

America: ಅಮೆರಿಕಾ ಕ್ರಿಶ್ಚಿಯನ್ ರಾಷ್ಟ್ರ, ನಾವೇಕೆ ಈ ಸುಳ್ಳು ಹಿಂದೂ ದೇವರ ಮೂರ್ತಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಟೆಕ್ಸಾಸ್‌ನಲ್ಲಿ ಹನುಮಂತನ ಮೂರ್ತಿ ಬಗ್ಗೆ ರಿಪಬ್ಲಿಕ್ ನಾಯಕ ಅಲೆಕ್ಸಾಂಡರ್ ಡಂಕನ್ ಆಕ್ಷೇಪ ವ್ಯಕ್ತಪಡಿಸಿದ್ದು ವಿವಾದದ ಕಿಡಿ ಹೊತ್ತಿಸಿದೆ.
ಟೆಕ್ಸಾಸ್‌ನ ಶುಗರ್ ಲ್ಯಾಂಡ್ ಪಟ್ಟಣದ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಒಕ್ಕೂಟದ ಪ್ರತಿಮೆ ಎಂದು ಕರೆಯಲ್ಪಡುವ 90 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು 2024ರಲ್ಲಿ ನಿರ್ಮಿಸಲಾಗಿದೆ. ಇದು ಅಮೆರಿಕಾ ಅತ್ಯಂತ ಎತ್ತರದ ಹಿಂದೂ ಸ್ಮಾರಕಗಳಲ್ಲಿ ಒಂದಾಗಿದೆ.
ಈ ಪ್ರತಿಮೆಗೆ ಪ್ರತಿಮೆಗೆ ಆಕ್ಷೇಪಿಸಿ ಅಲೆಕ್ಸಾಂಡರ್ ಡಂಕನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಟೆಕ್ಸಾಸ್‌ನಲ್ಲಿ ಸುಳ್ಳು ಹಿಂದೂ ದೇವರ ಪ್ರತಿಮೆಯನ್ನು ನಾವು ಏಕೆ ಅನುಮತಿಸುತ್ತಿದ್ದೇವೆ? ಇದು ಕ್ರಿಶ್ಚಿಯನ್ ರಾಷ್ಟ್ರ ಎಂದು ಕರೆದು ವಿವಾದವನ್ನು ಹುಟ್ಟು ಹಾಕಿದ್ದಾರೆ.
ಮುಂದುವರೆದು ಬೈಬಲ್ ಅನ್ನು ಉಲ್ಲೇಖಿಸಿ, ನನ್ನನ್ನು ಹೊರತುಪಡಿಸಿ ನಿಮಗೆ ಬೇರೆ ದೇವರು ಇರಬಾರದು. ನೀವು ನಿಮಗಾಗಿ ಯಾವುದೇ ರೀತಿಯ ವಿಗ್ರಹವನ್ನು ಸ್ವರ್ಗದಲ್ಲಿ ಇಲ್ಲ, ಭೂಮಿಯ ಮೇಲೆ ಅಥವಾ ಸಮುದ್ರದಲ್ಲಿ ವಿಗ್ರಹವನ್ನು ಮಾಡಿಕೊಳ್ಳಬಾರದು ಎಂದು ಎಕ್ಸೋಡಸ್ 20:3-4 ಬರೆದಿದ್ದಾರೆ.
ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಲೆಕ್ಸಾಂಡರ್ ಡಂಕನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಹಿಂದೂ ಅಮೆರಿಕನ್ ಫೌಂಡೇಶನ್ ಪ್ರರಿಕ್ರಿಯಿಸಿದ್ದು, ಇದು ಹಿಂದೂ ವಿರೋಧಿ ಮತ್ತು ಪ್ರಚೋದನಕಾರಿ ಹೇಳಿಕೆ ಎಂದು ಕರೆದಿದೆ. ಹಾಗೆಯೆ ಟೆಕ್ಸಾಸ್‌ನ ರಿಪಬ್ಲಿಕನ್ ಪಕ್ಷಕ್ಕೆ ವರದಿ ಮಾಡಿದ್ದು ವಿಷಯದ ಬಗ್ಗೆ ಮಾತನಾಡುವಂತೆ ಒತ್ತಾಯಿಸಿದೆ.
ಎಕ್ಸ್ನಲ್ಲಿ ಹಿಂದೂ ಅಮೇರಿಕನ್ ಫೌಂಡೇಶನ್ ರಿಪಬ್ಲಿಕ್ನ ಪಕ್ಷದ ಖಾತೆಗೆ ಟ್ಯಾಗ್ ಮಾಡಿ "ನಮಸ್ಕಾರ @TexasGOP, ನಿಮ್ಮ ಪಕ್ಷದ ಸೆನೆಟ್ ಅಭ್ಯರ್ಥಿಯು ತಾರತಮ್ಯದ ವಿರುದ್ಧ ನಿಮ್ಮದೇ ಆದ ಮಾರ್ಗಸೂಚಿಗಳನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾರೆ. ಹಿಂದೂ ದೇವರನ್ನು ಅಪಮಾನಿಸಿದ್ದಾರೆ. ಹಿಂದೂ ವಿರೋಧಿ ದ್ವೇಷವನ್ನು ಪ್ರದರ್ಶಿಸಿದ್ದಾರೆ. ಅಮೆರಿಕಾದ ಸಂವಿಧಾನ ಬದ್ದ ಧಾರ್ಮಿಕ ಆಚರಣೆ ಬಗ್ಗೆ ಅಗೌರವ ತೋರಿಸಿದ್ದಾರೆ. ಈ ಬಗ್ಗೆ ಏನು ಕ್ರಮಕೈಗೊಳ್ಳುತ್ತಿರಾ? ಎಂದು ಪ್ರಶ್ನಿಸಿದೆ.
ಡಂಕನ್ ಪೋಸ್ಟ್ಗೆ ಹಲವಾರು ನೆಟ್ಜೆನ್ಗಳು ವಿರೋಧಿಸಿದ್ದು, ಅಮೆರಿಕದ ಸಂವಿಧಾನವು ಯಾವುದೇ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಕಮೆಂಟ್ ಮಾಡ್ತಿದ್ದಾರೆ. (ಏಜೆನ್ಸೀಸ್)