

ಹೈದ್ರಾಬಾದ್: 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಕನ್ನಡ ಚಲನಚಿತ್ರ ಕಾಂತಾರ ಅತ್ಯುತ್ತಮ ಜನಪ್ರಿಯ ಚಲನಚಿತ್ರವನ್ನು ಗೆದ್ದುಕೊಂಡಿತು ಮತ್ತು ಅದರ ನಿರ್ದೇಶಕ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಕುರಿತಾಗಿ ಟಾಲಿವುಡ್ ನಟ ಅಲ್ಲೂ ಅರ್ಜುನ್ ಅವರು ರಿಷಬ್ ಅವರಿಗೆ ಶುಭಕೋರಿದ್ದಾರೆ.
ಕಾಂತಾರ ಚಿತ್ರಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದ ನಂತರ ನಟ ಮತ್ತು ಚಲನಚಿತ್ರ ನಿರ್ಮಾಪಕ ರಿಷಬ್ ಶೆಟ್ಟಿ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಉದ್ಯಮದ ಹಲವಾರು ಪ್ರಸಿದ್ಧ ವ್ಯಕ್ತಿಗಳು ನಟನಿಗೆ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು. ಈ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಗೊಂಡವರು ಬೇರೆ ಯಾರೂ ಅಲ್ಲ ಅಲ್ಲು ಅರ್ಜುನ್.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಲ್ಲೂ ಅರ್ಜುನ್ ಅವರು, ನನಗೆ ಕಳೆದ ವರ್ಷ ಪುಷ್ಪಾ ಸಿನಿಮಾಗೆ ಅವಾರ್ಡ್ ಬಂದಾಗ ನಾನು ಅಂದುಕೊಂಡಿದ್ದೆ ಮುಂದಿನ ವರ್ಷ ಕಾಂತಾರ ಸಿನಿಮಾಗೆ ಈ ಅವಾರ್ಡ್ ಬರಬೇಕು ಎಂದು ನಾನು ಅಂದುಕೊಂಡಿದ್ದೇನು. ರಿಷಬ್ ಅವರಿಗೆ ಈ ಅವಾರ್ಡ್ ಬಂದಿದೆ. ರಿಷಬ್ ಅವರಿಗೆ ಹೃತ್ಪೂರ್ವಕ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಟ್ವೀಟ್ ಮಾಡಿದ ಅಲ್ಲೂ ಅರ್ಜುನ್, “ಎಲ್ಲಾ ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು. ಅರ್ಹವಾದ ಅತ್ಯುತ್ತಮ ನಟ ಪ್ರಶಸ್ತಿಗಾಗಿ @shetty_rishab ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ನನ್ನ ಬಹುಕಾಲದ ಸ್ನೇಹಿತೆ @MenenNithya ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ನೋಡಲು ನನಗೆ ಸಂತೋಷವಾಗಿದೆ. ಇತರ ಎಲ್ಲ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಿಗೂ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲ್ಲೂ ಅರ್ಜುನ್ ಅವರು ಕನ್ನಡ ಸಿನಿಮಾ, ಹಾಗೂ ಕನ್ನಡ ನಟ, ನಟಿಯರಿಗೆ ಪ್ರೋತ್ಸಾಹ ನೀಡುತ್ತಿರುವ ಕುರಿತಾಗಿ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.