18 ವರ್ಷ ಮೇಲ್ಪಟ್ಟವರಿಗೆಲ್ಲ ಮೇ 1ರಿಂದ ಕರೊನಾ ಲಸಿಕೆ ಲಭ್ಯ! ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

Vaccine
Published on

ನವದೆಹಲಿ : ಮೇ 1 ರಿಂದ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕರೊನಾ ಲಸಿಕೆ ನೀಡಲು ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಹೆಚ್ಚು ಸಡಿಲೀಕೃತವಾದ ಮತ್ತು ತ್ವರಿತವಾದ ಮೂರನೇ ಹಂತದ ಲಸಿಕಾ ಅಭಿಯಾನ ದೇಶಾದ್ಯಂತ ಆರಂಭವಾಗಲಿದೆ ಎನ್ನಲಾಗಿದೆ.

ಲಸಿಕೆ ಉತ್ಪಾದನೆ ಮತ್ತು ಪೂರೈಕೆಗೆ ಹಲವು ಇನ್​​ಸೆಂಟೀವ್​ಗಳನ್ನು ನೀಡಿರುವ ಸರ್ಕಾರ, ಲಸಿಕೆ ಉತ್ಪಾದಕರು ಶೇ. 50 ರಷ್ಟು ಉತ್ಪಾದಿತ ಲಸಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಉಳಿದ ಶೇ. 50 ರಷ್ಟು ಲಸಿಕೆಗಳನ್ನು ರಾಜ್ಯ ಸರ್ಕಾರಕ್ಕೂ, ತೆರೆದ ಮಾರುಕಟ್ಟೆಗೂ ನೇರವಾಗಿ ವಿತರಿಸಬಹುದು ಎಂದು ಹೇಳಿದೆ. ಹೀಗೆ ನೇರವಾಗಿ ವಿತರಿಸಲು ಅವಕಾಶ ನೀಡಿರುವ ಲಸಿಕೆಗಳನ್ನು ಖಾಸಗಿ ಲಸಿಕಾ ಕೇಂದ್ರಗಳು ಬಳಸಿಕೊಂಡು ಮುಂಚೆಯೇ ನಿಗದಿ ಮಾಡಿದ ಬೆಲೆಯಲ್ಲಿ ಎಲ್ಲಾ ವಯಸ್ಕರಿಗೂ.. ಅಂದರೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡಲು ಅವಕಾಶವಿರುತ್ತದೆ.

ಆದರೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಈಗಿನಂತೆಯೇ 45 ವರ್ಷ ಮೇಲ್ಪಟ್ಟವರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಉಚಿತ ಲಸಿಕಾ ಅಭಿಯಾನ ಮುಂದುವರಿಯಲಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net