

ಚಿಕ್ಕಬಳ್ಳಾಪುರ: ಅಧಿಕಾರ ದುರುಪಯೋಗದ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಇಲ್ಲಿನ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಲೋಕಾಯುಕ್ತ ಎಸ್.ಪಿ ಆಂಟೊನಿ ಜಾನ್ ನೇತೃತ್ವದ ತಂಡವು ಕಡತಗಳನ್ನು ಜಾಲಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಗೆ ದಿಢೀರ್ ದಾಳಿ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ಮತ್ತು ದೂರುದಾರರಿಂದ ಮಾಹಿತಿ ಪಡೆದುಕೊಂಡರು. ಕಚೇರಿಯಲ್ಲಿ ನಿರ್ವಹಣೆಯ ದಾಖಲೆಗಳು, ಅನುದಾನ ಬಿಡುಗಡೆ ಮತ್ತು ಖರ್ಚು, ವಿವಿಧ ಯೋಜನೆಗಳ ಸಾಧನೆಯ ಬಗ್ಗೆ ಪರಿಶೀಲಿಸಿದರು.
ನಿಗಮದಲ್ಲಿ ಫಲಾನುಭವಿಗಳಿಗೆ ಕೊಳವೆ ಬಾವಿಗಳನ್ನು ಕೊರೆಯುವ ವಿಚಾರದಲ್ಲಿ ವ್ಯಾಪಕವಾದ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕೆಲ ಫಲಾನುಭವಿಗಳು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಇದರಿಂದ ಬೆಳಿಗ್ಗೆ ಕಚೇರಿಯ ಬಾಗಿಲು ತೆರೆಯುತ್ತಿದ್ದಂತೆ ಎಸ್ಪಿ ಆಂಟೊನಿ ಜಾನ್ ನೇತೃತ್ವದಲ್ಲಿ ಡಿವೈಎಸ್ಪಿ ವೀರೇಂದ್ರ ಕುಮಾರ್, ಇನ್ಸೆಪೆಕ್ಟರ್ ಶಿವಪ್ರಸಾದ್ ಹಾಗೂ ಸಿಬ್ಬಂದಿ ಗುರು, ಮಂಜುಳಾ, ಸತೀಶ್, ಅರುಣ್, ನಾಗರಾಜ್, ಲಿಂಗರಾಜು ತಂಡವು ಕಾರ್ಯಾಚರಣೆ ಕೈಗೊಂಡಿದೆ. ಶುಕ್ರವಾರ ಸಹ ಇಡೀ ದಿನ ಪರಿಶೀಲನೆ ನಡೆದಿದೆ. ಅರ್ಜಿದಾರರಿಗೆ ಮಂಜೂರಾಗಿ ವರ್ಷಗಳೇ ಕಳೆದರೂ ಕೊಳವೆ ಬಾವಿ ಕೊರೆಸಿಲ್ಲ. ಪ್ರಭಾವಿಗಳಿಗೆ ಮಾತ್ರ ಮಣೆ ಹಾಕಲಾಗುತ್ತಿದೆ. ಅರ್ಹರ ಬಳಿ ಹಣ ಕೇಳಲಾಗುತ್ತಿದೆ ಎಂದು ಕೆಲ ಲಾನುಭವಿಗಳು ಆರೋಪಿಸಿದ್ದಾರೆ.
*ಫಲಾನುಭವಿಗಳಿಂದ ಮಾಹಿತಿ
700 ಕ್ಕೂ ಕಡತಗಳನ್ನು ಪರಿಶೀಲಿಸಿರುವ ಲೋಕಾಯುಕ್ತರು ಸಂಬಂಧಪಟ್ಟ ಲಾನುಭವಿಗಳಿಗೆ ಕರೆ ಮಾಡಿ, ಮಾಹಿತಿ ಸಹ ಪಡೆದುಕೊಂಡಿದ್ದಾರೆ.
ಇದೇ ವೇಳೆ 500 ಅಡಿ ಕೊಳವೆ ಬಾವಿ ಕೊರೆದು 700 ಅಡಿಗೆ ಬಿಲ್, ಫಲಾನುಭವಿಗಳಿಂದ ಉಚಿತವಾಗಿ ಡೀಸೆಲ್ ಪಡೆಯುವುದು, ಹಣ ಕೊಟ್ಟವರಿಗೆ ಮೊದಲ ಆದ್ಯತೆ, ಬಡ ಅರ್ಜಿದಾರರನ್ನು ಅಲೆದಾಡಿಸುವುದು ಸೇರಿದಂತೆ ಹಲವು ದೂರುಗಳು ಕೇಳಿ ಬಂದಿವೆ. ಇನ್ನೂ ೋನ್ ಪೇ ಮೂಲಕ 1 ಸಾವಿರ ರೂ ಮತ್ತು ಕಚೇರಿಯಲ್ಲಿ 50 ಸಾವಿರ ಲಂಚ ಸ್ವೀಕಾರದ ಬಗ್ಗೆ ನೇರವಾಗಿ ದೂರು ಸಲ್ಲಿಕೆಯಾಗಿದೆ. ಇನ್ನು ಕಡತಗಳ ಪರಿಶೀಲನೆಯ ಬಳಿಕ ರಾಜ್ಯ ಲೋಕಾಯುಕ್ತರಿಗೆ ಕಚೇರಿಯಲ್ಲಿ ನಿರ್ವಹಣೆ, ಲೋಪಗಳ ವರದಿ ನೀಡಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.