ಅಂಕಣ

ಕೋವಿಡ್ ನಿಯಂತ್ರಣಕ್ಕೆ ಬೇಕು ಸಕ್ರಿಯ ಗ್ರಾಮಪಡೆ: ಜನಮತ

ಕರೊನಾ ಅಟ್ಟಹಾಸದಲ್ಲಿ ನಗರಗಳು ನಲುಗಿವೆ. ಆಸ್ಪತ್ರೆಗಳು ನಗರ ಕೇಂದ್ರಿತವಾಗಿದ್ದು ಪ್ರಭಾವಿಗಳ ಕಾರಣದಿಂದಾಗಿ ಆರೋಗ್ಯ ಕ್ಷೇತ್ರ ದಂಧೆಯೆಂಬ ಅಸಹ್ಯ ಅನಾರೋಗ್ಯದಿಂದ ನಾರುತ್ತಿದೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾತಿಯಾಗಬೇಕಾದಲ್ಲಿ ಲಾಡ್ಜ್ ಬುಕಿಂಗ್ ಮಾದರಿಯಲ್ಲಿ ಹಾಸಿಗೆ ಕಾದಿರಿಸುವಂಥ (ಅ) ವ್ಯವಸ್ಥೆ. ನಗರಗಳಿಂದ ಹಳ್ಳಿಗಳೆಡೆ ಪಲಾಯನ ಮಾಡುತ್ತಿರುವವರಿಂದ ಕರೊನಾ ವಲಸೆಯೂ ಶುರುವಾಗಿದೆ. ಸೀಮಿತ ಸಮಯದ ಲಾಕ್​ಡೌನ್ ಸಡಿಲಿಕೆಯ ಸಂದರ್ಭ ಅಂಗಡಿಮುಂಗಟ್ಟುಗಳಲ್ಲಿ ಸೇರುವ ಜನಜಾತ್ರೆ ಸಾಂಕ್ರಾಮಿಕದ ಹಬ್ಬುವಿಕೆಗೆ ರಹದಾರಿ. ಆದ್ದರಿಂದ ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣ ಆಗದಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಕೋವಿಡ್ ಗ್ರಾಮಪಡೆಗಳ ಮೇಲಿದೆ.

  • ಸ್ವಯಂಪ್ರೇರಿತರಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್, ಶುಚಿತ್ವದ ಸಾರ್ವಜನಿಕ ಆಚರಣೆ ಕಡ್ಡಾಯವಾಗಬೇಕು.
  • ಲಸಿಕೆ ಪಡೆದುಕೊಳ್ಳದೆ ಹಳ್ಳಿ ಪ್ರವೇಶಿಸಿದವರನ್ನು ಕಡ್ಡಾಯ ಕ್ವಾರಂಟೈನ್​ಗೆ ಒಳಪಡಿಸಬೇಕು. ? ಆಯಾ ಊರಿನ ನೋಂದಾಯಿತ ವೈದ್ಯ/ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಶಿಫಾರಸು ಇದ್ದಲ್ಲಿ ಮಾತ್ರ ಆಸ್ಪತ್ರೆಗಳಲ್ಲಿ ದಾಖಲಾಗುವ ಅವಕಾಶ ನೀಡಿದಲ್ಲಿ ಆರೋಗ್ಯ ಕ್ಷೇತ್ರದ ಪಾವಿತ್ರ್ಯತೆ ಉಳಿದೀತು ? ಸೀಮಿತ ಜನಸಂಖ್ಯೆಯ ಗ್ರಾಮಗಳ ಪ್ರತಿಯೊಂದು ಮನೆಯ ಕಾಳಜಿ ಕಾಯಲು ಪ್ರತಿ ವಾರ್ಡಿನ ಸದಸ್ಯರ ತಂಡದಲ್ಲಿ ಸ್ಥಳೀಯ ಅಂಗನವಾಡಿ/ಆಶಾ ಕಾರ್ಯಕರ್ತೆಯರು, ಶಾಲಾ ಅಧ್ಯಾಪಕರು, ಯುವಕ/ಯುವತಿ ಮಂಡಲ, ಪಕ್ಷ/ಧಾರ್ವಿುಕ ಸಂಘಟನೆಗಳ ಸದಸ್ಯರು ಸ್ವಯಂಸೇವಕರಾಗಿ ಸಹಕರಿಸುವಂತೆ ಮನವೊಲಿಸುವುದು.
  • ಸರ್ಕಾರ ನೇಮಿಸಿದ ಗ್ರಾಮಪಡೆ ಇಂತಹ ಇನ್ನೂ ಹಲವು ವಿನೂತನ ಕ್ರಮಗಳನ್ನು ಅಳವಡಿಸಿಕೊಂಡು ಕೋವಿಡ್​ವುುಕ್ತ ಜಗತ್ತಿಗೆ ಮುನ್ನುಡಿ ಬರೆಯಲಿ.

| ಡಾ ರಾಮಚಂದ್ರ ಕೆ. ಕನ್ಯಾನ