ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ಪುಷ್ಪ-2 ಆಡಿಯೋ, ಒಟಿಟಿ ಹಕ್ಕು!

pushpa 2
Published on

ಹೈದರಾಬಾದ್: ಸುಕುಮಾರ್​ ನಿರ್ದೇಶನದ ಅಲ್ಲು ಅರ್ಜುನ್​-ರಶ್ಮಿಕಾ ಮಂದಣ್ಣ ನಟನೆಯ ಬಹು ನಿರೀಕ್ಷಿತ ಪುಷ್ಒ-2 ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದ್ದು, ಕೆಲ ದಿನಗಳ ಹಿಂದೆ ಪೋಸ್ಟರ್​ ಹಾಗೂ ಟೀಸರ್​ ವಿಚಾರವಾಗಿ ಸದ್ದು ಮಾಡಿದ್ದ ಚಿತ್ರ ಇದೀಗ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕಳೆದ ಕೆಲ ದಿನಗಳ ಟೀಸರ್​ ಮೇಕಿಂಗ್​ ವಿಚಾರವಾಗಿ ಸದ್ದು ಮಾಡಿದ್ದ ಪುಷ್ಪ-2 ಚಿತ್ರ ಇದೀಗ ಆಡಿಯೋ ಹಾಗೂ ಒಟಿಟಿ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ. ಇದಲ್ಲದೆ ಬಿಡುಗಡೆ ಆಗಿರುವ ಟೀಸರ್​ಗೆ ಹಾಕಿರುವ ಬಂಡವಾಳದ ವಿಚಾರವಾಗಿಯೂ ಪುಷ್ಪರಾಜ್​ ಸಖತ್​ ಸೌಂಡ್​ ಮಾಡುತ್ತಿದ್ದಾನೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪುಷ್ಪ-2 ಆಡಿಯೋ ಹಕ್ಕನ್ನು ಪ್ರತಿಷ್ಠಿತ ಟಿ-ಸೀರೀಸ್​ 60 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ವರದಿಯಾಗಿದೆ. ಇದಲ್ಲದೆ ಚಿತ್ರದ ಒಟಿಟಿ ಹಕ್ಕು ನೆಟ್​ಫ್ಲಿಕ್ಸ್​ಗೆ 100 ಕೋಟಿ ರೂಪಾಯಿಗೆ ಮಾರಟವಾಗಿಚದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಚಿತ್ರತಂದ ಅಧಿಕೃತವಾಗಿ ಮಾಹಿತಿ ಪ್ರಕಟಿಸಬೇಕಿದೆ.

ಅಲ್ಲು ಅರ್ಜುನ್​ ಜನುಮದಿನದ ಪ್ರಯುಕ್ತ ಇತ್ತೀಚಿಗೆ ಚಿತ್ರತಂಡ ಟೀಸರ್​ ಬಿಡುಗಡೆ ಮಾಡಿತ್ತು. ಗಂಗಮ್ಮ ತಲ್ಲಿ ಅವತಾರದಲ್ಲಿ ನಟ ಅಲ್ಲು ಅರ್ಜುನ್​ ಮಿಂಚಿದ್ದು, ಈ ಒಂದು ಸೀನ್​ಗಾಗಿ ನಿರ್ಮಾಪಕರು ಸುಮಾರು 60 ಕೋಟಿ ರೂ. ವ್ಯಯಿಸಿದ್ದಾರೆ ಎಂದು ತಿಳಿದು ಬಂದಿದೆ. ಆರು ನಿಮಿಷಗಳ ಸೀನ್​ಅನ್ನು ಸುಮಾರು 30 ದಿನಗಳ ಕಾಲ ಚಿತ್ರೀಕರಿಸಲಾಗಿದ್ದು, ಇದಕ್ಕಾಗಿ ವಿಶೇಷ ಸೆಟ್​ ನಿರ್ಮಿಸಲಾಗಿತ್ತು ಎಂದು ವರದಿಯಾಗಿದೆ.

ಬಿಡುಗಡೆಗೂ ಮುನ್ನ ಒಂದಲ್ಲೊಂದು ವಿಚಾರಕ್ಕೆ ಸಾಕಷ್ಟು ಸದ್ದು ಮಾಡುತ್ತಿರುವ ಪುಷ್ಪ-2 ಚಿತ್ರ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದು, ಇದಕ್ಕೆಲ್ಲಾ ಆಗಸ್ಟ್​ 15ರಂದು ಉತ್ತರ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net