ಫ್ರಾಂಚೈಸಿ ಕ್ರಿಕೆಟ್​​ನಿಂದ ಮಾತ್ರ ಇದು ಸಾಧ್ಯ!; ಅಚ್ಚರಿ ಹೇಳಿಕೆ ನೀಡಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ | Amanda Wellington

amanda wellington
Published on

Amanda Wellington: ಅಂತರರಾಷ್ಟ್ರೀಯ ಪಂದ್ಯಗಳ ಬದಲು, ಫ್ರಾಂಚೈಸಿ ಕ್ರಿಕೆಟ್ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿಕೆ ನೀಡಿ ಸುದ್ದಿಯಲ್ಲಿದ್ದ ಆಸ್ಟ್ರೇಲಿಯಾ ಮಹಿಳಾ ತಂಡದ ಲೆಗ್-ಸ್ಪಿನ್ನರ್ ಅಮಂಡಾ ವೆಲ್ಲಿಂಗ್ಟನ್, ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಾಗಿ ರಾಷ್ಟ್ರೀಯ ಕ್ರಿಕೆಟ್​​ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವೆಲ್ಲಿಂಗ್ಟನ್, ಆಸ್ಟ್ರೇಲಿಯಾ ಪರ ಆಡುವುದು ಅದ್ಭುತ ಅನುಭವ ಮತ್ತು ಸಾಧನೆ. ಆದರೆ, ಪ್ರಪಂಚವನ್ನು ಸುತ್ತಲು, ನಿಮ್ಮ ಇಷ್ಟದ ಆಟ ಆಡಲು ಮತ್ತು ಹಲವಾರು ವಿಭಿನ್ನ ಜನರೊಂದಿಗೆ ಸಂಪರ್ಕ ಸಾಧಿಸಲು ಫ್ರಾಂಚೈಸಿ ಕ್ರಿಕೆಟ್​​ನಿಂದ ಮಾತ್ರ ಸಾಧ್ಯ ಎಂದರು. ಈ ನಿರ್ಧಾರ ತಿಳಿಸುವುದು ತುಂಬಾ ಕಷ್ಟ, ಆದರೆ ಆರೋಗ್ಯದ ದೃಷ್ಠಿಯಿಂದ ಇದು ಅನಿವಾರ್ಯ ಎಂದರು.

ದೇಶೀಯ ಲೀಗ್‌ಗಳಲ್ಲಿ ವೆಲ್ಲಿಂಗ್ಟನ್ ಮಿಂಚು

ಅಮಂಡಾ ವೆಲ್ಲಿಂಗ್ಟನ್ ತಮ್ಮ 15 ನೇ ವಯಸ್ಸಿನಲ್ಲಿಯೇ WNCL ಟೂರ್ನಿಯಲ್ಲಿ ದಕ್ಷಿಣ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. WBBLನಲ್ಲಿ, ಆರಂಭದಿಂದಲೂ ಅಡಿಲೇಡ್ ಸ್ಟ್ರೈಕರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್​​ನಲ್ಲಿ 2016 ರಿಂದ ಆಸ್ಟ್ರೇಲಿಯಾವನ್ನು ಎಲ್ಲಾ ಸ್ವರೂಪಗಳಲ್ಲಿ (14 ಏಕದಿನ, 8 ಟಿ20, 1 ಟೆಸ್ಟ್) ಪ್ರತಿನಿಧಿಸಿ 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವೆಲ್ಲಿಂಗ್ಟನ್ ಫ್ರಾಂಚೈಸಿ ಕ್ರಿಕೆಟ್​​ನಲ್ಲಿ ಸದರ್ನ್ ವೈಪರ್ಸ್, ಒಟಾಗೊ, ಸದರ್ನ್ ಬ್ರೇವ್, ಮ್ಯಾಂಚೆಸ್ಟರ್ ಒರಿಜಿನಲ್ಸ್, ವೆಸ್ಟರ್ನ್ ಸ್ಟಾರ್ಮ್ ಮತ್ತು ಓವಲ್ ಇನ್ವಿನ್ಸಿಬಲ್ಸ್ ಪರ ಆಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net