ಮಂಡ್ಯ: ಸುಪ್ರೀಂ ಕೋರ್ಟಿನ ತೀರ್ಪಿನಂತೆ ಒಳ ಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯಸಚಿವ ಸಂಪುಟ ಕೈಗೊಂಡಿರುವ ನಿರ್ಣಯವನ್ನು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಸ್ವಾಗತಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದರು.
ಸಿದ್ದರಾಮಯ್ಯ ಅವರು ಮೀಸಲಾತಿಯನ್ನು ವರದಿಯಂತೆ ಜಾರಿ ಮಾಡದೆ ದತ್ತಾಂಶ ಸಂಗ್ರಹಣೆ ನೆಪವೊಡ್ಡಿ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮತ್ತೊಂದು ಆಯೋಗ ರಚಿಸಿರುವುದು ಅನಾವಶ್ಯಕ. ಮಾತ್ರವಲ್ಲದೆ ಕಾಲಹರಣದ ತಂತ್ರವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಹಾವನೂರು ಆಯೋಗದಿಂದ ಮೊದಲ್ಗೊಂಡು ನ್ಯಾಯಮೂರ್ತಿ ಸದಾಶಿವ ಆಯೋಗ, ಕಾಂತರಾಜ ಅಯೋಗ ಹಾಗೂ ಜೆ. ಸಿ. ಮಾಧುಸ್ವಾಮಿ ಸಮಿತಿ ನೀಡಿರುವ ವರದಿಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಸಮುದಾಯದ ಜನಸಂಖ್ಯೆಗೆ ಸಂಬಂಧಿಸಿದ ಮಾಹಿತಿ ಲಭ್ಯವಿದ್ದು, ಅದನ್ನು ಪರಿಗಣಿಸಿ ಒಳಮೀಸಲಾತಿಯನ್ನು ವಿಳಂಬ ಮಾಡದೆ ಜಾರಿಗೆ ತರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಂತೆ ಅತಿ ಹಿಂದುಳಿದ ವರ್ಗಗಳಿಗೆ ಕರ್ನಾಟಕದಲ್ಲಿ ಮೀಸಲಾತಿಯ ಪ್ರಮಾಣದಲ್ಲಿ ಅನ್ಯಾಯವಾಗಿದೆ. ಆದ ಕಾರಣ ಮೇಲ್ಜಾತಿಗಳ ಒತ್ತಡಕ್ಕೆ ಮಣಿಯದ ರಾಜ್ಯ ಸರ್ಕಾರ ಕಾಂತರಾಜ ವರದಿಯನ್ನು ತಕ್ಷಣದಿಂದ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷ ವೆಂಕಟಗಿರಿಯಯ್ಯ, ಸಂಯೋಜಕ ಆರ್.ಮುನಿಯಪ್ಪ, ಆನಂದ, ಅನಿಲ್ಕುಮಾರ್ ಇದ್ದರು.
ಸಚಿವ ಸಂಪುಟದ ನಿರ್ಣಯಕ್ಕೆ ಸ್ವಾಗತ: ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿಕೆ
You Might Also Like
ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars
Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…
ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream
Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…
ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items
Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…