

ಸುಬ್ರಹ್ಮಣ್ಯ: ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಆಶ್ರಯದಲ್ಲಿ, ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯಮಟ್ಟದ ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟ ಬುಧವಾರ ನಡೆಯಿತು.
ಮಹಿಳೆಯರ ಮತ್ತು ಪುರುಷರ ಎರಡೂ ವಿಭಾಗದಲ್ಲೂ ಆಳ್ವಾಸ್ ಮೂಡುಬಿದಿರೆ ತಂಡವು ಚಾಂಪಿಯನ್ ಆಗಿ ಮೂಡಿ ಬಂತು. ಪುರುಷರ ವಿಭಾಗದಲ್ಲಿ ಆಳ್ವಾಸ್ನ ಚಂದನ್ ಯಾದವ್, ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ನ ಬಸಂತಿ ಕುಮಾರಿ ಪ್ರಥಮ ಸ್ಥಾನಿಯಾದರು. ಎಸ್ಡಿಎಂ ಉಜಿರೆ ತಂಡ ದ್ವಿತೀಯ ಸ್ಥಾನಿಯಾಯಿತು. ಮಹಿಳೆಯರ ವಿಭಾಗದಲ್ಲಿ ಕೆ.ಎಸ್. ಕಾಲೇಜು ತಂಡ ದ್ವಿತೀಯ ಸ್ಥಾನಗಳಿಸಿತು.
ಮಂಗಳೂರು ವಿವಿ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪ್ರಸನ್ನ ಬಿ.ಕೆ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ್ ಯೇನೆಕಲ್ಲು, ರಾಧಾಕೃಷ್ಣ ಎಂ, ರೈಲ್ವೆ ಉದ್ಯೋಗಿ ಬಾಲಭಾಸ್ಕರ್, ರಾಷ್ಟ್ರೀಯ ಕ್ರೀಡಾಪಟು ಗೀತಾಂಜಲಿ ಕಲ್ಲಾಜೆ ಬಹುಮಾನ ವಿತರಿಸಿದರು.
ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸಾಯಿಗೀತಾ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್, ಉಪನ್ಯಾಸಕಿ ಲತಾ ಬಿ.ಟಿ, ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಕೆ. ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ವಿನ್ಯಾಸ್ ಹೊಸೋಳಿಕೆ ಸ್ವಾಗತಿಸಿದರು.