

ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೋಗಳನ್ನು ಹರಿಬಿಟ್ಟ ಮಾಜಿ ಬಾಯ್ಫ್ರೆಂಡ್ ಭವ್ನಿಂದರ್ ಸಿಂಗ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿರುವ ನಟಿ ಅಮಲಾ ಪೌಲ್, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಹೈಕೋರ್ಟ್ ಸಹ ಮಾನಹಾನಿ ಪ್ರಕರಣ ದಾಖಲಿಸಲು ಅಮಲಾರಿಗೆ ಅನುಮತಿ ನೀಡಿದೆ.
ಫೋಟೋಗಳನ್ನು ಹರಿಬಿಟ್ಟಿರುವ ಮುಂಬೈ ಮೂಲದ ಗಾಯಕ ಭವ್ನಿಂದರ್ ಸಿಂಗ್ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಅಮಲಾರೊಂದಿಗೆ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಮದುವೆ ವಿಚಾರವನ್ನು ಅಮಲಾ ಅಲ್ಲಗೆಳೆದಿದ್ದಾರೆ.
ಫೋಟೋಗಳನ್ನು ಹರಿಬಿಟ್ಟು ಹೆಸರಿಗೆ ಕಳಂಕ ತರುವ ಆರೋಪ ಹಿನ್ನೆಲೆಯಲ್ಲಿ ಭವ್ನಿಂದರ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಮದ್ರಾಸ್ ಹೈಕೋರ್ಟ್ ಮಂಗಳವಾರ (ನ. 03) ಅಮಲಾರಿಗೆ ಅನುಮತಿ ನೀಡಿದೆ. ಭವ್ನಿಂದರ್ ಮತ್ತು ಅಮಲಾ 2018ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ಅಮಲಾ ಸ್ಪಷ್ಟನೆ ನೀಡಿದ್ದು, ಫೋಟೋಗಳನ್ನು ವೃತ್ತಿಪರ ಉದ್ದೇಶಕ್ಕಾಗಿ ತೆಗೆದುಕೊಳ್ಳಲಾಗಿದ್ದು, ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ತನ್ನ ಫೋಟೋಗಳನ್ನು ಪ್ರಕಟಿಸುವುದಕ್ಕೆ ಭವ್ನಿಂದರ್ಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಕಳೆದ ಮಾರ್ಚ್ನಲ್ಲಿ ಅಮಲಾರೊಂದಿಗಿನ ಫೋಟೋವನ್ನು ಭವ್ನಿಂದರ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ತಕ್ಷಣವೇ ವೈರಲ್ ಆಗಿವೆ. ಇದಾದ ಬೆನ್ನಲ್ಲೇ ಫೋಟೋಗಳನ್ನು ಭವ್ನಿಂದರ್ ಡಿಲೀಟ್ ಮಾಡಿದ್ದರು. ಮದುವೆ ಬಗ್ಗೆಯೂ ಯಾವುದೇ ಖಚಿತ ಮಾಹಿತಿ ನೀಡಿರಲಿಲ್ಲ. ಮದುವೆ ವದಂತಿ ಸುಳ್ಳೆಂದು ಸ್ವತಃ ಅಮಲಾ ತೆಲುಗು ಟಿವಿ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದರು. ಸಂದರ್ಶನದ ಪೂರ್ಣ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ಕಿಸಿ. ಡೇಟಿಂಗ್ ಬಗ್ಗೆ ಗುಟ್ಟು ಬಿಚ್ಚಿಟ್ಟ ಅಮಲಾ ಪೌಲ್: 2ನೇ ಮದುವೆಗೆ ಹೆಬ್ಬುಲಿ ಬೆಡಗಿ ತಯಾರಿ
ಆದೈ ಚಿತ್ರಕ್ಕೂ ಮುನ್ನ ಮದುವೆ ಹಾಗೂ ಡಿವೋರ್ಸ್ ವಿಚಾರದಲ್ಲಿ ಹೆಚ್ಚು ಸುದ್ದಿ ಮಾಡಿದ್ದರು. ಇನ್ನು ಕನ್ನಡಿಗರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ ಹೆಬ್ಬುಲಿ ಚಿತ್ರದ ಮೂಲಕ ಅಮಲಾ ಪರಿಚಿತರಾಗಿದ್ದಾರೆ. (ಏಜೆನ್ಸೀಸ್)