

Alien : ಜಗತ್ತು ಆಧುನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಮಾನವರು ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಅಂತಹ ಎರಡು ವಿಷಯಗಳು ಏಲಿಯನ್ಸ್ ಮತ್ತು ಮತ್ಸ್ಯಕನ್ಯೆಯರು.
ಮತ್ಸ್ಯಕನ್ಯೆಯರು ಏಲಿಯನ್ಸ್ಗಿಂತ ಮೊದಲು ಮಾನವರು ಚರ್ಚಿಸಿದ ಜೀವಿಗಳು. ಅನೇಕ ಪ್ರಾಚೀನ ಐತಿಹಾಸಿಕ ಕಥೆಗಳಲ್ಲೂ ಈ ಜೀವಿಗಳ ಬಗ್ಗೆ ಹೇಳಲಾಗಿದೆ. ಮತ್ಸ್ಯಕನ್ಯೆಯರು ಅರ್ಧ ಮಾನವ ಮತ್ತು ಅರ್ಧ ಮೀನುಗಳಾಗಿರುವ ಜೀವಿಗಳು ಎಂಬುದು ಎಲ್ಲರಿಗೂ ಗೊತ್ತಿದೆ.
ಈಗ ಮತ್ಸ್ಯಕನ್ಯೆಯಂತೆ ಕಾಣುವ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಮೆಲಿಸ್ಸಾ ಹಾಲ್ಮನ್ ಎಂಬ ಮಹಿಳೆ ಈ ಫೋಟೋಗಳನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಅಸಾಮಾನ್ಯ ಜೀವಿಯ ಅಸ್ಥಿಪಂಜರವು ಇಂಗ್ಲೆಂಡ್‌ನ ಆಗ್ನೇಯ ಕರಾವಳಿಯ ಮಾರ್ಗರೇಟ್ ಬೀಚ್‌ನಲ್ಲಿ ಕಂಡುಬಂದಿದೆ.
ಪೌಲಾ ರೇಗನ್ ಮತ್ತು ಅವರ ಪತಿ ಡೇವ್ ಮಾರ್ಗರೇಟ್ ಬೀಚ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರು ಅಸ್ಥಿಪಂಜರವನ್ನು ಗಮನಿಸಿದ್ದಾರೆ. ಕಡಲಕಳೆಯೊಂದಿಗೆ ಅಸ್ಥಿಪಂಜರವು ಕೂಡ ತೇಲಿಬಂದಿದೆ. ಇದು ವಿಚಿತ್ರವಾದ ತಲೆ ಮತ್ತು ದೇಹವನ್ನು ಹೊಂದಿದ್ದು ಅದು ಮನುಷ್ಯನಿಗಿಂತ ಮೀನಿನಂತಿದೆ ಎಂದು ಪೌಲಾ ಹೇಳುತ್ತಾರೆ.
ಮೊದಲ ನೋಟದಲ್ಲಿ ಅದು ಅಸ್ಥಿಪಂಜರವಾಗಿರಬಹುದು ಎಂದು ಪೌಲಾ ರೇಗನ್ ಭಾವಿಸಿದ್ದರು. ಆದರೆ, ಅದು ಅಸ್ಥಿಪಂಜರವಲ್ಲ ಎಂದಿದ್ದಾರೆ. ಕೊಳೆಯುವ ಯಾವುದೇ ಲಕ್ಷಣಗಳಿಲ್ಲ ಎಂದಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅನೇಕ ಮಂದಿ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.
ಇದು ಅನ್ಯಲೋಕದ ಜೀವಿ ಅಥವಾ ಮತ್ಸ್ಯಕನ್ಯೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇದು ಎಡಿಟ್ ಮಾಡಿರುವ ಫೋಟೋದಂತೆ ಕಾಣುತ್ತಿದೆ ಎಂದಿದ್ದಾರೆ. ಅಲ್ಲದೆ, ಎಐನಿಂದ ರಚಿಸಿರುವ ಫೋಟೋ ಇರಬಹುದು ಎಂದು ಇನ್ನು ಕೆಲವರು ಶಂಕಿಸಿದ್ದಾರೆ. (ಏಜೆನ್ಸೀಸ್)