'ಈ ಸಲ ಕಪ್ ನಮ್ದೆ' ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ

ale
Published on

ಲಂಡನ್: ಕರೊನಾ ಬಿಕ್ಕಟ್ಟಿನ ನಡುವೆಯೂ 14 ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿ ಭಾರತದಲ್ಲಿ ಆರಂಭವಾಗಿದೆ. ಎಂದಿನಂತೆ ಈ ಐಪಿಎಲ್​ನಲ್ಲಿಯೂ 'ಈ ಸಲ ಕಪ್ ನಮ್ದೆ' ಎಂದು ಆರ್​ಸಿಬಿ ಅಭಿಮಾನಿಗಳ ಅಬ್ಬರ ಜೋರಾಗಿದೆ.

ಏತನ್ಮದ್ಯೆ ಆರ್​ಸಿಬಿ ಹಾಗೂ ಕನ್ನಡ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಅಲೆಗ್ಸಾಂಡ್ರಾ ಹಾರ್ಟಲಿ ಅವರು ಈ ಸಲ ಕಪ್ ನಮ್ದೆ ಎಂದು ಕನ್ನಡದಲ್ಲೇ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.

ಈ ಮೂಲಕ ಈ ಸಲ ಕಪ್ ನಮ್ದೆ ಎಂಬ ಕೂಗಿಗೆ ಅಲೆಗ್ಸಾಂಡ್ರಾ ಅವರು ಬಲ ತುಂಬಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟರ್ ಆಗಿರುವ ಅಲೆಗ್ಸಾಂಡ್ರಾ ಆರ್​ಸಿಬಿಯ ಪಕ್ಕಾ ಅಭಿಮಾನಿಯಾಗಿದ್ದಾರೆ. ಈ ಸಲ ಕಪ್ ನಮ್ದೆ ಎಂದು ಕನ್ನಡದಲ್ಲಿ ಬರೆದು ಹಾರ್ಟ್ ಸಿಂಬಾಲ್ ಹಾಕಿರುವ ಅವರ ಟ್ವೀಟ್​ಗೆ 14 ಸಾವಿರ ಲೈಕ್ಸ್​ ಹರಿದು ಬಂದಿವೆ.

ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದಿರುವ ಆರ್​ಸಿಬಿ ಪೈನಲ್ ಪಂದ್ಯವನ್ನೂ ಗೆದ್ದು ಈ ಸಲ ಕಪ್ ನಮ್ದೆ ಎನ್ನುತ್ತಾ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net