ಬೀದರ್: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಕೋಡಂಬಲ್ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ರಾಮಾಯಣದ ಸೀತೆ ಪಾತ್ರಕ್ಕೆ ಆಯ್ಕೆಯಾದ ‘ಕಚ್ಚಾ ಬಾದಾಮ್’ ಬೆಡಗಿ! ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗುತ್ತಿರುವುದೇಕೆ?
ಆನಂದ್(31) ಮೃತ ದುರ್ದೈವಿ. ಸಹಾಯಕ ಕೃಷಿ ಅಧಿಕಾರಿಯಾಗಿದ್ದ ಅವರು ಕೋಡಂಬಲ್ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುವಾಗ ಹೃದಯಾಘಾತ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯಸಿರೆಳೆದಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ನಾಳೆ ಎರಡನೇ ಹಂತದ ಮತದಾನ ನಡೆಯಲಿದೆ. ವಿವಿಧ ರಾಜ್ಯಗಳ 174 ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಮತದಾನ ಪ್ರಾರಂಭವಾಗಲಿದೆ.