ಉಳ್ಳಾಗಡ್ಡಿ-ಖಾನಾಪುರ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ಕ್ಷೇತ್ರಗಳ ಅಭಿವೃದ್ಧಿಗೆ ಬದ್ಧ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಗ್ರಾಮದ ರಾಷ್ಟ್ರೀಯ ಹೆದ್ದಾರಿ-4 ಲೋಕೋಪಯೋಗಿ ಇಲಾಖೆಯ ಲೆಕ್ಕ ಶೀರ್ಷಿಕೆ 5054 ಯೋಜನೆಯಡಿ 1 ಲಕ್ಷ ರೂ. ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಒಳಚರಂಡಿ ಹಾಗೂ ಒಳರಸ್ತೆ ಹಾಗೂ ರೈತ ಸಂಪರ್ಕ ರಸ್ತೆಗಳು ಸೇರಿ ಗ್ರಾಮದ ಹಲವಾರು ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಪಾಟೀಲ ಅವರು ಸಂಸದರಿಗೆ ಮನವಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಪಾಟೀಲ, ರಾಜು ಅವಟೆ, ಸುಧೀರ ಗಿರಿಗೌಡರ, ಪ್ರವೀಣ ಮಾಡ್ಯಾಳ, ಸಂದಿಪ ಪಿ.ಆರ್., ರಾಜು ಧರಗಶೆಟ್ಟಿ, ಎಸ್.ಆರ್.ಮಾಳಗಿ, ಮುರುಗೇಶ ಹಿರೇಮಠ, ಮಹಾರುದ್ರ ಜರಳಿ, ಜಿ.ವಿ.ಕುಲಕರ್ಣಿ, ಹಣಮಂತಗೌಡ ಪಾಟೀಲ, ಸಚಿನ ಹೆಬ್ಬಾಳಿ, ಮಹಾವೀರ ಅವಟೆ ಇತರರಿದ್ದರು.