ಬಾಯ್​ಫ್ರೆಂಡ್​ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಆಮೀರ್​ ಖಾನ್​ ಮಗಳು…

ira khan
Published on

ನವದೆಹಲಿ: ಆಮೀರ್ ಖಾನ್ ಪುತ್ರಿ ಇರಾ ಖಾನ್, ನೂಪುರ್ ಶಿಖರೆ ಜೊತೆ ಬಹಳ ಸಮಯದಿಂದ ಡೇಟಿಂಗ್ ನಡೆಸುತ್ತಿದ್ದರು. ಅಂತಿಮವಾಗಿ ಇಂದು (ನ.18) ತಮ್ಮ ಬಾತ್​ಫ್ರೆಂಡ್​ ಜೊತೆ ಇರಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಶುಕ್ರವಾರ ಮುಂಬೈನಲ್ಲಿ ಭಾವಿ ದಂಪತಿಗಳ ನಿಶ್ಚಿತಾರ್ಥ ಸಮಾರಂಭವನ್ನು ನಡೆಸಿದ್ದು ಆಮೀರ್ ಖಾನ್​ ಮಾಜಿ ಪತ್ನಿ ಕಿರಣ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು, ಗಣ್ಯರು ಸೇರಿದ್ದರು.

ಈ ಹಿಂದೆ ಇರಾ ಮತ್ತು ನೂಪುರ್ ಶಿಖರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈಗ ಅವರ ನಿಶ್ಚಿತಾರ್ಥದ ಚಿತ್ರಗಳು ಎಲ್ಲೆಡೆ ಹರಿದಾಡುತ್ತಿವೆ. ಈ ವಿಶೇಷ ದಿನಕ್ಕಾಗಿ ಇರಾ ಖಾನ್ ಕೆಂಪು ಬಣ್ಣದ ಗೌನ್ ತೊಟ್ಟಿದ್ದರು.

ಇರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡಿದ್ದು ವಿಡಿಯೋದಲ್ಲಿ, ನೂಪುರ್ ತನ್ನ ಕೈಯಲ್ಲಿ ಉಂಗುರದೊಂದಿಗೆ ಮೊಣಕಾಲಿನ ಮೇಲೆ ನಿಂತು ಇರಾ ಅವರನ್ನು ಮದುವೆಯಾಗುವಂತೆ ಕೇಳಿದ್ದಾರೆ. ಇದನ್ನು ಕಂಡು ನೆರೆದಿದ್ದ ಎಲ್ಲಾ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದ್ದಾರೆ. ಇರಾ ದೊಡ್ಡದಾಗಿ 'ಹೌದು' ಎಂದು ಹೇಳಿ ನೂಪುರ್​ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net