More

    ಪಾಕ್​ ಜತೆ ಮಾತಾಡಲ್ಲ, ಭಯೋತ್ಪಾದನೆಯನ್ನು ನಾವೇ ತೊಲಗಿಸುತ್ತೇವೆ: ಅಮಿತ್ ಷಾ

    ನವದೆಹಲಿ: ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ, ಜಮ್ಮು-ಕಾಶ್ಮೀರದಿಂದ ಭಯೋತ್ಪಾದನೆಯನ್ನು ತೊಲಗಿಸುವುದಾಗಿ ಹೇಳಿದ್ದಾರೆ. ಬಾರಾಮುಲ್ಲಾದಲ್ಲಿ ಇಂದು ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

    ಜಮ್ಮು-ಕಾಶ್ಮೀರದಲ್ಲಿ 1990ರಿಂದ ಇದುವರೆಗೆ 42 ಸಾವಿರ ಮಂದಿ ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಇನ್ನು ಭಯೋತ್ಪಾದನೆ ತೊಲಗಿಸುವ ಸಂಬಂಧ ಪಾಕಿಸ್ತಾನದ ಜೊತೆಗೆ ಮಾತುಕತೆ ಪ್ರಶ್ನೆ ಇಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಜಮ್ಮು-ಕಾಶ್ಮೀರದಿಂದ ಭಯೋತ್ಪಾದನೆಯನ್ನು ತೊಲಗಿಸಲಿದೆ ಎಂದು ಷಾ ಹೇಳಿದ್ದಾರೆ.

    70 ವರ್ಷಗಳ ಆಡಳಿತ ನಡೆಸಿದವರು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ ಎಂದು ಹೇಳುತ್ತಿದ್ದಾರೆ. ನಾವ್ಯಾಕೆ ಪಾಕ್ ಜತೆ ಮಾತನಾಡಬೇಕು? ನಾವು ಮಾತನಾಡುವುದಿಲ್ಲ. ನಾವು ಬಾರಾಮುಲ್ಲಾದ ಜನರ ಜತೆ ಮಾತನಾಡುತ್ತೇವೆ, ಕಾಶ್ಮೀರದ ಜನತೆಯ ಜತೆ ಮಾತಾಡುತ್ತೇವೆ ಎಂದಿರುವ ಷಾ, ಜಮ್ಮು-ಕಾಶ್ಮೀರದಿಂದ ಭಯೋತ್ಪಾದನೆ ತೊಲಗಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಜಮ್ಮು-ಕಾಶ್ಮೀರವನ್ನು ಶಾಂತಿಯತ ಸ್ಥಳ ಆಗಿಸುವುದಾಗಿಯೂ ಭರವಸೆ ನೀಡಿದ್ದಾರೆ.

    ‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

    ನೀವು ಈ ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರಿಕೆ..​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts