

ನವದೆಹಲಿ: ಆಲಿಯಾ ಭಟ್(Alia Bhatt) ಮತ್ತು ವೇದಾಂಗ್ ರೈನಾ ಅಭಿನಯದ . ಜಿಗ್ರಾ ಗುರುವಾರ(ಅ.10) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಹಳ ದಿನಗಳಿಂದ ಸುದ್ದಿಯಲ್ಲಿದ್ದ ಈ ಚಿತ್ರ ರಿಲೀಸ್ ಗೂ ಮುನ್ನ ಕಾನೂನಾತ್ಮಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ಬಾಂಬೆ ಹೈಕೋರ್ಟ್ ತೀರ್ಪಿನಿಂದಾಗಿ ಸಿನಿಮಾಗೆ ಬಿಗ್ ರಿಲೀಫ್ ಸಿಕ್ಕಿದೆ.
ಆಲಿಯಾ ಭಟ್ ಅವರ ಚಲನಚಿತ್ರಕ್ಕೆ ಶೀರ್ಷಿಕೆ ಕದಿಯಲಾಗಿದೆ ಎಂದು ಆರೋಪಿಸಲಾಗಿತ್ತು. ರಾಜಸ್ಥಾನದ ವ್ಯಕ್ತಿಯೊಬ್ಬರು ಟ್ರೇಡ್‌ಮಾರ್ಕ್ ಕಾಯ್ದೆಯಡಿ ನಿರ್ಮಾಪಕರು ಶೀರ್ಷಿಕೆಯನ್ನು ಕದ್ದಿದ್ದಾರೆ ಎಂದು ಆರೋಪಿಸಿ, ಪ್ರಕರಣ ದಾಖಲಿಸಿದ್ದರು. ಚಿತ್ರದ ಬಿಡುಗಡೆಯನ್ನು ತಡೆಹಿಡಿಯುವಂತೆ ನ್ಯಾಯಾಲಯಕ್ಕೆ ಒತ್ತಾಯಿಸಿದ್ದರು. ಜೋಧ್‌ಪುರದ ವಾಣಿಜ್ಯ ನ್ಯಾಯಾಲಯವು ಚಿತ್ರದ ಬಿಡುಗಡೆಯನ್ನು ನಿಷೇಧಿಸಿ ಆದೇಶ ನೀಡಿತ್ತು.
ನಂತರ, ತಯಾರಕರು ರಾಜಸ್ಥಾನ ಹೈಕೋರ್ಟ್ ಅನ್ನು ಸಂಪರ್ಕಿಸಿದರು. ತಮ್ಮದೇ ಆದ ಟ್ರೇಡ್ ಮಾರ್ಕ್ ನೋಂದಣಿಯನ್ನು ಉಲ್ಲೇಖಿಸಿದರು. ಧರ್ಮ ಪ್ರೊಡಕ್ಷನ್ಸ್ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಬಲಿಯಾ, ಮೇಲ್ಮನವಿದಾರರು ಯಾವುದೇ ರೀತಿಯ ಸರಕು ಅಥವಾ ಸೇವೆಗಳನ್ನು ವ್ಯಾಪಾರ ಮಾಡುತ್ತಿಲ್ಲ, ಇದರಿಂದಾಗಿ ಚಲನಚಿತ್ರವನ್ನು ನಿರ್ಮಿಸುವ ಮೂಲಕ ಟ್ರೇಡ್‌ಮಾರ್ಕ್ ಕಾಯ್ದೆಯನ್ನು ಉಲ್ಲಂಘಿಸಬಹುದು ಎಂದು ವಾದಿಸಿದರು.
ರಾಜಸ್ಥಾನ ಹೈಕೋರ್ಟ್ ಕೆಳ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ, ಜಿಗ್ರಾ ಪರವಾಗಿ ತೀರ್ಪು ನೀಡಿತು. ನ್ಯಾಯಮೂರ್ತಿಗಳಾದ ಪುಷ್ಪೇಂದ್ರ ಸಿಂಗ್ ಭಾಟಿ ಮತ್ತು ಮುನ್ನೂರಿ ಲಕ್ಷ್ಮಣ್ ಅವರ ಪೀಠವು ಚಲನಚಿತ್ರದ ಹೆಸರು ಸರಕು ಮತ್ತು ಸೇವೆಗಳ ಟ್ರೇಡ್‌ಮಾರ್ಕ್ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದೆ. ಇದಾದ ಬಳಿಕ ನಿಗದಿತ ದಿನಾಂಕದಂದು ಜಿಗ್ರಾ ಬಿಡುಗಡೆಯಾಗಿತ್ತು.