ಡಾ.ರಕ್ಷಾ ಯು. ರಾವ್
ಸಾಮಾನ್ಯಕ್ಕಿಂತ ಕಡಿಮೆ ಸಂಖ್ಯೆಯ ಕೆಂಪು ರಕ್ತಕಣಗಳು (ಆರ್ಬಿಸಿಎಸ್) ಅಥವಾ ಹಿಮೋಗ್ಲೋಬಿನ್ ಪ್ರಮಾಣ ಹೊಂದಿರುವ ಸ್ಥಿತಿಯನ್ನು ರಕ್ತಹೀನತೆ ಎನ್ನಬಹುದು. ರಕ್ತಹೀನತೆಯಿಂದ ಬಳಲುವವರು ದಣಿವು, ತಲೆತಿರುಗುವಿಕೆ, ಕಿರಿಕಿರಿ, ಉಸಿರಾಟದ ತೊಂದರೆ ಅನುಭವಿಸುತ್ತಾರೆ. ಸಾಕಷ್ಟು ಕಬ್ಬಿಣ, ಪೋಲಿಕ್ ಆಮ್ಲ ಅಥವಾ ವಿಟಮಿನ್ ಬಿ12 ಹೊಂದಿರದ ಆಹಾರವು ರಕ್ತಹೀನತೆಗೆ ಸಾಮಾನ್ಯ ಕಾರಣಗಳಾಗಿವೆ. ರಕ್ತಹೀನತೆಗೆ ಕಾರಣವಾಗುವ ಕೆಲ ಇತರ ಪರಿಸ್ಥಿತಿಗಳೆಂದರೆ ಗರ್ಭಾವಸ್ಥೆ, ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವ, ರಕ್ತದಲ್ಲಿ ದೋಷ ಅಥವಾ ಕ್ಯಾನ್ಸರ್, ಆನುವಂಶಿಕ ಅಸ್ವಸ್ಥತೆ ಹಾಗೂ ಸಾಂಕ್ರಾಮಿಕ ರೋಗಗಳು.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್ಎಚ್ಎಫ್ಎಸ್) ಹಂತ ಒಂದರಲ್ಲಿ, 22 ರಾಜ್ಯಗಳ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. 1ರಿಂದ 5 ವರ್ಷ ವಯಸ್ಸಿನ ಮಕ್ಕಳು ಮತ್ತು 15ರಿಂದ 49 ವಯಸ್ಸಿನ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಈ ಬಹುಪಾಲು ಪ್ರದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಹಾಗೂ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಈ ಅಂಕಿ-ಅಂಶಗಳು ನಿಜವಾಗಿಯೂ ದಿಗ್ಭŠಮೆಗೊಳಿಸು ವಂತಿದೆ. ಸಮೀಕ್ಷೆ ಪ್ರಕಾರ ಶೇ.52 ಭಾರತೀಯ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ತೋರಿಸಿದರೂ, ಇತರ ಅನೌಪಚಾರಿಕ ಅಂದಾಜುಗಳ ಪ್ರಕಾರ ಶೇ.90 ಎಂದೇ ಹೇಳಬಹುದು. ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಶೇ.60ಕ್ಕಿಂತ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆದರೆ ಕೇರಳದಲ್ಲಿ ರಕ್ತಹೀನತೆ ಮಟ್ಟ ದೇಶದಲ್ಲೇ ಅತ್ಯಂತ ಕಡಿಮೆ. ಅಂದರೆ ಶೇ.22.7ರಷ್ಟಿದೆ. ದೇಶಾದ್ಯಂತ ಸುಮಾರು ಶೇ.75 ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಭಾರತೀಯ ಮಕ್ಕಳಲ್ಲಿ ಆರೋಗ್ಯ ಸ್ಥಿತಿ ತಾಯಂದಿರಿಗಿಂತ ಇನ್ನೂ ಹೆಚ್ಚು. ಸುಮಾರು ಮುಕ್ಕಾಲು ಪಾಲು ಮಕ್ಕಳು ರಕ್ತಹೀನತೆಯಿಂದ ಬಳಲು ತ್ತಿದ್ದಾರೆ. 6-35 ತಿಂಗಳ ವಯಸ್ಸಿನ ಶೇ. 75 ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಅತ್ಯಂತ ದುರ್ಬಲ ಗುಂಪು 1-2 ವರ್ಷದವರು. ಪ್ರಸ್ತುತ ನಮ್ಮ ದೇಶದಲ್ಲಿನ ಒಂದು ಸಾವಿರ ಮಕ್ಕಳಲ್ಲಿ 29 ಮಕ್ಕಳು 1 ವರ್ಷದೊಳಗೇ ಸಾವಿಗೀಡಾಗುತ್ತಾರೆ. ಇದರ ಹಿಂದಿನ ಕಾರಣ ತಾಯಿಯಲ್ಲಿನ ರಕ್ತಹೀನತೆ ಕ್ರಮೇಣವಾಗಿ ಮಗುವಿನ ಮೇಲೂ ಪರಿಣಾಮ ಬೀರುವುದು.
ಗರ್ಭಧಾರಣೆ ಹೊರತುಪಡಿಸಿದರೆ ಅಧಿಕ ರಕ್ತಸ್ರಾವದ ಮುಟ್ಟು ಹಾಗೂ ಪ್ರತಿ ತಿಂಗಳ ಋತುಚಕ್ರದಲ್ಲಿ ಕಬ್ಬಿಣದ ನಷ್ಟ ಮಹಿಳೆಯರಲ್ಲಿ ರಕ್ತಹೀನತೆಗೆ ಕಾರಣವಾಗುತ್ತದೆ. ಮುಟ್ಟಿನ ಸ್ರಾವ ಅಧಿಕವಾದಾಗ ಈಗಾಗಲೆ ರಕ್ತಹೀನತೆಯಲ್ಲಿರುವ ಮಹಿಳೆಯ ಹಿಮೋಗ್ಲೋಬಿನ್ ನಾಲ್ಕು ಅಥವಾ ಆರು ಗ್ರಾಮ್ೆ ಇಳಿದು ದಿನನಿತ್ಯದ ಚಟುವಟಿಕೆಗೆ ಆಯಾಸ ಉಂಟು ಮಾಡಿ ಜೀವನೋಲ್ಲಾಸ ಕಡಿಮೆಯಾಗುತ್ತದೆ. ಪೌಷ್ಟಿಕಾಂಶಗಳ ಕೊರತೆ, ಹದಿಹರೆಯದ ಹೆಣ್ಣು ಮಕ್ಕಳು ಸೊಪು್ಪ, ತರಕಾರಿ ಸೇವಿಸದಿರುವುದು, ಮನೆಗಳಲ್ಲಿ ಅಕ್ಕಿ, ಗೋಧಿ ಆಹಾರ ಅವಲಂಬನೆ, ಕಡಿಮೆ ಪೌಷ್ಟಿಕಾಂಶವಿರುವ ಆಹಾರ ಹಾಗೂ ಸಂಸ್ಕರಿಸಿದ ಆಹಾರಗಳ ಪ್ರಾಬಲ್ಯ ಇವೆಲ್ಲವೂ ಭಾರತದಲ್ಲಿ ರಕ್ತಹೀನತೆಯ ಹರಡುವಿಕೆಗೆ ಕಾರಣವಾಗಿವೆ.
ಗರ್ಭಿಣಿಯರಲ್ಲಿ ರಕ್ತ ಹೀನತೆಯಿಂದ ಗರ್ಭಾವಸ್ಥೆ ಮತ್ತು ಹೆರಿಗೆ ಸಮಯದಲ್ಲಿ ತೊಂದರೆ ಉಂಟಾಗುವ ಸಂಭವ ಜಾಸ್ತಿ. ಗರ್ಭಪಾತ, ಅಕಾಲಿಕ ಜನನ, ಹೆರಿಗೆ ಸಮಯ ದಲ್ಲಿ ಅಧಿಕ ರಕ್ತಸ್ರಾವ ಮತ್ತು ಕಡಿಮೆ ತೂಕದ ಶಿಶುಗಳಂತಹ ಪರಿಸ್ಥಿತಿಗಳು ಗರ್ಭಾವಸ್ಥೆಯಲ್ಲಿ ರಕ್ತಹೀನತೆಗೆ ಸಂಬಂಧಿಸಿವೆ. ರಕ್ತಹೀನತೆಯಿಂದ ರೋಗ ನಿರೋಧಕ ಶಕ್ತಿಯೂ ಕುಗ್ಗಿ, ಮಹಿಳೆಯ ರಲ್ಲಿ ವಿಶೇಷವಾಗಿ ಹೆರಿಗೆಯ ನಂತರ ರೋಗ ಗಳಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ರಕ್ತಹೀನ ತಾಯಂದಿರು ರಕ್ತಹೀನ ಮಕ್ಕಳಿಗೆ ಜನ್ಮನೀಡುತ್ತಾರೆಂದೂ ತಿಳಿದು ಬಂದಿದೆ.
ಗರ್ಭಾವಸ್ಥೆಯಲ್ಲಿ ರಕ್ತಹೀನತೆ ತಾಯಿ ಮತ್ತು ಮಗುವಿನ ಸಾವು ಅಥವಾ ರೋಗದ ಅಪಾಯ ಹೆಚ್ಚಿಸುತ್ತದೆ. ಭಾರತದಲ್ಲಿ ರಕ್ತಹೀನತೆ ತಾಯಿಯ ಮರಣಕ್ಕೆ (ಎಂಎಂಆರ್) ಅತ್ಯಂತ ಮಹತ್ವದ ಕಾರಣವಾಗಿದೆ. ಎಂಎಂಆರ್ ಎಂದರೆ ಗರ್ಭಧಾರಣೆ ಹಾಗೂ ಹೆರಿಗೆ ಸಂಬಂಧಿತ ಕಾರಣಗಳಿಂದ ಸಾವು. ಪ್ರತಿವರ್ಷ ಭಾರತದಲ್ಲಿ 1 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಕಾರಣಗಳಿಂಂದ ಮೃತಪಡುತ್ತಿದ್ದಾರೆ.