

ಹೈದರಾಬಾದ್: ಟಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆ ವೈಜಯಂತಿ ಸಿನಿಮಾಸ್ ಸದ್ಯ ಭಾರೀ ಸುದ್ದಿಯಲ್ಲಿದೆ. ಬಿಗ್ ಬಜೆಟ್ನ ಸಿನಿಮಾ ಘೋಷಣೆ ಮಾಡಿಕೊಂಡು ಸ್ಟಾರ್ ಕಲಾವಿದರನ್ನೇ ಆಯ್ದುಕೊಂಡು ಸದ್ದು ಮಾಡುತ್ತಿದೆ. ಈಗಾಗಲೇ ಪ್ರಭಾಸ್ ಮತ್ತು ದೀಪಿಕಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ನಿನ್ನೆಯಷ್ಟೇ ಲೆಜಂಡರಿ ಸ್ಟಾರ್ ನಟ ಅಮಿತಾಬ್ ಎಂಟ್ರಿಕೊಟ್ಟಿದ್ದಾರೆ.
ಹೌದು, ಈ ವಿಚಾರವನ್ನು ಸ್ವತಃ ನಿರ್ಮಾಣ ಸಂಸ್ಥೆಯೇ ಘೋಷಿಸಿಕೊಂಡಿದ್ದು, ಪ್ರಮುಖ ಪಾತ್ರವೊಂದರಲ್ಲಿ ಅಮಿತಾಬ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿಕೊಂಡಿದೆ. ಈ ಸಿನಿಮಾ ಶೀರ್ಷಿಕೆ ಏನು, ಶೂಟಿಂಗ್ ಯಾವಾಗ ಎಂಬುದರ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಹಲವು ಸಿನಿಮಾಗಳಲ್ಲಿ ಪ್ರಭಾಸ್ ಮತ್ತು ದೀಪಿಕಾ ಬಿಜಿಯಾಗಿದ್ದು, 2021ರಲ್ಲಿಯೇ ಈ ಸಿನಿಮಾದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೀಗ ಚರ್ಚೆಗೆ ಕಾರಣವಾಗಿರುವ ವಿಚಾರ ಏನೆಂದರೆ, ಸಂಭಾವನೆ ವಿಷ್ಯಾ! ಹೌದು, ಅಮಿತಾಬ್ ಬಚ್ಚನ್ ಈ ಸಿನಿಮಾಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು? ಅದು ದೀಪಿಕಾಗಿಂತಲೂ ಅಧಿಕವಾ ಅಥವಾ ಕಡಿಮೆ ಇರಲಿದೆಯೇ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ದೀಪಿಕಾಗಿಂತಲೂ ಅಧಿಕ ಸಂಭಾವನೆಯನ್ನು ಅಮಿತಾಬ್ ಪಡೆದುಕೊಂಡಿದ್ದಾರಂತೆ.
ಈ ಮೊದಲೇ ಸುದ್ದಿ ಹರಿದಾಡಿದಂತೆ 12 ಕೋಟಿ ರೂ. ಸಂಭಾವನೆಯನ್ನು ದೀಪಿಕಾ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ 15 ರಿಂದ 20 ಕೋಟಿ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಅಚ್ಚರಿ ವಿಚಾರ ಏನೆಂದರೆ, ಈ ಚಿತ್ರಕ್ಕಾಗಿ ಪ್ರಭಾಸ್ 60 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರಂತೆ.
ವೈಜಯಂತಿ ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಲಿದ್ದು, ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಇದೂ ಒಂದಾಗಿದೆ. ಇದೇ ಸಂಸ್ಥೆ 50ನೇ ವಾರ್ಷಿಕೋತ್ಸವದ ಆಚರಣೆಯಲ್ಲಿದ್ದು, ಆ ಸಂಭ್ರಮಕ್ಕೆ ಈ ಸಿನಿಮಾ ಘೋಷಣೆ ಮಾಡಿದ್ದು, ದೀಪಿಕಾ ಬಳಿಕ ಅಮಿತಾಬ್ ಅವರನ್ನು ಕರೆತಂದಿದೆ. ಮಹಾನಟಿ ಸಿನಿಮಾ ನಿರ್ದೇಶನ ಮಾಡಿದ್ದ ನಿದೇಶಕ ನಾಗ್ ಅಶ್ವಿನ್ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. (ಏಜೆನ್ಸೀಸ್)