

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಸುದೀರ್ಘ ಎರಡು ತಿಂಗಳ ಬಳಿಕ ಮತ್ತೆ ಶೂಟಿಂಗ್ಗೆ ಮರಳುತ್ತಿದ್ದಾರೆ. ಕರೊನಾ ಸೋಂಕಿನ ಪ್ರಕರಣ ಇಳಿಕೆ ಆಗುತ್ತಿದ್ದಂತೆ, ಒಪ್ಪಿಕೊಂಡ ಎರಡು ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಆ ಎರಡು ಸಿನಿಮಾಗಳು ಇಷ್ಟೊತ್ತಿಗಾಗಲೇ ಬಿಡುಗಡೆಗೆ ಸಿದ್ಧವಾಗಿರುತ್ತಿದ್ದವು. ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿವೆ.
ಈ ಮೊದಲೇ ಸುದ್ದಿಯಾದಂತೆ ಮೊದಲಿಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ಆಲಿಯಾ ಭಾಗವಹಿಸಲಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಗಂಗೂಬಾಯಿ ಕಥೈವಾಡಿ ಚಿತ್ರದ ಹಾಡೊಂದರ ಶೂಟಿಂಗ್ ಬಾಕಿ ಉಳಿದಿದ್ದು, ಆ ಕೆಲಸವನ್ನು ಮೊದಲಿಗೆ ಮುಗಿಸಿಲಿದ್ದಾರೆ. ಅದಾದ ಬಳಿಕ ಆರ್ಆರ್ಆರ್ ತಂಡ ಸೇರಿಕೊಳ್ಳಲಿದ್ದಾರೆ.
ಗಂಗೂಬಾಯಿ ಚಿತ್ರದ ಕೇವಲ ಎರಡು ದಿನಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಅದು ಮುಗಿಯುತ್ತಿದ್ದಂತೆ ನೇರವಾಗಿ ಜುಲೈ 1ರಿಂದ ಹೈದರಾಬಾದ್ ನಲ್ಲಿ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ತಂಡ ಕೂಡಿಕೊಳ್ಳಲಿದ್ದಾರೆ. ಅಲ್ಲಿಂದ ಮುಂದಿನ ಎರಡು ವಾರಗಳ ಕಾಲ ಶೂಟಿಂಗ್ ನಡೆಯಲಿದೆ.