ನಾವೆಲ್ಲ ದ್ವಿಲಿಂಗಿಗಳು: ಸಂಸದೆ ಡಿಂಪಲ್ ಯಾದವ್ ನನ್ನ ಕ್ರಶ್ ಎಂದ ಸ್ವರಾ ಭಾಸ್ಕರ್ | Bisexual

photo-59-68a5fc03f36e9
Published on: 

Bisexual: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಚಾವಾ ಚಿತ್ರದ ಬಗ್ಗೆ ಸ್ವರಾ ಭಾಸ್ಕರ್ ಮಾಡಿದ ಟ್ವೀಟ್‌ಗಳು ವಿವಾದಕ್ಕೆ ಕಾರಣವಾಗಿದ್ದವು. ಇದರಿಂದಾಗಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಸದಾ ಒಂದಲ್ಲ ಒಂದು ವಿವಾದದಿಂದ ಸುದ್ದಿಯಲ್ಲಿರುವ ಸ್ವರಾ ಭಾಸ್ಕರ್ ಇತ್ತೀಚೆಗೆ ಮತ್ತೊಮ್ಮೆ ಇಂತಹ ಕಾಮೆಂಟ್‌ಗಳಿಂದ ಚರ್ಚೆಯ ವಿಷಯವಾಗಿದ್ದಾರೆ.

ಹೌದು, ''ಪತಿ ಪತ್ನಿ ಔರ್ ಪಂಗಾ - ಜೋಡಿಯೋಮ್ ಕಾ'' ರಿಯಾಲಿಟಿ ಚೆಕ್ ಎಂಬ ರಿಯಾಲಿಟಿ ಶೋನಲ್ಲಿ ತನ್ನ ಪತಿ ಫಹಾದ್ ಅಹ್ಮದ್ ಜೊತೆ ಕಾಣಿಸಿಕೊಂಡಿದ್ದ ನಟಿ, ತಮ್ಮ ಲೈಂಗಿಕ ಜೀವನದ ಬಗ್ಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಎಲ್ಲರೂ ದ್ವಿಲಿಂಗಿಗಳು ಎಂದು ಅವರು ಕಾಮೆಂಟ್ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಮೇಲೆ ತಮಗೆ ಕ್ರಶ್ ಇದೆ ಎಂದು ಅವರು ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಅವರನ್ನು ಭೇಟಿಯಾಗಿದ್ದಾಗಿಯೂ ಅವರು ಹೇಳಿದರು. ಇದೀಗ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಲಿಂಗ ಎಂಬುದು ಸಾವಿರಾರು ವರ್ಷಗಳಿಂದ ನಮ್ಮ ಮೇಲೆ ಬಲವಂತವಾಗಿ ಹೇರಲ್ಪಟ್ಟ ಒಂದು ಸಿದ್ಧಾಂತ ಎಂದು ಸ್ವರಾ ಭಾಸ್ಕರ್ ಹೇಳಿದ್ದಾರೆ. ಈ ಮಾತುಗಳು ವೈರಲ್ ಆಗುತ್ತಿದ್ದಂತೆ ಅನೇಕರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್​)