ಸುಳ್ಯ: ನಗರ ಪಂಚಾಯಿತಿ ಸದಸ್ಯರೊಬ್ಬರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆಂದು ಮಹಿಳೆಯೋರ್ವರು ಸುಳ್ಯ ಠಾಣೆಗೆ ದೂರು ನೀಡಿ ಟನೆ ಬುಧವಾರ ಸಂಭವಿಸಿದೆ. ಚಂದ್ರಿಕಾ ಎಂಬ ಮಹಿಳೆ ನಗರ ಪಂಚಾಯಿತಿ ಸದಸ್ಯ ಶರೀಫ್ ಕಂಠಿ ಎಂಬುವರ ವಿರುದ್ಧ ದೂರು ನೀಡಿದ್ದಾರೆ.
ಶರೀಫ್ ಕಂಠಿ ಕಾರನ್ನು ಚಂದ್ರಿಕಾ ಅವರ ಬಾಡಿಗೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದನ್ನು ಪ್ರಶ್ನಿಸಿದ ಕಾರಣ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಶರೀಫ್ ಕಂಠಿ ಆರೋಪವನ್ನು ತಳ್ಳಿ ಹಾಕಿದ್ದು ವೈಯಕ್ತಿಕ ದ್ವೇಷದಿಂದ ಮಹಿಳೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವವರು ಸತ್ಯ ಪ್ರಮಾಣಕ್ಕೆ ಬರಲಿ ಎಂದು ತಿಳಿಸಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪೆರಿಯಶಾಂತಿ-ಪೈಚಾರ್, ಗುರುವಾಯನಕೆರೆ -ಬಜಗೋಳಿ ನಡುವೆ ಸ್ಪರ್ ರಸ್ತೆ ನಿರ್ಮಾಣಕ್ಕೆ ಕ್ಯಾ.ಚೌಟ ಮನವಿ
ಸಂಸದ ಕ್ಯಾ. ಚೌಟ ಅವರಿಂದ ಶಾಸಕ ಪೂಂಜ ಜತೆಗೂಡಿ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಭೇಟಿ