180 ಕೆ.ಜಿ. ತೂಕದ ವ್ಯಕ್ತಿ, ಧೋಖಾ ವ್ಯಕ್ತಿತ್ವ: ಖಾಕಿ ಧರಿಸಿ ಹಣ ವಸೂಲಿ ಮಾಡ್ತಿದ್ದ ನಕಲಿ ಇನ್​ಸ್ಪೆಕ್ಟರ್ ಅರೆಸ್ಟ್​

ನವದೆಹಲಿ: ನೂರೆಂಬತ್ತು ಕೆ.ಜಿ. ತೂಕದ 23 ವರ್ಷದ ಯುವಕನೊಬ್ಬ ಪೊಲೀಸ್ ಸಮವಸ್ತ್ರ ಧರಿಸಿ, ಇನ್​ಸ್ಪೆಕ್ಟರ್ ಎಂದು ಸುಳ್ಳು ಹೇಳಿ ಹಣ ವಸೂಲಿ ಮಾಡುತ್ತಿದ್ದು, ಕೊನೆಗೂ ಅಸಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೋಸ ಮಾಡಲು ಹೋಗಿ ಸಿಕ್ಕಿಹಾಕಿಕೊಂಡವನ ಹೆಸರು ಮುಖೇಶ್ ಯಾದವ್. ಉತ್ತರಪ್ರದೇಶದ ಘಾಜಿಯಾಬಾದ್ ನಿವಾಸಿಯಾಗಿರುವ ಮುಖೇಶ್ ಯಾದವ್, ತುಂಡ್ಲಾದ ಜರೌಲಿಕಾಲ ಮೋರ್​ನ ರಾಜಾತಾಲ್​ ಚೌಕಿ ಬಳಿ ಇನ್​ಸ್ಪೆಕ್ಟರ್ ಸಮವಸ್ತ್ರ ಧರಿಸಿ ರಾತ್ರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವುದನ್ನು ಚಾಳಿ ಮಾಡಿಕೊಂಡಿದ್ದ. ಈ ಬಗ್ಗೆ ಸಾರ್ವಜನಿಕರು ನೀಡಿದ … Continue reading 180 ಕೆ.ಜಿ. ತೂಕದ ವ್ಯಕ್ತಿ, ಧೋಖಾ ವ್ಯಕ್ತಿತ್ವ: ಖಾಕಿ ಧರಿಸಿ ಹಣ ವಸೂಲಿ ಮಾಡ್ತಿದ್ದ ನಕಲಿ ಇನ್​ಸ್ಪೆಕ್ಟರ್ ಅರೆಸ್ಟ್​