ಗೀತಾಧ್ಯಯನದಿಂದ ಸಕಲ ಸಮಸ್ಯೆ ನಿವಾರಣೆ

SDP GEETA JAYANTI
Published on

ಸಿದ್ದಾಪುರ: ತಾಲೂಕಿನ ಶ್ರೀ ಮನ್ನೆಲೆಮಾವಿನ ಮಠದಲ್ಲಿ ಆಯೋಜಿಸಿದ್ದ ಗೀತಾಜಯಂತಿ ಕಾರ್ಯಕ್ರಮವನ್ನು ಸಾನ್ನಿಧ್ಯ ವಹಿಸಿದ್ದ ಶ್ರೀ ಮಠದ ಪೀಠಾಧಿಪತಿ ಶ್ರೀ ಮಾಧವಾನಂದ ಭಾರತೀಮಹಾಸ್ವಾಮಿಗಳು ಉದ್ಘಾಟಿಸಿದರು.

ವೈದಿಕರು ಮತ್ತು ಸೀಮೆಯ ಎಲ್ಲ ಭಜನಾ ಮಂಡಳಿಗಳಿಂದ ಆಗಮಿಸಿದ್ದ ಅನೇಕ ಮಾತೆಯರು ಭಗವದ್ಗೀತೆಯ 18 ಅಧ್ಯಾಯಗಳನ್ನು ಪಠಣ ಮಾಡುವ ಮೂಲಕ ಭಗವಂತನ ನಾಮ ಸಂಕೀರ್ತನೆ ಮಾಡಿದರು. ಭಗವದ್ಗೀತೆ ಕುರಿತು ಉಪನ್ಯಾಸ ನೀಡಿದ ವಿದ್ವಾನ್ ಅನಂತಮೂರ್ತಿ ಭಟ್ ಯಲೂಗಾರು ಅವರು ನಿರಂತರ ಗೀತಾಧ್ಯಯನ ಮಾಡಿದರೆ ಮಾನಸಿಕ ನೆಮ್ಮದಿ, ಸಂತೋಷ ದೊರೆಯುತ್ತದೆ. ಅಲ್ಲದೆ, ಜೀವನದಲ್ಲಿ ಬರುವ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದ ಅವರು, ಗೀತೆಯ ಪ್ರತಿಯೊಂದು ಅಧ್ಯಾಯದ ಸಾರವನ್ನು ತಿಳಿಸಿಕೊಟ್ಟರು.

ಶ್ರೀ ಮಾಧವನಂದ ಭಾರತೀ ಮಹಾಸ್ವಾಮಿಗಳು ಎಲ್ಲರಿಗೂ ಆಶೀರ್ವಾದ ಮಂತ್ರಾಕ್ಷತೆ ನೀಡಿದರು. ವಿನಾಯಕ ಭಟ್ ನೆಲೆಮಾವು, ಗಣಪತಿ ಜಿ. ಭಾಗ್ವತ್ ತ್ಯಾರ್ಗಲ್, ಗಿರೀಶ್ ಭಟ್ ಹೊಸ್ತೋಟ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net